ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ 50 ಲಕ್ಷ ಭಾರತೀಯರು ಸಾವು: ರಾಹುಲ್‌ಗಾಂಧಿ

ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ 50 ಲಕ್ಷ ನಮ್ಮ ಸಹೋದರ, ಸಹೋದರಿಯು,ತಂದೆ-ತಾಯಿಯರು ಬಲಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಭಾರತದಲ್ಲಿ ಕೊರೊನಾ ಸೋಂಕಿನಿಂದಾಗಿ ಜೂನ್‌ ತಿಂಗಳವರೆಗೆ 4.9 ದಶಲಕ್ಷ (49 ಲಕ್ಷ) ಜನರು ಸಾವನ್ನಪ್ಪಿದ್ದಾರೆ ಎಂದು ವಾಷಿಂಗ್ಟನ್ ಮೂಲದ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್‌ಮೆಂಟ್‌ ವರದಿಯಲ್ಲಿ ಹೇಳಿದೆ. ಈ ವರದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ರಾಹುಲ್‌ಗಾಂಧಿ, ಕೇಂದ್ರ ಸರ್ಕಾರವು ತನ್ನ ತಪ್ಪು ನಿರ್ಧಾರಗಳಿಂದ 50 ಲಕ್ಷ ಭಾರತೀಯರನ್ನು ಕೊಂದಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ರೈತರ ಹೋರಾಟದ ವಿಚಾರದ ಬಗ್ಗೆ ಮತ್ತೊಂದು ಟ್ವೀಟ್‌ ಮಾಡಿರುವ ರಾಹುಲ್‌ಗಾಂಧಿ, “ಕೃಷಿ ಕಾಯ್ದೆಗಳ ವಿರುದ್ದದ ಹೋರಾಟದಲ್ಲಿ ಜೀವ ಕಳೆದುಕೊಂಡ ರೈತರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡುವುದಕ್ಕೂ ನಿರಾಕರಿಸಿದೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವವರ ಕಣ್ಣೀರಲ್ಲಿ ಎಲ್ಲವೂ ದಾಖಲಾಗಿದೆ” ಎಂದು ಹೇಳಿದ್ದಾರೆ.

ಆದರೆ, ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ, 4,,14,000 ಕ್ಕೂ ಹೆಚ್ಚು ಕೊರೊನಾ ಸಾವುಗಳು ಸಂಭವಿಸಿವೆ ಎಂದು ಹೇಳಿದೆ.

ಇದನ್ನೂ ಓದಿ: ಕೊರೊನಾ ಸಮಯದಲ್ಲಿ ದೇಶದಲ್ಲಿ 49 ಲಕ್ಷ ಸಾವುಗಳು ಸಂಭವಿಸಿವೆ: ಅಧ್ಯಯನ ವರದಿ

Spread the love

Leave a Reply

Your email address will not be published. Required fields are marked *