ಮುಂದುವರಿದ ಪಾಸ್ಟ್ಯಾಗ್ ಗೊಂದಲ : ನಿಲ್ಲದ ವಾಹನ ಸವಾರರ ಪರದಾಟ

ವಾಹನ ಸವಾರರ ಒಳಿತಿಗೆಂದು ಕೇಂದ್ರ ಸರ್ಕಾರ ಹೆದ್ದಾರಿ ಟೋಲ್ಗಳಲ್ಲಿ ಜಾರಿಗೆ ತರಲು ಹೊರಟಿರುವ ನಗದು ರಹಿತ ಪಾಸ್ಟ್ಯಾಗ್ ವ್ಯವಸ್ಥೆ ಇನ್ನೂ ಸಹ ಗೊಂದಲದ ಗೂಡಾಗಿದೆ. ಅಗತ್ಯ ಸಿದ್ದತೆ ಮಾಡಿಕೊಳ್ಳದೆ ಪಾಸ್ಟ್ಯಾಗ್ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದ್ದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಪಾಸ್ಟ್ಯಾಗ್ ಸ್ಟಿಕ್ಕರ್ಗಾಗಿ ಇಂದಿಗು ಸಹ ಪರದಾಡುತ್ತಿದ್ದಾರೆ.

ಪಾಸ್ಟ್ಯಾಗ್ಗಾಗಿ ಹೆದ್ದಾರಿ ಪ್ರಾಧಿಕಾರದ ಎಲೆಕ್ಟ್ರಾನಿಕ್ ಸಿಟಿ ಕಛೇರಿ ಮತ್ತು ಅತ್ತಿಬೆಲೆ ಟೋಲ್ಗಳ ಬಳಿ ವಾಹನ ಸವಾರರು ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿಬಿಟ್ಟಿದೆ. ಹೆದ್ದಾರಿ ಟೋಲ್ಗಳ ಬಳಿ ವಾಹನ ಸವಾರರು ಸುಂಕ ಪಾವತಿಸಲು ಅನಗತ್ಯವಾಗಿ ನಿಲ್ಲಬಾರದು ಎಂದು ಪಾಸ್ಟ್ಯಾಗ್ ವ್ಯವಸ್ಥೆ ಜಾರಿಗೆ ಕೇಂದ್ರ ಮುಂದಾಗಿತ್ತು. ಪಾಸ್ಟ್ಯಾಗ್ ಮಾಡಿಸಿಕೊಳ್ಳಲು ಗಡುವು ಸಹ ನೀಡಿತ್ತು. ಆದ್ರೆ ಗಡುವು ಮುಗಿದು ಮತ್ತೆ ವಿಸ್ತರಿಸಿದ್ರು ಪಾಸ್ಟ್ಯಾಗ್ ಸ್ಟಿಕ್ಕರ್ ಅಭಾವ ವಾಹನ ಸವಾರರಿಗೆ ಇನ್ನಿಲ್ಲದಂತೆ ಕಾಡುತ್ತಿದೆ‌. ಹೆಚ್ಚಿನ ವಾಹನ ಸವಾರರಿಗೆ ಪಾಸ್ಟ್ಯಾಗ್ ಇನ್ನೂ ಸಿಕ್ಕಿಲ್ಲ ಎನ್ನುತ್ತಾರೆ ವಾಹನ ಸವಾರ ಷಣ್ಮುಗಂ.

ಕಳೆದ ಒಂದು ವಾರದಿಂದ ಅಲೆದಾಡಿದ್ರು ಪಾಸ್ಟ್ಯಾಗ್ ಸ್ಟಿಕ್ಕರ್ ದೊರೆಯುತ್ತಿಲ್ಲ. ನಾಳೆ ಬನ್ನಿ ಇವತ್ತು ಬನ್ನಿ ಅಂತಾರೆ. ಕೊನೆಗೆ ಒಂದು ವಾರ, ಹದಿನೈದು ದಿನದ ಬಳಿಕ ನಿಮ್ಮ ಮನೆಗೆ ಪೋಸ್ಟ್ ಮೂಲಕ ಕಳುಹಿಸಲಾಗುವುದು ಎಂದು ಸಬೂಬುಗಳನ್ನು ಹೇಳ್ತಾರೆ. ಈಗಾಗಲೇ ಪಾಸ್ಟ್ಯಾಗ್ ಸ್ಟಿಕ್ಕರ್ ಪಡೆದುಕೊಂಡಿದ್ದರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರುತ್ತಿದ್ದು, ಸರಿಪಡಿಸುವಂತೆ ಹಲವು ಬಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬಳಿ ಅಲೆದಾಡಿದ್ರು ಪ್ರಯೋಜನವಾಗಿಲ್ಲ. ಈಗ ಮತ್ತೊಂದು ಪಾಸ್ಟ್ಯಾಗ್ ಪಡೆಯಲು ಬಂದಿದ್ದೆನೆ. ಈಗ ಹತ್ತಾರು ದಾಖಲೆಗಳನ್ನು ಕೇಳುತ್ತಾರೆ. ಸರ್ಕಾರ ಮಾಡಿರುವ ಕಾನೂನು ತಪ್ಪು ಈ ಹಿಂದೆ ಇದ್ದ ವ್ಯವಸ್ಥೆಯೇ ಉತ್ತಮವಾಗಿತ್ತು. ಕನಿಷ್ಠ ಕಾನೂನು ಮಾಡುವ ಮೊದಲು ಸೂಕ್ತ ವ್ಯವಸ್ಥೆ ರೂಪಿಸಿ ಇಂತಹ ಕಾನೂನು ಮಾಡಬೇಕಿತ್ತು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಹನ ಸವಾರರ ವೆಂಕಟೇಶ್ ಆಕ್ರೋಶ ಹೊರ ಹಾಕಿದ್ದಾರೆ.

ಆದ್ರೆ ವಾಹನ ಸವಾರರು ಪಾಸ್ಟ್ಯಾಗ್ ಸ್ಟಿಕ್ಕರ್ಗಾಗಿ ಪರದಾಟ ನಡೆಸುತ್ತಿದ್ದರೆ. ಇತ್ತ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಪಾಸ್ಟ್ಯಾಗ್ ವಿತರಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ದಾಖಲೆಗಳ ಪರಿಶೀಲನೆ ಮತ್ತು ಪಾಸ್ಟ್ಯಾಗ್ ಜೊತೆ ಆಧಾರ್ ಕಾರ್ಡ್ ಮತ್ತು ಆರ್ ಸಿ ಲಿಂಕ್ ಮಾಡಲು ಕಾಲಾವಕಾಶ ತೆಗೆದುಕೊಳ್ಳುತ್ತದೆ. ಪಾಸ್ಟ್ಯಾಗ್ ಉಚಿತವಾಗಿ ನೀಡಲಾಗುತ್ತಿದ್ದು, ಪ್ರಾರಂಭದಲ್ಲಿ 150 ರೂಪಾಯಿ ಠೇವಣಿ ರೀತಿಯಲ್ಲಿ ಇಡಬೇಕಾಗುತ್ತದೆ ಎನ್ನುತ್ತಾರೆ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿ ಬಲದೇವ್ ಸಿಂಗ್, ಬಿಇಟಿಪಿಎಲ್, ಹಿರಿಯ ಅಧಿಕಾರಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights