ಮೊದಲ ಬಾರಿಗೆ ರಾಜೀನಾಮೆಯ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ…!

ಸ್ವತ: ಮುಖ್ಯಮಂತ್ರಿ ಯಡಿಯೂರಪ್ಪ ಮೊದಲ ಬಾರಿಗೆ ರಾಜೀನಾಮೆಯ ಸುಳಿವು ಕೊಟ್ಟಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “75 ವರ್ಷ ದಾಟಿದವರಿಗೆ ಈವರೆಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಕೊಟ್ಟಿಲ್ಲ. ಆದರೆ ನನಗೆ ಕೊಟ್ಟಿದ್ದಾರೆ. ಇದೀಗ ರಾಷ್ಟ್ರೀಯ ನಾಯಕರು ಯಾವ ಕೆಲಸ ಕೊಡುತ್ತಾರೋ ನಾನು ಆ ಕೆಲಸ ನಡೆಸಿಕೊಂಡು ಹೋಗುತ್ತೇನೆ. ಹೈಕಮಾಂಡ್ ಹೇಳಿದಂತೆ ನಡೆದುಕೊಂಡು ಹೋಗುತ್ತೇನೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ನನ್ನ ತೀರ್ಮಾನ. ಜುಲೈ 25 ಕ್ಕೆ ಹೈಕಮಾಂಡ್ ನಿಂದ ಸಂದೇಶ ಬರಲಿದೆ. ಅವರ ಸಂದೇಶದಂತೆ ನಡೆದುಕೊಳ್ಳುತ್ತೇನೆ” ಎಂದಿದ್ದಾರೆ.

‘ನಾಳೆಗೆ ನಾನು ಅಧಿಕಾರಕ್ಕೆ ಬಂದು 2 ವರ್ಷ ಆಗುತ್ತದೆ. 26ನೇ ತಾರೀಕು ನಮ್ಮ ಸಾಧನೆ ಬಗ್ಗೆ ವಿಶೇಷ ಕಾರ್ಯಕ್ರಮ ಇದೆ. ಪಕ್ಷದ ಎಲ್ಲಾ ಕಾರ್ಯಕರ್ತರು, ಮಠಾಧೀಶರ ಬೆಂಬಲ ಸಿಕ್ಕಿದೆ. ಇದುವರೆಗೆ ರಾಜಕೀಯದಲ್ಲಿ ಯಾರಿಗೂ ಇಷ್ಟು ಮಟ್ಟದ ಬೆಂಬಲ ಸಿಕ್ಕಿಲ್ಲ. ಹೈಕಮಾಂಡ್ ಆದೇಶಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಹೇಳಿದ್ದಾರೆ.

‘ನನ್ನ ಪರವಾಗಿ ಹೇಳಿಕೆ ಕೊಡುವುದು ಬೇಡ. ನನ್ನ ಪರವಾಗಿ ಪ್ರತಿಭಟನೆ, ಚಳುವಳಿ ಮಾಡೋದು ಸರಿಯಲ್ಲ. ಯಾವುದೇ ಪ್ರತಿರೋಧ ಬೇಡ. ಯಾವುದೇ ಗೊಂದಲ ಮಾಡಿಕೊಳ್ಳುವುದೇ ನನಗೆ ಸಹಕಾರ ಕೊಡಬೇಕು ಎಂದು ಕಾರ್ಯಕರ್ತರಿಗೆ, ಎಲ್ಲಾ ಜನಾಂಗದ ಮಠಾಧಿಗಳಿಗೆ ನನ್ನ ಕೈ ಮುಗಿದು ಕೇಳಿಕೊಳ್ಳುತ್ತೇನೆಂದು’ ಮನವಿ ಮಾಡಿಕೊಂಡಿದ್ದಾರೆ.

ಇವರ ಹೇಳಿಕೆ ನಿಜವಾಗಲೂ ಆಶ್ಚರ್ಯ ಮೂಡಿಸಿದ್ದು, ಯಡಿಯೂರಪ್ಪ ರಾಜೀನಾಮೆಗೆ ಬೇಕಾದ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಹೈಕಮಾಂಡ್ ಆದೇಶ ಕೊಟ್ಟಂತೆ ರಾಜೀನಾಮೆ ಕೊಡಬಹುದು ಎಂಬಂತೆ ಗೋಚರಿಸುತ್ತಿದೆ.

Spread the love

Leave a Reply

Your email address will not be published. Required fields are marked *