ಎಂ ಸ್ಯಾಂಡ್ ಸಾಗಾಟ : ಆರ್ಟಿಓ, ಗಣಿ ಇಲಾಖೆ ಅಧಿಕಾರಿಗಳು ಡೋಂಟ್ ಕೇರ್…!

ಆ ಜಿಲ್ಲೆಯಲ್ಲಿ ಪ್ರಭಾವಿಗಳು ಆಡಿದ್ದೇ ಆಟವಾಗಿದೆ. ಅವ್ರ ಆಟಕ್ಕೆ ಆ ಜಿಲ್ಲೆಯಲ್ಲಿ ಎಂ ಸ್ಯಾಂಡ್ ಹಾವಳಿ (ಕೃತಕ ಮರಳು) ತೀವ್ರವಾಗಿದೆ. ಕಾನೂನು ಮೀರಿ ಓವರ್ ಲೋಡ್ ಸಾಗಾಟ ಎಗ್ಗಿಲ್ಲದೇ ನಡೆಸಿದ್ದಾರೆ. ಪರ್ಮಿಟ್ ಗಿಂತಲೂ ಮೂರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಎಂ ಸ್ಯಾಂಡ್ ಲೂಟಿ ನಡೆದಿದೆ. ಅಕ್ರಮಕ್ಕೆ ಬ್ರೇಕ್ ಹಾಕಬೇಕಿದ್ದ ಗಣಿ ಹಾಗೂ ಆರ್ಟಿಓ ಅಧಿಕಾರಿಗಳು ಮಾತ್ರ ಗಪ್ ಚುಪ್ ಆಗಿದ್ದಾರೆ. ಓವರ್ ಲೋಡ್ ನಿಂದ್ ರಸ್ತೆಗಳು ಹಳ್ಳ ಹಿಡಿದಿದ್ದು ಜನ್ರು ಆಕ್ರೋಶಕ್ಕೆ ಕಾರಣವಾಗಿದೆ…

ಕಾನೂನು ಮೀರಿ ನಿತ್ಯ ಓಡಾಡುತ್ತಿರೋ ಎಂ ಸ್ಯಾಂಡ್ ಟಿಪ್ಪರ್ ಸಾಗಾಟ…! ಕಾನೂನು ಬಾಹಿರ ‌ಲೂಟಿ ನಡೆದ್ರೂ ಆರ್ಟಿಓ, ಗಣಿ ಇಲಾಖೆ ಅಧಿಕಾರಿಗಳು ಡೋಂಟ್ ಕೇರ್…! ಎಸ್.. ಈ ಎಲ್ಲ ಅಕ್ರಮ ಲೂಟಿ ನಡೆದಿರೋದು ಗದಗ ಜಿಲ್ಲೆಯಲ್ಲಿ. ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ 50ಕ್ಕೂ ಅಧಿಕ ಕಲ್ಲು ಗಣಿಗಾರಿಕೆ,10ಕ್ಕೂ ಹೆಚ್ಚು ಕ್ರಷರ್ ಘಟಕಗಳು ಇವೆ. ಈ ಎಲ್ಲವೂ ಪ್ರಭಾವಿ ವ್ಯಕ್ತಿಗಳಗೆ ಸೇರಿದ ಕ್ರಷರ್ ಘಟಕಗಳು. ಹೀಗಾಗಿ ನಾವು ಆಡಿದ್ದೇ ಆಟ ಅನ್ನೋ ರೀತಿಯಲ್ಲಿ ವರ್ತನೆ ನಡೆದಿದೆ. ಇನ್ನೂ ಎಂ ಸ್ಯಾಂಡ್ ಹಾವಳಿ ಜೋರಾಗಿದೆ. ಸರ್ಕಾರಿ ಕಾಮಗಾರಿಗಳಿಗೆ ಮರಳು ಬದಲಿಗೆ ಎಂ ಸ್ಯಾಂಡ್ ಹೆಚ್ಚಾಗಿ ಬಳಸಲಾಗುತ್ತದೆ. ಆದ್ರೆ ಇಲ್ಲಿ ಸಾಗಾಟ ಮಾಡೋ ಎಂ ಸ್ಯಾಂಡ್ ನಲ್ಲಿ ಕಾನೂನು ಬಾಹಿರ ನಡೆದಿದೆ.

ಅಕ್ರಮ ಗೋತ್ತಿದ್ರು ಆರ್ಟಿಓ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ಕಳೆದ ಒಂದು ವಾರದಲ್ಲಿ ೩ ಟೀಫರ್ ಹಿಡಿದು ಎಮ್.ಸ್ಯಾಂಡ್ ಕೇಸ್ ಹಾಕಿ ಗಪ್ ಚುಪ್ ಆಗಿದ್ದಾರೆ… ಇನ್ನೂ ಓವರ್ ಲೋಡ್ ಗೆ ಬ್ರೇಕ್ ಹಾಕಬೇಕಿದ್ದ ಆರ್ಟಿಓ ಅಧಿಕಾರಿ ಮಾತ್ರ ಕ್ಯಾರೆ ಎಂದಿಲ್ಲ. ಇನ್ನೂ ಇಡೀ ವರ್ಷದ ಆರ್ಟಿಓ ಓವರ್ ಲೋಡ್ ಕೇಸ್ ಹಾಕಿದ್ದು ಮಾತ್ರ ಕಡಿಮೆ. ನಿತ್ಯ ನೂರಾರು ಟಿಪ್ಪರ್ ಸಾಗಾಟದ ಬಗ್ಗೆ ಜನ್ರು ದೂರು ನೀಡಿದ್ರು ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಇದು ಜನ್ರ ಆಕ್ರೋಶಕ್ಕೆ ಕಾರಣವಾಗಿದೆ. ಪರ್ಮಿಟ್ ಕಿಂತಲೂ ಮೂರು ಪಟ್ಟು ಹೆಚ್ಚುವರಿ ಎಂ ಸ್ಯಾಂಡ್ ಲೂಟಿ ನಡೆದಿದೆ. ಕಲ್ಲು ಕ್ರಷರ್ ಘಟಕಗಳಿಲ್ಲಿ ನಡೀತಿದೆ ಸರ್ಕಾರಕ್ಕೆ ತೆರಿಗೆ ವಂಚನೆ ನಡೆದಿದೆ ಅಂತ ಜನ್ರ ಆರೋಪಿಸಿದ್ದಾರೆ..

ಇನ್ನೂ ಓವರ್ ಲೋಡ್ ಕಾನೂನು ಬಾಹಿರ ಅಪಾರ ಪ್ರಮಾಣದಲ್ಲಿ ‌ಲೂಟಿ ನಡೆದ್ರು ಜಿಲ್ಲಾಡಳಿತ ಗಪ್ ಚುಪ್ ಆಗಿದೆ. ಇನ್ನೂ ಓವರ್ ಲೋಡ್ ಸಾಗಾಟದಿಂದ ರಸ್ತೆಗಳು ಸಂಪೂರ್ಣವಾಗಿ ಹಳ್ಳ ಹಿಡಿದಿವೆ. ಈ ಕ್ರಷರಗಳಿಂದ ಮಾಗಡಿ ಕೆರೆಗೆ ನಿತ್ಯ ದೂಳು ಮಿಶ್ರಿತವಾಗುತ್ತಿದೆ. ಇದರಿಂದ ನೀರು ಕಲುಷಿತ ಆಗಿ ಜನ್ರಿಗೆ ಚರ್ಮ ರೋಗ ಕಾಡುತ್ತಿವೆ. ದನ ಕರುಗಳಿಗೆ ರೋಗಗಳು ಬರುತ್ತಿವೆ ಅಂತ ಜನ್ರ ಆರೋಪಗಳು ಇವೆ. ಇನ್ನೂ ಈ ಬಗ್ಗೆ ಗಣಿ ಇಲಾಖೆ ಉಪನಿರ್ದೇಶಕ ರಾಜೇಶ್ ಅವ್ರನ್ನು ಕೇಳಿದ್ರೆ ಹೇಳೋದು ಹೀಗೆ..

ಗದಗ ಜಿಲ್ಲೆಯಾದ್ಯಂತ ನಡೆಯುತ್ತಿರುವ ಕೆಲವು ಪ್ರಭಾವಿಗಳ‌ ಕ್ರಷರ್ ಗಳಿಂದ ಎಮ್ ಸ್ಯಾಂಡ್ ಓವರ್ ಲೋಡ್ ಹೊಡೆಯುತ್ತಿದ್ದಾರೆ ಕಾನೂನು ಬಾಹಿರವಾಗಿದ್ರು. ಅಧಿಕಾರಿಗಳು ಕಾಟಚಾರಕ್ಕೆ ಒಂದು ಎರಡು ಕೇಸ್ ಹಾಕಿ ಸುಮ್ಮನೆ ಕುರಬಾರದು.. ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಳ್ಳಲ ಬೇಕು ಎಂದು ಸಾರ್ವಜನಿಕರ ಒತ್ತಾಸೆಯಾಗಿದೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights