ಫ್ಯಾಕ್ಟ್‌ಚೆಕ್: ಮಂಗಳೂರಿನಲ್ಲಿ ಬಜರಂಗದಳ ಮತ್ತು ಶ್ರೀರಾಮಸೇನೆ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯಿತೆ?

“ಮಂಗಳೂರು ಕಟೀಲು ದೇವಸ್ಥಾನದಲ್ಲಿ ರಥ ಎಳೆಯುವ ವಿಚಾರಕ್ಕೆ ಸಂಬಂಧಿಸಿ ಬಜರಂಗದಳ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಜಟಾಪಟಿಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತಿಪಾದಿಸುವ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಫೇಸ್‌ಬುಕ್ ಮತ್ತು ವಾಟ್ಸಪ್‌ಗಳಲ್ಲಿ ಇದೇ ಹೇಳಿಕೆಯೊಂದಿಗೆ ಶೇರ್ ಮಾಡಲಾಗಿದೆ.

 

ಮಂಗಳೂರಿನಲ್ಲಿ ರಥ ಎಳೆಯುವ ವಿಚಾರಕ್ಕೆ ಬಜರಂಗದಳ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ ಎಂಬ ಸುದ್ದಿಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು Ensuddi.com  ಕರೆ ಮಾಡಿ ಈ ಸುದ್ದಿ ನಿಜವೆ ? ತಿಳಿಸಿ ಎಂದು ವಿನಂತಿಸಿದ್ದರು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮದಲ್ಲಿ  ಹಂಚಿಕೊಳ್ಳಲಾದ ವಿಡಿಯೋ ಮತ್ತು ಹೇಳಿಕೆಯ ಪೋಸ್ಟ್‌ಅನ್ನು ಪರಿಶೀಲಿಸಿದಾಗ ವಿಡಿಯೊದಲ್ಲಿ ಬೆಂಕಿಯ ಪಂಜುಗಳನ್ನಿಡಿದು ಪರಸ್ಪರ ಹೆಸೆದಾಡುಕೊಳ್ಳುತ್ತಿರುವ ವಿಡಿಯೋದಲ್ಲಿ ಕಾಣುವ ದೃಶ್ಯಗಳು ಬಜರಂಗದಳ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ಹೊಡೆದಾಡುತ್ತಿರುವ ದೃಶ್ಯಗಳಲ್ಲ. ಅದು ದಕ್ಷಿಣ ಕನ್ನಡ ಜಿಲ್ಲೆಯ ಆದಿ ದೇವತೆಯಾದ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಜಾತ್ರಾಮಹೋತ್ಸವದ ಆಚರಣೆ ಎಂದು ತಿಳಿದು ಬಂದಿದೆ.

ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದೇ ರೀತಿಯ ದೃಶ್ಯಗಳನ್ನು ಹೋಲುವ ಹಲವು ವಿಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ವಿಡಿಯೋಗಳಲ್ಲಿ ಕಾಣುವ ದೃಶ್ಯಗಳು ಕಟೀಲು ಶ್ರೀದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ಸೆರೆ ಹಿಡಿದಿರು ದೃಶ್ಯಗಳಾಗಿವೆ ಎಂದು ಖಚಿತವಾಗಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಬೆಂಕಿ ಹೋರಾಟ ನಡೆಯುತ್ತದೆ. ಈ ಆಟವು ಅತ್ತೂರು ಮತ್ತು ಕೊಡೆತ್ತೂರು ಎಂಬ ಎರಡೂ ಗ್ರಾಮದ ಜನರು ಎದುರೆದುರಾಗಿ ನಿಂತು ಬೆಂಕಿಯ ಜ್ವಾಲೆಗಳಿರುವ ದೀವಟಿಗೆಯನ್ನು ಒಬ್ಬರಿಗೊಬ್ಬರು ಎಸೆಯುತ್ತಾರೆ. ಆದರೆ, ಇಲ್ಲಿಯವರೆಗೆ ಈ ಬೆಂಕಿಯ ಕೊಳ್ಳಿಯ ಹೋರಾಟದಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಕನಿಷ್ಟ ಅವರು ತೊಟ್ಟ ಬಟ್ಟೆಗೂ ಬೆಂಕಿ ತಗುಲಿದ ಉದಾಹಣೆಗಳಿಲ್ಲ.

ಈ ಬೆಂಕಿಯ ಆಟ ದೇವರಿಗೆ ಬಲು ಇಷ್ಟ ಎಂಬುದು ಭಕ್ತರ ನಂಬಿಕೆ. ದುಷ್ಟ ಶಕ್ತಿಗಳನ್ನು ಸಂಹರಿಸಿದ ದೇವಿಯನ್ನು ಸಂತೃಪ್ತಿಪಡಿಸಲು ಈ ರೀತಿಯ ಆಟವನ್ನು ಹಿಂದಿನ ಕಾಲದಲ್ಲಿ ಆಡಿದ್ದರು ಎನ್ನುವ ಕಥೆ ಇದೆ. ಹೀಗಾಗಿ ಈಗಲೂ ಈ ಬೆಂಕಿಯ ಹೋರಾಟವನ್ನು ಸ್ಥಳೀಯರು ನಡೆಸಿಕೊಂಡು ಬರುತ್ತಿದ್ದಾರೆ.

ಜಾತ್ರೆ ಸಂದರ್ಭದಲ್ಲಿ ಮಾತ್ರ ನಡೆಯುವ ಹರಕೆಯ ರೂಪದ ಈ ಕೊಳ್ಳಿಯ ಹೋರಾಟದಲ್ಲಿ ಭಾಗವಹಿಸುವ ಎರಡೂ ತಂಡಗಳಿಗೆ ದೇವರ ಪ್ರಸಾದ ನೀಡಲಾಗುತ್ತದೆ. ಭಕ್ತರು ದೇವಿಯ ಕುಂಕುಮವನ್ನು ಮೈಗೆ ಲೇಪಿಸಿಕೊಳ್ಳುತ್ತಾರೆ. ದೇವಳದ ಸಮೀಪದ ಗುಡ್ಡವೊಂದರಲ್ಲಿ ಮೊದಲ ಸುತ್ತಿನ ಬೆಂಕಿಯ ಹೋರಾಟ ನಡೆಯುತ್ತದೆ. ನಂತರ ದೇವಸ್ಥಾನದ ಮುಂಭಾಗದಲ್ಲಿ ಹೋರಾಟ ನಡೆಯುತ್ತದೆ..

ಈ ಬೆಂಕಿಯಾಟ ಸಾಂಕೇತಿಕ ಹೋರಾಟವಾಗಿದ್ದರೂ, ಇಲ್ಲಿ ಭಾಗವಹಿಸುವ ತಂಡದವರು ಆವೇಶದಿಂದ ನಿಜವಾದ ವೈರಿಗಳಂತೆ ಹೋರಾಟ ನಡೆಸುತ್ತಾರೆ. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗುವುದೂ ಇದೆ. ಇವರನ್ನು ನಿಯಂತ್ರಿಸಲೆಂದೇ ಗ್ರಾಮದ ಹಿರಿಯರೂ ಇರುತ್ತಾರೆ. ಮೂರು ಬಾರಿ ಈ ರೀತಿ ಬೆಂಕಿ ಎಸೆಯುವಾಗ ಯಾರು ಹಿಂದಕ್ಕೆ ಸರಿಯುತ್ತಾರೋ ಅವರು ಸೋಲುತ್ತಾರೆ. ಹಾಗಾಗಿ ಗೆಲ್ಲುವ ಛಲದಿಂದಲೇ ಹೋರಾಟ ನಡೆಸುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ಅತ್ತೂರು ಮತ್ತು ಕೊಡೆತ್ತೂರು ಗ್ರಾಮದವರ ನಡುವೆ ನಡೆಯುವ ಬೆಂಕಿ ಹೋರಾಟದ ದೃಶ್ಯಾವಳಿಗಳನ್ನು ಬಜರಂಗದಳ ಮತ್ತು ಶ್ರೀರಾಮಸೇನೆ ಕಾರ್ಯಕರ್ತರು ರಥ ಎಳೆಯುವ ವಿಚಾರಕ್ಕೆ ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರಗೆ ದಾಖಲಾಗಿದ್ದಾರೆ ಎಂದು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು..


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮಳಲಿಪೇಟೆ ಜುಮ್ಮಾ ಮಸೀದಿಯಲ್ಲಿ ದೇವಸ್ಥಾನವಿದೆ ಎಂದು ಸುಳ್ಳು ಹೇಳಿದ ಬಲಪಂಥಿಯರು!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights