ಹೊತ್ತಿಉರಿದ ದಕ್ಷಿಣ ಆಫ್ರಿಕಾ; ದೇಶಕ್ಕೆ ಶತಕೋಟಿ ನಷ್ಟ: ಅಧ್ಯಕ್ಷ ಸಿರಿಲ್ ರಾಮಾಫೋಸಾ

ಕಳೆದ ವಾರದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಉಂಟಾದ ಹಿಂಸಾಚಾರವನ್ನು ತಹಬದಿಗೆ ತರಲಾಗಿದೆ. ಹಿಂಸೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಮರುಕಳಿಸಿದೆ. ಆದರೆ, ವಿನಾಶದಿಂದಾಗಿ ದೇಶಕ್ಕೆ ಶತಕೋಟಿ ರಾಂಡ್ (ಆಫ್ರಿಕಾ ಕರೆನ್ಸಿ) ನಷ್ಟವಾಗಿದೆ ಎಂದು ಅಧ್ಯಕ್ಷ ಸಿರಿಲ್ ರಾಮಾಫೋಸಾ ಶುಕ್ರವಾರ ಹೇಳಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರನ್ನು ಬಂಧಿಸಲಾಗಿತ್ತು. ಅವರ ಬಂಧನದ ನಂತರ ಕಳೆದ ವಾರ ದೇಶದ ಹಲವಾರು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ಈ ವೇಳೆ ಹಲವಾರು ವಾಣಿಜ್ಯ ಮಳಿಗೆಗಳನ್ನು ಸುಟ್ಟು ಹಾಕಲಾಗಿದೆ. ಹಲವೆಡೆ ಭಾರೀ ಲೂಟಿ ನಡೆದಿದೆ. 220ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ 70ಕ್ಕೂ ಹೆಚ್ಚು ಭಾರತೀಯರೂ ಸಾವನ್ನಪ್ಪಿದ್ದಾರೆ.

ಹಿಂಸಾಚಾರಕ್ಕೆ ಪ್ರಚೋದನೆ ನೀಡಲಾಗಿದೆ ಎಂದು ಶಂಕಿಸಲಾಗಿರುವ 2,500 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.ಈ ಪ್ರಕರಣಗಳನ್ನು ತ್ವರಿತವಾಗಿ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ರಮಾಫೋಸಾ ಹೇಳಿದ್ದಾರೆ.

ಈ ಕೃತ್ಯದ ಹಿಂದಿರುವವರು ದೆಂಗೆಯನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ನಮ್ಮ ಭದ್ರತಾ ಪಡೆ ಮ್ತು ದೇಶಾದ್ಯಂತ ಜನರ ಸಹಕಾರದಿಂದ ನಾವು ಹಿಂಸಾಚಾರದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 15 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರ ಪಟ್ಟಿ ಕೇಳಿದ ತಾಲಿಬಾನ್; ಮದುವೆಗೆ ಒತ್ತಾಯ!

“ಹಾನಿಗೊಳಗಾದ ಮೂಲಸೌಕರ್ಯಗಳನ್ನು ಪುನರ್ನಿರ್ಮಿಸಲು ವರ್ಷಗಳೇ ತೆಗೆದುಕೊಳ್ಳಬಹುದು ಮತ್ತು ಸಣ್ಣ ಉದ್ಯಮಗಳು ಚೇತರಿಸಿಕೊಂಡು ಮೇಲೆಳಲು ಕಷ್ಟವಾಗುತ್ತದೆ” ಎಂದು ದಕ್ಷಿಣ ಆಫ್ರಿಕಾದ ಅಂಕಿಅಂಶಗಳ ಮುಖ್ಯಸ್ಥ ರಿಸೆಂಗಾ ಮಾಲುಲೆಕೆ ಹೇಳಿದ್ದಾರೆ.

ಇದು ಇನ್ನಷ್ಟು ನಿರುದ್ಯೋಗಕ್ಕೆ ಕಾರಣವಾಗಲಿದೆ. ಈಗಾಗಲೇ ಹೆಚ್ಚಿನ ಜನರು ಕಡಿಮೆ ಉದ್ಯೋಗಾವಕಾಶ ಮತ್ತು ಸೀಮಿತ ಶಿಕ್ಷಣದ ಅವಕಾಶಗಳನ್ನು ಹೊಂದಿದ್ದಾರೆ. ದಕ್ಷಿಣ ಆಫ್ರಿಕನ್ನರಲ್ಲಿ ಅರ್ಧದಷ್ಟು ಜನರು ಅಧಿಕೃತ ಬಡತನ ರೇಖೆಗಿಂತ ಕೆಳಗಿದ್ದಾರೆ ಮತ್ತು 2021 ರ ಮೊದಲ ಮೂರು ತಿಂಗಳಲ್ಲಿ ನಿರುದ್ಯೋಗವು 32% ರಷ್ಟಿದೆ ಎಂದು ತಿಳಿದು ಬಂದಿದೆ.

ಆಸ್ತಿ ನಾಶ ಮತ್ತು ಸರಕುಗಳ ಕಳ್ಳತನದಿಂದಾಗಿ ವ್ಯವಹಾರಗಳು ಕುಸಿದಿವೆ. ದೇಶದಲ್ಲಿ ಒಟ್ಟಾರೆಯಾಗಿ ಶತಕೋಟಿ ರಾಂಡ್‌ಗಳಷ್ಟು ನಷ್ಟವಾಗಿದೆ. ಇದರ ಪರಿಣಾಮಗಳು ಮುಂದಿನ ತಿಂಗಳಲ್ಲಿ ಎದುರಾಗಲಿದೆ ಎಂದು ಹೇಳಲಾಗಿದೆ.

ನಾಗರಿಕ ಅಶಾಂತಿಯಿಂದಾದ ಹಾನಿ ಮತ್ತು ಕಳ್ಳತನದಿಂದ 10 ಬಿಲಿಯನ್ ರಾಂಡ್ (3,693.77 ಮಿಲಿಯನ್) ನಷ್ಟವಾಗಿರುವ ಸಾಧ್ಯತೆಯಿದೆ ಎಂದು ಸರ್ಕಾರಿ ಸ್ವಾಮ್ಯದ ವಿಮೆದಾರರಾದ ಸಾಸ್ರಿಯಾ ವ್ಯವಸ್ಥಾಪಕ ನಿರ್ದೇಶಕ ಸೆಡ್ರಿಕ್ ಮಸೊಂಡೊ ಬುಧವಾರ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

79 ವರ್ಷದ ಜುಮಾ ಅವರು 2009 ರಿಂದ 2018 ರವರೆಗೆ ಅಧಿಕಾರದಲ್ಲಿದ್ದರು. ಈ ವೇಳೆ ಅವರು ಅವಧಿಯಲ್ಲಿ ಉನ್ನತ ಮಟ್ಟದ ನಾಟಿ ತನಿಖೆಗೆ ಸಾಕ್ಷ್ಯ ನೀಡಬೇಕೆಂಬ ನ್ಯಾಯಾಂಗದ ಆದೇಶವನ್ನು ಧಿಕ್ಕರಿಸಿದ್ದರು. ಕಾರಣಕ್ಕಾಗಿ ಅವರಿಗೆ ಕಳೆದ ತಿಂಗಳು ಶಿಕ್ಷೆ ವಿಧಿಸಲಾಗಿತ್ತು.

ಭ್ರಷ್ಟಾಚಾರ, ವಂಚನೆ, ದರೋಡೆ ಮತ್ತು ಹಣ ವರ್ಗಾವಣೆ ಆರೋಪಗಳು ಜುಮಾ ಅವರ ಮೇಲಿವೆ.

ಇದನ್ನೂ ಓದಿ: ಹೊತ್ತಿ ಉರಿಯುತ್ತಿದೆ ದಕ್ಷಿಣ ಆಫ್ರಿಕಾ; 70 ಭಾರತೀಯರು ಸೇರಿ 220 ಜನರ ಹತ್ಯೆ!

Spread the love

Leave a Reply

Your email address will not be published. Required fields are marked *