ಬಂಗಾಳ ಬೈ ಎಲೆಕ್ಷನ್ ರಿಸಲ್ಟ್: ಸಿಎಂ ಮಮತಾ ಬ್ಯಾನರ್ಜಿಗೆ 34,000 ಮತಗಳ ಭರ್ಜರಿ ಮುನ್ನಡೆ!

ಪಶ್ಚಿಮ ಬಂಗಾಳದ ಉಪ ಚುನಾವಣೆ ಮತ ಎಣಿಕೆ‌ ಇಂದು ನಡೆಯುತ್ತಿದೆ. ಇದೂವರೆಗೂ ಹಲವು ಸುತ್ತಿನ ಮತ ಎಣಿಕೆ ಮುಗಿದಿದ್ದು, ಚುನಾವಣೆ ನಡೆದಿದ್ದ ಮೂರೂ ಕ್ಷೇತ್ರಗಳಲ್ಲಿಯೂ ಟಿಎಂಸಿ ಭರ್ಜರಿ ಮುನ್ನಡೆ ಸಾಧಿಸಿದೆ. ಭವಾನಿಪುರ ಕ್ಷೇತ್ರದಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 34,000 ಮತಗಳ ಮುನ್ನಡೆ ಸಾಧಿಸಿದ್ದಾರೆ.

ನಂದಿಗ್ರಾಮದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದ ಮಮತಾ ಬ್ಯಾನರ್ಜಿ ಅವರಿಗೆ ತಮ್ಮ ಸಿಎಂ ಸ್ಥಾನ ಉಳಿಸಿಕೊಳ್ಳಲು ಈ ಚುನಾವಣೆ ನಿರ್ಣಾಯಕವಾಗಿತ್ತು. ಅವರು ಈಗ ಗೆಲುವಿನ ಹಾದಿಯಲ್ಲಿ ಮುನ್ನುಗಿದ್ದಾರೆ.

ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಪ್ರಿಯಾಂಕಾ ಟಿಬ್ರೂವಾಲ್ ಮತ್ತು ಸಿಪಿಐಎಂನ ಶ್ರೀಜೀಬ್ ಬಿವಾಸ್ ವಿರುದ್ಧ ಸ್ಪರ್ಧಿಸಿದ್ದಾರೆ. ಏತನ್ಮಧ್ಯೆ, ಮುರ್ಷಿದಾಬಾದ್ ನ ಸಂಸೆರ್ ಗಂಜ್ ಮತ್ತು ಜಂಗೀಪುರ್ ಸ್ಥಾನಗಳಲ್ಲಿ ಉಪಚುನಾವಣೆಗಳು ನಡೆದವು ಮತ್ತು ಅದರಲ್ಲಿ ತಲಾ 77% ಕ್ಕಿಂತ ಹೆಚ್ಚಿನ ಮತದಾನವಾಗಿದೆ.

ಇದೀಗ ಮತ ಎಣಿಕೆಯ 11 ನೇ ಸುತ್ತಿನ ನಂತರ, ಮಮತಾ ಬ್ಯಾನರ್ಜಿ34000 ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮಮತಾ ಬ್ಯಾನರ್ಜಿ 45894 ಮತಗಳನ್ನು ಗಳಿಸಿದ್ದಾರೆ, ಪ್ರಿಯಾಂಕಾ ಟಿಬ್ರೂವಾಲ್ 11894 ಮತಗಳನ್ನು ಗಳಿಸಿದ್ದಾರೆ ಮತ್ತು ಸಿ.ಪಿ.ಐ.ಎಂ ಅಭ್ಯರ್ಥಿ ಕೇವಲ 1515 ಮತಗಳನ್ನು ಗಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights