ಉತ್ತರ ಪ್ರದೇಶ: ಪಂಚಾಯತಿ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ 2,000 ಸಿಬ್ಬಂದಿಗಳು ಸಾವು!

ಉತ್ತರ ಪ್ರದೇಶದಲ್ಲಿ ನಡೆದ ಪಂಚಾಯತ್ ಚುನಾವಣೆಯ ಕರ್ತವ್ಯದಲ್ಲಿ ಭಾಗವಹಿಸಿದ್ದ ಅಧಿಕಾರಿಗಳ ಪೈಕಿ 2,000ಕ್ಕೂ ಸಿಬ್ಬಂಧಿಗಳು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇವರಲ್ಲಿ ಅರ್ಧದಷ್ಟು ಮಂದಿ ಶಿಕ್ಷಕರು ಎಂದು ಮಾಹಿತಿ ದೊರೆತಿದೆ.

ಮೂರು ತಿಂಗಳ ಹಿಂದೆ ಉತ್ತರ ಪ್ರದೇಶದಲ್ಲಿ ಪಂಚಾಯತ್‌ ಚುನಾವಣೆ ನಡೆದಿತ್ತು. ಈ ವೇಳೆ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ ಹಲವಾರು ಸಿಬ್ಬಂದಿಗಳು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದೀಗ ರಾಜ್ಯ ಸರ್ಕಾರ ಕೊರೊನಾಗೆ ಬಲಿಯಾದ ಸಿಬ್ಬಂದಿಗಳ ಕುಟುಂಬಗಳಿಗೆ ಪರಿಹಾರ ನೀಡುತ್ತಿದ್ದು, ಅದಕ್ಕಾಗಿ ಬಿಡುಗಡೆಗೊಳಿಸಿರುವ ಅಂಕಿಅಂಧಗಳಿಂದ 2,020 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಚುನಾವಣಾ ಕೆಲಸದಲ್ಲಿ ಭಾಗಿಯಾಗಿ, ಕೊರೊನಾಗೆ ಬಲಿಯಾದ 2,020 ಉದ್ಯೋಗಿಗಳ ಕುಟುಂಬಳಿಗೆ ಸರಕಾರ ತಲಾ ರೂ 30 ಲಕ್ಷ ಪರಿಹಾರ ನೀಡಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚುನಾವಣಾ ಕರ್ತವ್ಯದಲ್ಲಿದ್ದವರ ಪೈಕಿ ಕೇವಲ ಮೂವರು ಶಿಕ್ಷಕರ ಸಹಿತ ಕೇವಲ 74 ಸರ್ಕಾರಿ ಉದ್ಯೋಗಿಗಳು ಕೋವಿಡ್ ಗೆ ಬಲಿಯಾಗಿದ್ದರು ಎಂದು ಸರ್ಕಾರ ಈ ಹಿಂದೆ ಹೇಳಿತ್ತು.

ಸರ್ಕಾರದ ಈ ಅಂಕಿಅಂಶವನ್ನು ಅಲ್ಲಗಳೆದಿದ್ದ ಉತ್ತರ ಪ್ರದೇಶ ಪ್ರಾಥಮಿಕ ಶಿಕ್ಷಕರ ಸಂಘವು, ಚುನಾವಣೆಯಲ್ಲಿ ಭಾಗಿಯಾಗಿ ಕೊರೊನಾಗೆ 1,621 ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಪಟ್ಟಿ ಬಿಡುಗಡೆ ಮಾಡಿತ್ತು.

Read Also: ಚುನಾವಣಾ ಪ್ರೋಮೋದಲ್ಲಿ ಶ್ರೀನಿಧಿ ಚಿದಂಬರಂ ಅವರ ವಿಡಿಯೋ ಬಳಿಸಿಕೊಂಡ ಬಿಜೆಪಿ; ಜಾಲತಾಣದಲ್ಲಿ ಟ್ರೋಲ್!

“ಪರಿಹಾರಕ್ಕಾಗಿ 3,078 ಅರ್ಜಿಗಳು ಬಂದಿದ್ದು, ಅವುಗಳ ಪೈಕಿ 2,020 ಅರ್ಜಿಗಳು ಅರ್ಹಗೊಂಡಿವೆ. ಈ ಪೈಕಿ ಶೇ.50ರಷ್ಟು ಮಂದಿ ಶಿಕ್ಷಕರಾಗಿದ್ದಾರೆ” ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಪಂಚಾಯತ್ ರಾಜ್) ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಪಂಚಾಯತ್ ಚುನಾವಣಾ ಕರ್ತವ್ಯಕ್ಕಾಗಿ ನೇಮಿಸಲಾಗಿದ್ದ 11 ಲಕ್ಷ ಸರ್ಕಾರಿ ಉದ್ಯೋಗಿಗಳ ಪೈಕಿ ಶೇ.65ರಷ್ಟು ಅಥವಾ 6.5 ಲಕ್ಷಕ್ಕೂ ಹೆಚ್ಚು ಮಂದಿ ಶಿಕ್ಷಕರಿದ್ದರು.

ಕರ್ತವ್ಯದಲ್ಲಿದ್ದ ಸಂದರ್ಭ ಅಥವಾ ಕರ್ತವ್ಯದಿಂದ ಮರಳುತ್ತಿರುವ ವೇಳೆ ಕೋವಿಡ್‌ಗೆ ಬಲಿಯಾದವರಿಗೆ ಮಾತ್ರ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಈ ಹಿಂದೆ ಹೇಳಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಮಾನದಂಡಗಳನ್ನು ಬದಲಿಸುವಂತೆ ಒತ್ತಡ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ಮಾನದಂಡಗಳನ್ನು ಬಲಿಸಿರುವ ಸರ್ಕಾರ, ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ ನಂತರದ 30 ದಿನಗಳಲ್ಲಿ ಕೋವಿಡ್‍ಗೆ ಬಲಿಯಾದವರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿತ್ತು.

Read Also: ದೇಶದಲ್ಲಿ ಕೊರೊನಾ ಹರಡಲು ಚುನಾವಣಾ ಆಯೋಗವೇ ಕಾರಣ; ಅಧಿಕಾರಿಗಳ ವಿರುದ್ಧ ಏಕೆ ಕೊಲೆ ಪ್ರಕರಣ ದಾಖಲಿಸಬಾರದು?: ಆಯೋಗದ ವಿರುದ್ಧ ಮದ್ರಾಸ್‌ ಹೈಕೋರ್ಟ್‌ ಗರಂ!

Spread the love

Leave a Reply

Your email address will not be published. Required fields are marked *