ಫ್ಯಾಕ್ಟ್‌ಚೆಕ್ : ಈ ಘಟನೆ ನಡೆದಾಗ ಇದದ್ದು ಕಾಂಗ್ರೆಸ್‌ ಸರ್ಕಾರವಲ್ಲ!

ಕರ್ನಾಟಕದಲ್ಲಿ ಚುನಾವಣಾ ಭರಾಟೆ ಜೋರಾಗಿದೆ, ಪ್ರಧಾನಿ ನರೇಂದ್ರ ಮೋದಿಯಾಗಿ ರಾಷ್ಟ್ರೀಯ ಪಕ್ಷಗಳ ರಾಷ್ಟ್ರ ನಾಯಕರೆಲ್ಲರೂ ಕರ್ನಾಟಕಕ್ಕೆ ಬಂದು ತಮ್ಮ ಪಕ್ಷಗಳ ಗೆಲುವಿಗಾಗಿ ಪ್ರಚಾರಾಂದೋಲನ ನಡೆಸುತ್ತಿದ್ದಾರೆ. ಆದರೆ ಮತದಾರ ಪ್ರಭು ಯಾರಿಗೆ ಅಭಯ ನೀಡುತ್ತಾನೆ ಎಂದು ಮೇ 10ರಂದು ತೀರ್ಮಾನವಾಗುತ್ತದೆ. ಈ ಪ್ರಚಾರದ ನಡುಎ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.

“ನಾವು ಈ ಬಾರಿ ಕಾಂಗ್ರೆಸ್‌ಗೆ ಓಟು ಹಾಕುತ್ತೇವೆ ಅಂತಾ ಮೊಂಡು ವಾದ ಮಾಡುವ ಹಿಂದೂಗಳೇ ಇಲ್ಲಿ ನೋಡಿ. ಎಲ್ಲಿ ಇಸ್ಲಾಂ ಪರವಾದ ಸರಕಾರ ಇರುತ್ತದೋ ಅಲ್ಲಿಯ ಹಿಂದೂಗಳ ದಯನೀಯ ಪರಿಸ್ಥಿತಿ ನೋಡಿ ಎದೆ ತಣ್ಣಗೆ ಮಾಡಿಕೊಳ್ಳಿ. ಇದು ನರರಾಕ್ಷಸಿ ಮಮತಾ ಬ್ಯಾನರ್ಜಿಯ ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ. ಕೆಲವು ಜಿಹಾಧಿ ಮುಸ್ಲೀಮ್ ಯುವಕರು ಹಿಂದೂ ಯುವತಿಯನ್ನು ಅವಳ ತಾಯಿಯ ಕಣ್ಣೆದುರಿಗೆ ರಾಜಾರೋಷವಾಗಿ , ಅತ್ಯಾಚಾರ ಮಾಡಲು ಹೊರಟ್ಟಿದ್ದಾರೆ ಅಂದರೆ ಹಿಂದೂ ವಿರೋಧಿ ಸರಕಾರ ಬಂದರೆ ಜಿಹಾಧಿಗಳು ಅಕ್ಷರಸಹಃ ನರರಾಕ್ಷಸರಾಗಿ ಬದಲಾಗುತ್ತಾರೆ. ಹಿಂದೂಗಳೇ ಯಾರದೋ ಕೋಪಕ್ಕೆ ಅವರ ಮೇಲಿನ ದ್ವೇಷದಿಂದ ಕಾಂಗ್ರೇಸಿಗೆ ಮತ ಹಾಕಬೇಡಿ. ನಿಮ್ಮ ದ್ವೇಷದ ಬೆಂಕಿ ನಿಮ್ಮ ಮನೆಯನ್ನೇ ಸುಡುತ್ತದೆ ಎಚ್ಚರಿಕೆ” ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

https://twitter.com/varavishnu0/status/1651806226903367680?t=hzkTPNjV5XdmuPVN8KDaSA&s=04&fbclid=IwAR3-5xGeqbKiPt62fRqik-xPjr9oXGQX9t9BTR27HMMPBFAh1c0BPp_o1lE

ವಿಡಿಯೋದಲ್ಲಿ ಪುಂಡರ ಗುಂಪೊಂದು ಯುವತಿರರಿಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ಕಾಣಬುಹುದು. ಇದೇ ವಿಡಿಯೋವನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಕಾಂಗ್ರೆಸ್‌ಗೆ ಮತ ನೀಡಬೇಡಿ, ಕಾಂಗ್ರೆಸ್ಸಿಗರು ಹಿಂದೂ ವಿರೋಧಿಗಳು ಮತ್ತು ಮುಸ್ಲಿಮರನ್ನು ಓಲೈಕೆ ಮಾಡಲು ಏನನ್ನಾದರೂ ಮಾಡುತ್ತಾರೆ ಎಂದು ಪ್ರತಿಪಾದಿಸಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಪರಿಶೀಲಿಸುವಂತೆ ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಏನ್‌ಸುದ್ದಿ.ಕಾಂಗೆ ವಿನಂತಿಸಿದ್ದಾರೆ. ಹಾಗಿದ್ದರೆ ಈ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋದಲ್ಲಿ ಕಂಡುಬರುವ ದೃಶ್ಯಗಳ ಘಟನೆಯು ನಡೆದಿರುವುದು ಪಶ್ಚಿಮ ಬಂಗಾಳದಲ್ಲಿ ಅಲ್ಲ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ.

ಈ ವರದಿಗಳ ಪ್ರಕಾರ, 2017 ರಲ್ಲಿ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. 14 ಯುವಕರು ಇಬ್ಬರು ಹುಡುಗಿಯರಿಗೆ ಕಿರುಕುಳ ನೀಡಿ ತೊಂದರೆ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ಬಂಧಿಸಿದ್ದರು ಎಂದು ವರದಿಯಾಗಿದೆ. ಆದರಿಂದ ಇದು 2017ರ ಹಳೆಯ ಘಟನೆ ಎಂದು ಸ್ಪಷ್ವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಘಟನೆಯು 2017 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಹಲವು ವರದಿಗಳಿಂದ ದೃಢಪಟ್ಟಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದದ್ದು BJP ಯ ಯೋಗಿ ಆದಿತ್ಯನಾಥ್. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ಮರೆಮಾಚಿ ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ ಎಂದು ಕೋಮು ದ್ವೇಷದ ಹಿನ್ನಲೆಯಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬ ಸ್ನಾನ ಮಾಡುತ್ತಿರುವ ವಿಡಿಯೋ ದೆಹಲಿಯದಲ್ಲ! ಇನ್ನೆಲ್ಲಿಯದ್ದು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights