FACT CHECK | ‘ಗೋ ಬ್ಯಾಕ್ ಗ್ರೋಕ್’ ಎಂದು ಪೋಸ್ಟ್ರ್ ಹಿಡಿದು ಅಣ್ಣಾಮಲೈ ಪ್ರತಿಭಟಿಸಿದ್ದು ನಿಜವೇ?
ಎಲಾನ್ ಮಸ್ಕ್ ಅವರ AI ಚಾಟ್ಬಾಟ್ ಗ್ರೋಕ್ ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಬಹಳ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿದೆ. ಅದರಲ್ಲೂ ಪ್ರಮುಖವಾಗಿ ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳು, ಮತ್ತು ಕೇಂದ್ರ ಸರ್ಕಾರದ ಸುಳ್ಳುಗಳ ಕುರಿತು ನೀಡುತ್ತಿರುವ ಪ್ರತಿಕ್ರಿಯೆಗಳು ಬಲಪಂಥೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೇ ಕಾರಣವಾಗಿಟ್ಟುಕೊಂಡು ತಮಿಳುನಾಡು ಬಿಜೆಪಿ ರಾಜ್ಯಧ್ಯಕ್ಷ ಅಣ್ಣಾಮಲೈ ಅವರು “ಗೋ ಬ್ಯಾಕ್ ಗ್ರೋಕ್” ಎಂಬ ಅಭಿಯಾನ ಆರಂಭಿಸಿದ್ದಾರೆ ಎಂದು ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
#go_back_grok pic.twitter.com/fR405aJJ2b
— ಕೈಲಾಸಂ (@Kade_kade2216) March 17, 2025
ವೈರಲ್ ಫೋಟೋದಲ್ಲಿ ಅಣ್ಣಾಮಲೈ ಅವರು ಹಾಳೆಯೊಂದನ್ನು ಪ್ರದರ್ಶಿಸಿ ಅದರಲ್ಲಿ “ಗೋ ಬ್ಯಾಕ್ ಗ್ರೋಕ್” ಎಂದು ಬರೆದಿರುವುದನ್ನು ಕಾಣಬಹುದಾಗಿದೆ. ಈ ಫೋಟೋ ನೋಡಿದ ಹಲವು ಮಂದಿ ಅಣ್ಣಾಮಲೈ ಅವರು ಈಗ ಗ್ರೋಕ್ ವಿರುದ್ಧ ಅಭಿಯಾನವನ್ನು ಆರಂಭಿಸಿದ್ದಾರೆ ಎಂದು ವ್ಯಂಗ್ಯ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ತಮಿಳುನಾಡು BJP ಅಧ್ಯಕ್ಷ ಅಣ್ಣಾಮಲೈ ನಿಜವಾಗಿಯೂ ಈ ರೀತಿ ಪ್ರತಿಭಟಿಸಿದ್ದಾರೆ ಎಂಬುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಸರ್ಚ್ ಮಾಡಿದಾಗ, 26 ಡಿಸೆಂಬರ್ 2024 ರಂದು ಅಣ್ಣಾಮಲೈಯವರು ತಮ್ಮ ಎಕ್ಸ್ ಮತ್ತು ಇನ್ಸ್ಟಾಗ್ರಾಂ ಖಾತೆಯಲ್ಲಿ ವೈರಲ್ ಪೋಸ್ಟ್ಗೆ ಹೋಲಿಕೆ ಆಗುವಂತಹ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದು ಮೂಲ ಫೋಟೋ ಎಂಬುದು ಖಚಿತವಾಗಿದ್ದು, ಇದರ ಅಣ್ಣಾಮಲೈ ಅವರು ಹಿಡಿದಿರುವ ಹಾಳೆಯ ಮೇಲೆ #ShameOnYouStalin ಎಂಬ ಹ್ಯಾಶ್ಟ್ಯಾಗ್ ಬರೆದಿರುವುದು ಕಂಡುಬಂದಿದೆ.
ஜனநாயக முறையில் போராடுவதற்கு அனுமதி இல்லை.
மக்கள் கோவத்தை திசைதிருப்ப ஊடகங்கள் மூலமாக திட்டமிட்டு பரப்பப்படும் பொய் செய்தி.
சாமானிய மக்களின் குரலை இப்படி நசுக்கினால், என்ன செய்ய முதல்வர் @mkstalin அவர்களே? #ShameOnYouStalin pic.twitter.com/sOACOWhEDk
— K.Annamalai (@annamalai_k) December 26, 2024
ಅಣ್ಣಾಮಲೈ ಪ್ರತಿಭಟನೆ ನಡೆಸಿದ್ದಾರೆ ಎಂದು ಪರಿಶೀಲಿಸಲು ವಿವಿಧ ಕೀ ವರ್ಡ್ಸ್ಗಳ ಬಳಸಿ ಸರ್ಚ್ ಮಾಡಿದಾಗ, 26 ಡಿಸೆಂಬರ್ 2024 ರಂದು ಡೆಕ್ಕನ್ ಹೆರಾಲ್ಡ್ ಮತ್ತು ನ್ಯೂಸ್ ನೈನ್ ಸುದ್ದಿ ಸಂಸ್ಥೆಗಳು ಅಣ್ಣಾಮಲೈ ಅವರು ತಮಿಳುನಾಡು ಡಿಎಂಕೆ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ, ಪೊಲೀಸರು ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯದ ಸಂತ್ರಸ್ಥೆಯರ ಗುರುತನ್ನು, FIR ವಿವರಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಆರೋಪಿಸಿ ಅಣ್ಣಾಮಲೈಯವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ. ಇದರ ಜೊತೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ರೀತಿ, ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರು ಗೋ ಬ್ಯಾಕ್ ಗ್ರೋಕ್ ಎಂಬ ಪೋಸ್ಟರ್ ಅನ್ನು ಪ್ರದರ್ಶಿಸಿದ್ದಾರೆ ಎಂಬುದು ಸುಳ್ಳು. ವೈರಲ್ ಫೋಟೋವನ್ನು ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಗಳನ್ನೆ ಮದುವೆಯಾದ ತಂದೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?

