1500 ಫೇಸ್ ಮಾಸ್ಕ್ ನಿಂದ ತಯಾರಾದ ವೆಡ್ಡಿಂಗ್ ಗೌನ್ : ಫೋಟೋ ವೈರಲ್..!

ಒಂದು ವರ್ಷದ ಬಳಿಕ ಅಮೇರಿಕಾ ಕೋವಿಡ್ -19 ಲಾಕ್‌ಡೌನ್ ನಿಂದ ಹೊರಬರುತ್ತಿದ್ದಂತೆ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಯುಕೆಯಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿರುವುದರಿಂದ ದಂಪತಿಗಳು ತಮ್ಮ ವಿವಾಹ ಸಮಾರಂಭಕ್ಕೆ ಅವರು ಬಯಸಿದಷ್ಟು ಅತಿಥಿಗಳನ್ನು ಆಹ್ವಾನಿಸಬಹುದು.

ಹೀಗಾಗಿ ಈ ವಿಶೇಷ ದಿನದಂದು ಡಂಪ್ ಮಾಡಿದ ಮುಖವಾಡಗಳೊಂದಿಗೆ ಬೆರಗುಗೊಳಿಸುವ ಮದುವೆಯ ಡ್ರೆಸ್ ರೆಡಿ ಮಾಡಲಾಗಿದೆ. ಈ ವೆಡ್ಡಿಂಗ್ ಗೌನ್‌ ಸಾಮಾಜಿಕ ಜಾಲಾತಾಣದಲ್ಲಿ ಭಾರೀ ವೈರಲ್ ಆಗಿದೆ.

ಡಿಸೈನರ್ ಟಾಮ್ ಸಿಲ್ವರ್‌ವುಡ್ 1,500 ಮುಖವಾಡಗಳನ್ನು ಬಳಸಿ ವೈಟ್ ವೆಡ್ಡಿಂಗ್ ಗೌನ್ ತಯಾರಿಸಿದ್ದು ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಉಡುಪನ್ನು ಮಾಡೆಲ್ ಜೆಮಿಮಾ ಹ್ಯಾಂಬ್ರೊ ಧರಿಸಿ ಲಂಡನ್‌ನ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್‌ನ ಬಳಿ ಫೋಟೋ ಪೋಸ್ ನೀಡಿದ್ದಾರೆ. ವೆಡ್ಡಿಂಗ್ ಪ್ಲಾನರ್ ವೆಬ್‌ಸೈಟ್ ಹಿಚ್ಡ್ ಟಾಮ್ ಸಿಲ್ವರ್‌ವುಡ್ ವೆಡ್ಡಿಂಗ್ ಗೌನ್‌ಗೆ ಹಣ ಹೂಡಿದೆ.

“ಲಾಕ್‌ಡೌನ್ ಸರಾಗವಾಗುತ್ತಿದ್ದಂತೆ ಜುಲೈ 19 ರಂದು ಯುಕೆ ನಲ್ಲಿ ‘ಸ್ವಾತಂತ್ರ್ಯ ದಿನ’ ಆಚರಿಸಲು ನಾವು ಈ ಸುಂದರ ಮದುವೆಯ ಡ್ರೆಸ್‌ಗೆ 1500 ಮುಖವಾಡಗಳನ್ನು ಬಳಸಿದ್ದೇವೆ ”ಎಂದು ಟಾಮ್ ಸಿಲ್ವರ್‌ವುಡ್ ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ.

ವೆಡ್ಡಿಂಗ್ ಗೌನ್ ಚಿತ್ರಗಳನ್ನು ಇಲ್ಲಿ ನೋಡಿ:

 

Spread the love

Leave a Reply

Your email address will not be published. Required fields are marked *