ಮುಂಬೈನಲ್ಲಿ ಭಾರೀ ಮಳೆ : ಮನೆ ಕುಸಿದು 15 ಮಂದಿ ಸಾವು – ರೈಲು ಸೇವೆ ಸ್ಥಗಿತ!

ಭಾರೀ ಮಳೆಯಿಂದಾಗಿ ಮನೆ ಕುಸಿದು 15 ಮಂದಿ ಮೃತಪಟ್ಟ ದಾರುಣ ಘಟನೆ ಮುಂಬೈ ನಲ್ಲಿ ನಡೆದಿದೆ.

ಮುಂಬೈನ ಚೆಂಬೂರ್ ಮತ್ತು ವಿಖ್ರೋಲಿ ಪ್ರದೇಶಗಳಲ್ಲಿ ಭೂಕುಸಿತದಿಂದಾಗಿ ಗೋಡೆ ಕುಸಿದ ಎರಡು ಘಟನೆಗಳಲ್ಲಿ ಹತ್ತು ಜನರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಜೊತೆಗೆ ಮುಂಬೈನ ವಿಖ್ರೋಲಿ ಉಪನಗರದಲ್ಲಿ ಮುಂಜಾನೆ 2.30 ಕ್ಕೆ ನಿರಂತರವಾಗಿ ಮಳೆಯಾದ ಹಿನ್ನೆಲೆಯಲ್ಲಿ ಭೂಕುಸಿತ ಸಂಭವಿಸಿದ ನಂತರ ಐದು ಗುಡಿಸಲುಗಳು ಕುಸಿದಿದ್ದರಿಂದ ಮೂರು ಗುಡಿಸಲು ನಿವಾಸಿಗಳು ಸಾವನ್ನಪ್ಪಿದ್ದಾರೆ.

ಭಾರೀ ಮಳೆಯಿಂದಾಗಿ ಮುಂಬೈ ಮತ್ತು ಅದರ ಉಪನಗರಗಳಲ್ಲಿ ಭಾನುವಾರ ಮುಂಜಾನೆ ರಸ್ತೆಗೆ ನೀರು ನುಗ್ಗಿ ದೈನಂದಿನ ಪ್ರಯಾಣಿಕರ ಸಂಚಾರದ ಮೇಲೆ ಪರಿಣಾಮ ಬೀರಿದೆ. ಭಾರಿ ಮಳೆಯಿಂದಾಗಿ ರೈಲ್ವೆ ಹಳಿಗಳು ಮತ್ತು ಬೀದಿಗಳು ಕೂಡ ಜಲಾವೃತಗೊಂಡಿವೆ. ಬುಧವಾರದಿಂದ ಮುಂಬೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಮಳೆಯಿಂದಾಗಿ ಕೇಂದ್ರ ಮುಖ್ಯ ಮಾರ್ಗ ಮತ್ತು ಬಂದರು ಮಾರ್ಗದಲ್ಲಿ ಸ್ಥಳೀಯ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದ್ದು, ರೈಲು ಸಂಚಾರ ವಿಳಂಬವಾಗುವುದರೆ ಮುಂಬೈ ಮತ್ತು ಉಪನಗರ ಪ್ರದೇಶಗಳಲ್ಲಿ ಅನೇಕ ಸ್ಥಳಗಳಲ್ಲಿ ರೈಲ್ವೆ ಹಳಿಗಳಲ್ಲಿ ನೀರು ಹರಿಯುವುದರಿಂದ ಶೀಘ್ರದಲ್ಲೇ 17 ರೈಲುಗಳನ್ನು ನಿಲ್ಲಿಸಲಾಗಿದೆ. ಜೊತೆಗೆ ಮುಂಬೈನ ಬಸ್ ಮಾರ್ಗ ಬದಲಿಸಲಾಗಿದೆ. ದಾದರ್, ಪ್ಯಾರೆಲ್, ಕುರ್ಲಾ, ಚುನಭಟ್ಟಿ, ವಡಾಲಾ ಮತ್ತು ತಿಲಕ್ ನಗರಗಳಲ್ಲಿನ ರೈಲ್ವೆ ಹಳಿಗಳಲ್ಲೂ ವಾಟರ್ ಲಾಗಿಂಗ್ ವರದಿಯಾಗಿದೆ.

ಭಾನುವಾರ ಮುಂಜಾನೆ 4 ಗಂಟೆಗೆ, ಮುಂಬೈನ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಮಳೆಯಾಗಲಿದೆ ಎಂದು ಹೇಳಿದೆ. ಥಾಣೆ, ರಾಯಗಡ್, ಪಾಲ್ಘರ್ ಮತ್ತು ಮುಂಬೈ ಜಿಲ್ಲೆಗಳಿಗೆ (ಉಪನಗರಗಳ ಉತ್ತರ ಭಾಗಗಳ ಕಡೆಗೆ ಹೆಚ್ಚಿನ ತೀವ್ರತೆ) ಇದೇ ರೀತಿಯ ಮುನ್ಸೂಚನೆಗಳನ್ನು ನೀಡಲಾಗಿದೆ.

ಭಾರಿ ಮಳೆಯಿಂದಾಗಿ ವಿಹಾರ್ ಸರೋವರ ಭಾನುವಾರ ಬೆಳಿಗ್ಗೆ 9.00 ಕ್ಕೆ ಉಕ್ಕಿ ಹರಿಯುತ್ತಿದ್ದು ಆ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಜನರು ತೀರದಿಂದ ದೂರವಿರಲು ಮತ್ತು ನೀರು ತುಂಬಿದ ಪ್ರದೇಶಗಳಲ್ಲಿ ಸುತ್ತಾಡದಂತೆ ವಿನಂತಿಸಿದೆ. ಮುಂಬೈಗೆ ಐಎಂಡಿ ರೆಡ್ ಅಲರ್ಟ್ ಸಹ ಘೋಷಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights