ಸೋಲಿನ ಬಳಿಕ ಜೆಡಿಎಸ್ ಮುಖಂಡರಿಂದ ಆತ್ಮಾವಲೋಕನ ಸಭೆ…

ಇತ್ತೀಚೆಗೆ ನಡೆದ ಕೆ.ಆರ್.ಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸೋತು ಕ್ಷೇತ್ರ ಕಳೆದು ಕೊಂಡಿತ್ತು.ಜೆಡಿಎಸ್ ಭದ್ರಕೋಟೆಯಲ್ಲಿ ಸೋಲಿನ‌ ಬಳಿಕ ಚುನಾವಣೆ ಉಸ್ತುವಾರಿ ಹೊತ್ತಿದ್ದ JDS ವರಿಷ್ಠರು ಇಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ಆತ್ಮಾವಲೋಕನ ಸಭೆ ನಡೆಸಿ ಕಾರ್ಯಕರ್ತರಿಗೆ ಆತ್ಮವಿಶ್ವಾಸ ಮೂಡಿಸಿದ್ರು.

ಹೌದು! ಜೆಡಿಎಸ್ ನ ಭದ್ರಕೋಟೆ ಮಂಡ್ಯದಲ್ಲಿ ಈ ಬಾರಿಯ ಉಪ ಚುನಾವಣೆಯಲ್ಲಿ ಸೋತು ಮುಖಭಂಗ ಅನುಭವಿಸಿತ್ತು. ಕ್ಷೇತ್ರ ಕಳೆದುಕೊಂಡ ಸೋಲಿನ ಬಳಿಕ ಎಚ್ಚೆತ್ತ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಜೆಡಿಎಸ್ ನಾಯಕ ರೇವಣ್ಣ ನೇತೃತ್ವದಲ್ಲಿ ಇಂದು‌ಕೆ.ಆರ್.ಪೇಟೆ ಪಟ್ಟಣದ ಸಮುದಾಯ ಭವನದಲ್ಲಿ ಸೋಲಿನ ಆತ್ಮಾಲೋಕನ‌ ಸಭೆ  ನಡೆಸಿದ್ರು. ದೀಪ ಬೆಳಗಿಸಿ ಸಭೆ ಆರಂಭವಾಗುತ್ತಿದ್ದಂತೆ ಕಾರ್ಯಕರ್ತರು ಸೋಲಿನ‌ ಹತಾಸೆಯಿಂದ ಜೆಡಿಎಸ್ ನಾಯಕರು ಮತ್ತು ಮುಖಂಡರ ವಿರುದ್ದ ಕಿಡಿ ಆಕ್ರೋಶ ಹೊರ ಹಾಕ್ತಿದಂತೆ ಶಾಸಕರಾದ ರೇವಣ್ಣ ಮತ್ತು ಪುಟ್ಟರಾಜು ಸಮಧಾ‌ನ ಮಾಡಿದ್ರು.

ಇನ್ನು ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಮೇಲುಕೋಟೆ ಶಾಸಕ ಪುಟ್ಟರಾಜು ಈ ಬಾರಿಯ ಸೋಲಿಗೆ ನಮ್ಮ ಅತಿಯಾದ ಆತ್ಮವಿಶ್ವಾಸ ಕಾರಣ. ನಾವು ನಂಬಿದ್ದ ಹೋಬಳಿಗಳ ಜನರೇ ನಮಗೆ ಮೋಸ ಮಾಡಿದ್ರು.ಈ ಬಾರಿ ಚುನಾವಣೆಯಲ್ಲಿ ದುಡ್ಡು ಈ ಮಟ್ಟಿಗೆ ಕೆಲಸ ಮಾಡಿದೆ. ಜನ್ರು ನೀಡಿರೋ ಜನಾದೇಶವನ್ನು ನಾವು ಗೌರವಿಸಬೇಕಿದೆ.ಯಾ
ರ್ಯಾರ ಪರವಾಗಿ ನಾವು ಕೆಲಸ ಮಾಡಿದ್ವೋ ಅವ್ರಿಂದ್ಲೇ ನಾವು ನೋವುಂಡಿದ್ದೀವಿ. ಕಾರ್ಯಕರ್ತರ್ಯಾರು ಕೂಡ ಈ ಸೋಲಿನಿಂದ ಹತಾಶರಾಗಬಾರದು.ಸೋಲಿನಿಂದ ನಾವು ಕುಂದಿಲ್ಲ ಸ್ಥೈರ್ಯಕಳೆದುಕೊಂಡಿಲ್ಲ.ನಾವು ಸೋತರು ಈ ಕ್ಷೇತ್ರದ ಅಭಿವೃಧ್ಧಿ ಮಾಡ್ತಿವಿ ಎಂದು ಕಾರ್ಯಕರ್ತರಿಗೆ ಧೈರ್ಯದ ಆತ್ಮ ವಿಶ್ವಾಸ ತುಂಬಿದ್ರು.

ಇನ್ನು ಸಭೆಯಲ್ಲಿ ಮಾತನಾಡಿದ ಚುನಾವಣೆ ಉಸ್ತುವಾರಿ ಹೊತ್ತಿದ್ದ ಶಾಸಕ ರೇವಣ್ಣ ಮೊದಲು ಕಾರ್ಯಕರ್ತರಿಗೆ ಸೋಲಿನ ಹತಾಸೆಯಲ್ಲಿದ್ದವರಿಗೆ ಆತ್ಮಸ್ಥೈರ್ಯ ತುಂಬಿ ಮುಂದಿನ ಚುನಾವಣೆಗೆ ಇನ್ನು ೩ ವರೆ ವರ್ಷ ಇದೆ..ಅದು ಬೇಗನೇ ಬರುತ್ತೆ, ಅಲ್ಲಿಯವರೆಗೂ ಕಾಯೋಣ. ಮುಂದಿನ ಉಸ್ತುವಾರಿಯನ್ನು ಪುಟ್ಟರಾಜಣ್ಣ ನಾನು ಹೊತ್ಕೊಂಡು ಹೇಗೆ ಹಿಂದಿನ ಚುನಾವಣೆಯಲ್ಲಿ ಹಾಸನ ಮತ್ತು ಮಂಡ್ಯದ ರೀತಿ ಗೆಲ್ಲೋಣ.ಈ ಬಾರಿ ಗೆದ್ದ ಬಿಜೆಪಿ ಅಭ್ಯರ್ಥಿ ನಮ್ಮ ಕಾರ್ಯಕರ್ತರಿಗೆ ನೋವು ಕೊಟ್ರೆ ನಾವು ಸುಮ್ಮನಿರಲಿಲ್ಲ.ಆ ತರಹದೇನಾದ್ರು ಆದ್ರೆ ನಾವು ನಮ್ಮ ಕುಟುಂಬ ಸೇರಿ ನಿಮ್ಮ ಜೊತೆಗೆ ಇರ್ತಿವಿ.ಈ ಕ್ಷೇತ್ರದ ಯಾವ ಕಾರ್ಯಕರ್ತರು ಕಳೆಗುಂದಿ ಆತ್ಮವಿಶ್ವಾಸ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಆತ್ಮವಿಶ್ವಾಸ ತುಂಬಿದ್ರು.

ಅಲ್ದೆ ಈ ಉಪ ಚುನಾವಣೆಯಲ್ಲಿನಿಖಿಲ್ ಗೆ ಟಿಕೇಟ್ ಫಿಕ್ಸ್ ಆಗಿದ್ದನ್ನು ರಹಸ್ಯ ಬಿಚ್ಚಿಟ್ಟುನೀವು ಸ್ಥಳೀಯರಿಗೆ ಟಿಕೇಟ್ ಕೊಡಿ ಅಂದ್ರಿ ಅದಕ್ಕೆ ಕೊಟ್ವಿಆದ್ರೆ ಏನಾಯ್ತು ನಾವು ಸೋತ್ವಿ.ಈ ಬಾರಿ ಚುನಾವಣೆಯಲ್ಲಿ ಗೆದ್ದ ನಾರಾಯಣಗೌಡ ೨೦೨೩ ಕ್ಕೆ ಮತ್ತೆ ಬಾಂಬೆಗೆ ಹೋಗ್ತಾನೆ ಅಂತಾ ಕಿಡಿ ಕಾರಿದ್ರು.ನಾವು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದು ಮೈತ್ರಿಯಿಂದ ಪ್ರೆಂಡ್ಲು ಫೈಟ್ ಮಾಡಿದ್ರು ಐದಾರು ಸೀಟು ಗೆಲ್ತಿದ್ವಿ.ಬಿಜೆಪಿಯವರ ಜೊತೆ ಹೊಂದಾಣಿಕೆ ಮಾಡಿಕೊಂಡ ಕಾರಣಕ್ಕೆ ನಾವು ಸೋತ್ವಿ ಅವ್ರು‌ ಸೋತ್ರು‌ ಅಂದ್ರು. ಇನ್ನು ಚುನಾವಣೆಯಲ್ಲಿ ಸೋತ ಪರಾಜಿತ ಅಭ್ಯರ್ಥಿ ದೇವರಾಜು ಮತ ನೀಡಿದ ಮತದಾರಿಗೆ ಕೃತಜ್ಞತೆ ಸಲ್ಲಿಸಿ ಈ ಚುನಾವಣೆಯಲ್ಲಿ ಹಣ ಹೊಳೆ ಹರಿದು ತನ್ನ ಸೋಲಾಯ್ತು ಎಂದ್ರು

ಒಟ್ಟಾರೆ ಜೆಡಿಎಸ್ ನ ಸೋಲಿಗೆ ಇಂದು ವರಿಷ್ಠರು ಆತ್ಮಾವಲೋಕನ ಸಭೆ ನಡೆಸಿ ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಿದ್ರು, ಕಾರ್ಯಕರ್ತರು ಮಾತ್ರ ಸೋಲಿನ ಹತಾಶೆಯಿಂದ ಹೊರ ಬಂದಿಲ್ಲ. ಜೆಡಿಎಸ್ ಭದ್ರಕೋಟೆಯಲ್ಲಿ ಪಕ್ಷದ ಸೋಲು ಕಾರ್ಯಕರ್ತರಿಗೆ ಧಿಗ್ಭ್ರಮೆ ಮೂಡಿಸಿದ್ದು ಮುಂದಿನ ದಿನದಲ್ಲಿ ಈ ಸೋಲು ಯಾವ ಪರಿಣಾಮ ಬೀರುತ್ತೋ ಅನ್ನೊಕ ಆತಂಕದಲ್ಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights