ಕಾನೂನು ಸುವ್ಯವಸ್ಥೆಯಲ್ಲಿ ಉತ್ತಮ‌ ಸಾಧನೆ : ಗಬ್ಬೂರು ಠಾಣೆ ರಾಜ್ಯಕ್ಕೆ ಫರ್ಸ್ಟ್ ರ‌್ಯಾಂಕ್

ಇದು ಚಿಕ್ಕ ಗ್ರಾಮದ ಪೊಲೀಸ್ ಠಾಣೆ, ಈ ಠಾಣೆಯು ಈಗ ರಾಜ್ಯ ಹಾಗು ದೇಶದಲ್ಲಿ ಪ್ರಸಿದ್ದಿ ಪಡೆಯುವಂತೆ ಮಾಡಿದೆ. ಇದಕ್ಕೆ ಕಾರಣ ಕೇಂದ್ರ ಸರಕಾರ ಬಿಡುಗಡೆ‌ ಮಾಡಿದ ಕಾನೂನು ಸುವ್ಯವಸ್ಥೆಯಲ್ಲಿ ಉತ್ತಮ‌ ಸಾಧನೆ ಮಾಡಿದ್ದಕ್ಕಾಗಿ.

ರಾಯಚೂರು ಜಿಲ್ಲೆಯ ದೇವದುರ್ಗಾ ತಾಲೂಕಿನ‌ ಗಬ್ಬೂರ ಪೊಲೀಸ್ ಠಾಣೆ ಇಂದು‌ ರಾಜ್ಯದಲ್ಲಿ ಗಮನ ಸೆಳೆಯುವಂತೆ ಮಾಡಿದೆ, ಕೇಂದ್ರ ಸರಕಾರದ ಗೃಹ ಇಲಾಖೆಯು ಪ್ರತಿ ವರ್ಷ ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಉತ್ತಮ‌ವಾಗಿ ಪಾಲಿಸಿದ ಠಾಣೆಯನ್ನು ಗುರುತಿಸಿ ಟಾಪ್ ೧೦ ಹಾಗು ಟಾಪ್ ೨೦ ಶ್ರೇಣಿಯನ್ನು ನೀಡುತ್ತಿದೆ, ಅದರಂತೆ ಗಬ್ಬೂರು ಠಾಣೆಯು ಟಾಪ್ ೧೭ ನೆಯ ಸ್ಥಾನ ಪಡೆದಿದ್ದು ರಾಜ್ಯದಲ್ಲಿ ಈ ಠಾಣೆ ಪ್ರಥಮ ಶ್ರೇಣಿ ಪಡೆದಿದೆ.

ಗಬ್ಬೂರು ಠಾಣೆಯಲ್ಲಿ ೨೦೧೯-೨೦ ನೆಯ ಸಾಲಿನಲ್ಲಿ ಒಟ್ಟು ೮೮ ಪ್ರಕರಣಗಳು ದಾಖಲಾಗಿದ್ದು ಈ ಪ್ರಕರಣಗಳನ್ನು ಸಕಾಲಕ್ಕೆ ಇತ್ಯಾರ್ಥಗೊಳಿಸಿದೆ, ಮಕ್ಕಳು ಮಹಿಳೆಯರ ರಕ್ಷಣೆ, ಜನಸ್ನೇಹಿ ಪೊಲೀಸ್ ಠಾಣೆಯಾಗುವಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಕೇಂದ್ರದ ಸಮಿಕ್ಷೆ ತಂಡವು ಠಾಣೆ ಹಾಗು ಸಾರ್ವಜನಿಕರ ಮಾಹಿತಿ ಆಧಾರಿಸಿ ಶ್ರೇಣಿ ನೀಡಿದೆ, ಕೇಂದ್ರ ಸರಕಾರವು ಗುಜರಾತ್ ನ ಕಚ್ ನಲ್ಲಿ ೨೦೧೫ ರಲ್ಲಿ ನಡೆದ‌ ಹಿರಿಯ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಿದಂತೆ ಈ ವರ್ಷ ಗ್ರಾಂಟ್ ತೋರಾಟನ್ ಸಂಸ್ಥೆಯ ಮಾನದಂಡದ ಆಧಾರದಲ್ಲಿ‌ ಬ್ಯುರೋ ಆಪ್ ಪೊಲೀಸ್ ಡೆವಲ್ಪಮೆಂಟ್ ಮಾನದಂಡವನ್ನು ಅನುಸರಿಸಿ ದೇಶದ ೧೫೫೭ ಪೊಲೀಸ್ ಠಾಣೆಗಳಲ್ಲಿ ಸಮಿಕ್ಷೆ ನಡೆಸಿ ಶ್ರೇಣಿಯನ್ನು ನೀಡುತ್ತಿದೆ.

ರಾಯಚೂರು ಜಿಲ್ಲೆಯು ಇದೇ ಪ್ರಥಮ ಬಾರಿಗೆ ದೇಶದಲ್ಲಿ ೧೭ ನೆಯ ಶ್ರೇಣಿ ಪಡೆದಿದ್ದು ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗು ಜನರು ಗಬ್ಬೂರು ಠಾಣೆಯ ಪೊಲೀಸರಿಗೆ ಶಬ್ಬಾಶ್ ಎನ್ನುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights