ಪೋರ್ನ್‌ ಬಿಸಿನೆಸ್‌ನಿಂದ ರಾಜ್‌ ಕುಂದ್ರಾ ದಿನಕ್ಕೆ 8 ಲಕ್ಷ ರೂ. ಗಳಿಸುತ್ತಿದ್ದರು: ಮುಂಬೈ ಪೊಲೀಸ್‌

ಅಶ್ಲೀಲ ಚಿತ್ರಗಳನ್ನು ರಚಿಸುವುದು ಮತ್ತು ಮೊಬೈಲ್ ಆ್ಯಪ್‌ಗಳ ಮೂಲಕ ಅದನ್ನು ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ವ್ಯವಹಾರದಿಂದ ರಾಜ್‌ ಕುಂದ್ರಾ ಅವರು ಪ್ರತಿದಿನ 6-8 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದರು ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ ವಿಭಾಗ) ಮಿಲಿಂದ್ ಭರಂಬೆ ಅವರು ತಿಳಿಸಿದ್ದಾರೆ.

ರಾಜ್‌ ಕುಂದ್ರಾ ಅವರು ಯುಕೆ ಮೂಲದ ಬ್ರದರ್-ಇನ್‌-ಲಾ ಪ್ರದೀಪ್ ಬಕ್ಷಿಯ ಕೆನ್ರಿನ್ ಲಿಮಿಟೆಡ್ ಜೊತೆ ಕೈಜೋಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

“ರಾಜ್ ಕುಂದ್ರಾ ಅವರು ಭಾರತದಿಂದ ವೀಡಿಯೊಗಳನ್ನು ಹಾಟ್‌ಶಾಟ್ ಎಂಬ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲು ಸಾಧ್ಯವಾಗದ ಕಾರಣ, ಅವರು ಅವುಗಳನ್ನು ವೆಟ್ರಾನ್ಸ್‌ಫರ್ ಮೂಲಕ ವಿದೇಶಿ ಪ್ಲಾಟ್‌ಫಾರ್ಮ್‌ಗೆ ಕಳುಹಿಸುತ್ತಿದ್ದರು” ಎಂದು ಪೊಲೀಸ್‌ ಆಯುಕ್ತ ಹೇಳಿದ್ದಾರೆ.

“ಮುಂಬೈ ಪೊಲೀಸರು ತಮ್ಮ ತನಿಖೆಯ ಸಮಯದಲ್ಲಿ ಹಾಟ್‌ಶಾಟ್ ಚಿತ್ರಗಳು, ವಿಡಿಯೋ ತುಣುಕುಗಳು ಮತ್ತು ವಾಟ್ಸಾಪ್ ಚಾಟ್‌ಗಳು ಸೇರಿದಂತೆ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ರಾಜ್ ಅವರು ವ್ಯವಹಾರದಿಂದ ಪ್ರತಿದಿನ ಸುಮಾರು 6-8 ಲಕ್ಷಗಳನ್ನು ಗಳಿಸುತ್ತಿದ್ದರು. ಹಣಕಾಸಿನ ವಹಿವಾಟಿನ ದಾಖಲೆಗಳು ಸಾವಿರಾರು ಸಂಖ್ಯೆಯಲ್ಲಿವೆ. ನಿಖರವಾದ ಗಳಿಕೆಯನ್ನು ಪಡೆಯಲು ನಾವು ವಿವರಗಳನ್ನು ವಿಶ್ಲೇಷಿಸುತ್ತಿದ್ದೇವೆ. ಇದನ್ನು ಅಪರಾಧದ ಆದಾಯವೆಂದು ಪರಿಗಣಿಸಲಾಗುತ್ತದೆ. ಇಲ್ಲಿಯವರೆಗೆ ನಾವು ವಿವಿಧ ಖಾತೆಗಳಲ್ಲಿ 7.5 ಕೋಟಿ ರೂಗಳನ್ನು ಸ್ಥಗಿತಗೊಳಿಸಿದ್ದೇವೆ” ಎಂದು ಭರಂಬೆ ತಿಳಿಸಿದ್ದಾರೆ.

ವೆಬ್ ಶೋಗಳಲ್ಲಿ ಅವಕಾಶ ನೀಡುವ ನೆಪದಲ್ಲಿ ಸಣ್ಣ ನಟರನ್ನು ಆಮಿಷಕ್ಕೆ ಒಳಪಡಿಸಲಾಗಿದೆ. ಅವರನ್ನು ಬೋಲ್ಡ್‌ ಸೀನ್‌ಗಳಲ್ಲಿ ನಟಿಸುವಂತೆ ಕೇಳಲಾಗಿದೆ. ಅವರ ಇಚ್ಛೆಗೆ ವಿರುದ್ದವಾಗಿ ಅರೆ-ನಗ್ನ ಮತ್ತು ನಗ್ನ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಅವರಲ್ಲಿ ಕೆಲವರು ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಈ ಹಿಂದೆ ಭರಂಬೆ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದರು.

ಇದನ್ನೂ ಓದಿ: ದಲಿತ ಮಹಿಳೆಯ ಸಾವು : ಮೂವರು ಪೊಲೀಸರು ಸೇವೆಯಿಂದ ವಜಾ..!

Spread the love

Leave a Reply

Your email address will not be published. Required fields are marked *