Bigg Boss : ಪತ್ತೆ ದಿವ್ಯಾ ಉರುಡುಗ ಪರ ಆಟವಾಡಿದ್ರಾ ಅರವಿಂದ್ ಕೆಪಿ..?

ಆಗಾಗ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಫೇವರ್ ಗೇಮ್ ಬಗ್ಗೆ ಸುದೀಪ್ ಎಚ್ಚರ ವಹಿಸುತ್ತಲೇ ಇದ್ದರೂ ನಿನ್ನೆಯ ಆಟದಲ್ಲಿ ಇದು ಮತ್ತೆ ಮರುಕಳಿಸಿದಂತೆ ಕಾಣುತ್ತಿದೆ.

ನಿನ್ನೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ‘ನೀನಾ? ನಾನಾ?’ ಟಾಸ್ಕ್ ನೀಡಿದ್ದರು. ಆಟವಾಡುವ ಸ್ಪರ್ಧಿಗಳು ಥರ್ಮಲ್ ಬಾಲ್ಸ್ ತುಂಬಿಕೊಂಡ ಗೋಣಿಚೀಲವನ್ನು ಬೆನ್ನಿಗೆ ಕಟ್ಟಿಕೊಂಡು ಎರಡು ರುತ್ತಗಳ ನಡುವೆ ಓಡಬೇಕು. ಬೆನ್ನಿಗೆ ಕಟ್ಟಿಕೊಂಡ ಚೀಲದಲ್ಲಿದ್ದ ಥರ್ಮಲ್ ಬಾಲ್ಸ್ ಅನ್ನು ಹಿಂದಿನ ಸ್ಪರ್ಧಿಗಳು ಬೀಳಿಸಬೇಕು. ಹೀಗೆ ಚೀಲ ಖಾಲಿಯಾದ ಸದಸ್ಯರು ಆಟದಿಂದ ದೂರ ಉಳಿಯುತ್ತಾರೆ. ಹೀಗೆ ಆಟದಲ್ಲಿ ಕೊನೆಗೆ ಉಳಿಯುವ ಐದು ಸದಸ್ಯರಿಗೆ ಅಂಕಗಳು ಸಿಗುತ್ತವೆ.

ಆದರೆ ಈ ಆಟದಲ್ಲಿ  ಅರವಿಂದ್ ಕೆಪಿ ದಿವ್ಯಾ ಉರುಡುಗ ಹಿಂದೆ ಓಡುತ್ತಿದ್ದರು. ಮನಸ್ಸು ಮಾಡಿದ್ದರೆ ಅರವಿಂದ್ ದಿವ್ಯಾ ಉರುಡುಗ ಅವರ ಚೀಲದಿಂದ ಸಂಪೂರ್ಣವಾಗಿ ಥರ್ಮಲ್ ಬಾಲ್ಸ್ ಕೆಳಗೆ ಹಾಕಬಹುದಿತ್ತು. ಆದರೆ ಅರವಿಂದ್ ಆಟದ ಕೊನೆವರೆಗೂ ದಿವ್ಯಾ ಅವರ ಚೀಲದಿಂದ ಥರ್ಮಲ್ ಬಾಲ್ಸ್ ಗಳನ್ನ ಸಂಪೂರ್ಣವಾಗಿ ಕೆಳಗೆ ಬೀಳಿಸಲೇ ಇಲ್ಲ. ಇದರಿಂದ ದಿವ್ಯಾ ಆಟದ ಕೊನೆಯ ಎರಡನೇ ವಿಜೇತರಾಗಿ ಉಳಿದುಕೊಂಡರು. ಇದರಿಂದ ಅರವಿಂದ್ 500 ಅಂಕ, ದಿವ್ಯ ಉರುಡುಗ 350, ಪ್ರಶಾಂತ್ ಸಂಬರಿಗಿ 250, ಶಮಂತ್ 150, ಮಂಜು 120 ಅಂಕ ಪಡೆದುಕೊಂಡರು.

ಇದು ಬಿಗ್ ಬಾಸ್ ವೀಕ್ಷಕರಲ್ಲಿ ದಿವ್ಯಾ ಉರುಡುಗ ಕೈಗೆ ಪೆಟ್ಟಾದ ಕಾರಣ ಅರವಿಂದ್ ಫೇವರ್ ಗೇಮ್ ಆಡಿದ್ರಾ ಅನ್ನೋ ಅನುಮಾನ ಹುಟ್ಟಿಸಿದೆ. ವಾರದ ಕಥೆಯಲ್ಲಿ ಸುದೀಪ್ ಈ ಬಗ್ಗೆ ಪ್ರಸ್ತಾಪ ಮಾಡ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights