ಮದುವೆ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಸಂಸದ ಉಮೇಶ್ ಜಾಧವ್…

ಅದೇನ್ ಸ್ಟೆಪ್ಸ್..? ಅದೇನ್ ಡ್ಯಾನ್ಸ್..? ಯಾವ ಹೀರೋಗಳಿಗೂ ನಮ್ಮ ರಾಜಕಾರಣಿಗಳು ಕಡಿಮೆ ಇಲ್ಲ ಅನ್ನೋದಕ್ಕೆ ಇಲ್ಲೊಂದು ನಿದರ್ಶನವಿದೆ. ಉಪಚುನಾವಣೆ ರಂಗೇರಿದೆ ಜನಪ್ರತಿನಿಧಿಗಳು ಜನರಿಗೆ ಖುಷಿ ಪಡ್ಸೋಕೆ ಒಂದೆರೆದು ಸ್ಟೆಪ್ಸ್ ಹಾಕಿರಬಹುದು ಅಂತ ನೀವು ಅನ್ಕೊಂಡಿದ್ರೆ ನಿಮ್ ತಿಳುವಳಿಕೆ ತಪ್ಪು ಯಾಕೆಂದ್ರೆ ಇಲ್ಲಿ ಡ್ಯಾನ್ಸ್ ಮಾಡಿದ್ದು ಜನಪ್ರತಿನಿಧಿ ಅಲ್ಲ ಸಂಸದ ಉಮೇಶ್ ಜಾಧವ್.

ಹೌದು… ಕಲಬುರಗಿ  ಸಂಸದ ಉಮೇಶ್ ಜಾಧವ್ ಅವರು ತಮ್ಮ ಹಿರಿಯ ಸಹೋದರ ರಾಮಚಂದ್ರ ಜಾಧವ್ ಪುತ್ರ ಪ್ರಶಾಂತ್ ಅವರ ಮದುವೆ ಸಮಾರಂಭದಲ್ಲಿ ಪುತ್ರ ಚಿಂಚೋಳಿ ಶಾಸಕ ಡಾ ಅವಿನಾಶ್ ಜಾಧವ್ ಹಾಗೂ ಸ್ನೇಹಿತರ ಜೊತೆಗೂಡಿ ಮದುವೆ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ತಂದೆ ಡಾ ಉಮೇಶ್ ಜಾಧವ್ ಹಾಗೂ ಪುತ್ರ ಶಾಸಕ ಡಾ ಅವಿನಾಶ್ ಜಾಧವ್ ಒಟ್ಟಿಗೆ ಡ್ಯಾನ್ಸ್ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಜೊತೆ ಸಹೋದರ ರಾಮಚಂದ್ರ ಜಾಧವ್ ಮತ್ತು ಅವರ ಕುಟುಂಬಸ್ಥರು ಸೇರಿ ಮಗನ ಮದುವೆಯಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights