ಪೊಲೀಸರ ಕೈ ಕತ್ತರಿಸಿ ಪರಾರಿಯಾದ ಜಾಲಿರೈಡ್‌ ಹೋಗುತ್ತಿದ್ದ ಯುವಕರು

ದೇಶಾದ್ಯಂತ ಲಾಕ್​ಡೌನ್​ ಘೋಷಿಸಲಾಗಿದೆ. ಆದರೆ, ಸರ್ಕಾರದ ಸರಿಯಾದ ಯೋಜನೆಗಳಿಲ್ಲದೆ ಪರದಾಡುತ್ತಿರುವ ಕಾರಣದಿಂದಾಗಿಯೂ ಮತ್ತು ಕೆಲವರು ತರ್ಲೆ ಆಟಗಳಿಂದಾಗಿಯೂ ರಸ್ತೆಗಿಳಿದು ನಿಯಮ ಉಲ್ಲಂಘಿಸುತ್ತಿದ್ದಾರೆ. ಇದರಿಂದಾಗಿ ಪೊಲೀಸರಿಗೆ ತಲೆನೋವು ಹೆಚ್ಚಾಗಿದೆ.

ಅನಗತ್ಯವಾಗಿ ಮನೆಯಿಂದ ಹೊರಬಂದು ಬೀದಿಗಳಲ್ಲಿ ಅಲದಾಡಬಾದೆಂದು ಹೇಳಿದ್ದರೂ ಲಾಕ್​ಡೌನ್‌ನ ನಿಯಮಗಳನ್ನು​ ಉಲ್ಲಂಘಿಸಿ, ರಸ್ತೆಯಲ್ಲಿ ಜಾಲಿರೈಡ್ ಹೋಗುತ್ತಿದ್ದ ಯುವಕರ ಗುಂಪನ್ನು ತಡೆದ ಕಾರಣಕ್ಕೆ ಪೊಲೀಸರ ಕೈಯನ್ನೇ ಕತ್ತರಿಸಿದ ಅಮಾನವೀಯ ಘಟನೆ ಪಂಜಾಬ್​ನಲ್ಲಿ ನಡೆದಿದೆ.

https://twitter.com/DGPPunjabPolice/status/1249188535393017858

ಇಂದು ಬೆಳಗ್ಗೆ 6:15ಕ್ಕೆ ಮಂಡಿ ಬೋರ್ಡ್​ ಬಳಿ ನಾಲ್ಕೈದು ಯುವಕರು ಕಾರಿನಲ್ಲಿ ಹೋಗುತ್ತಿದ್ದರು. ಆಗ ಕಾರನ್ನು ಅಡ್ಡಹಾಕಿದ ಪೊಲೀಸರು ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಆ ಪ್ರಶ್ನೆಗೆ ಉತ್ತರಿಸಲು ಯುವಕರ ಗುಂಪು ತಡಬಡಾಯಿಸಿದಾಗ ಪಾಸ್ ತೋರಿಸುವಂತೆ ಪೊಲೀಸರು ಕೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕರು ಚೆಕ್​ಪೋಸ್ಟ್​​ಗೆ ಕಾರನ್ನು ನುಗ್ಗಿಸಿದ್ದಾರೆ. ಆಗ ಅವರನ್ನು ಹಿಡಿಯಲು ಬಂದ ಎಎಸ್​ಐ​​ ಕೈಯನ್ನು ಮಚ್ಚಿನಿಂದ ಕತ್ತರಿಸಿ, ಇಬ್ಬರು ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಈ ಅಚಾನಕ್ ಘಟನೆಯಿಂದ ಗಾಬರಿಯಾದ ಪೊಲೀಸ್ ಸಿಬ್ಬಂದಿ ಎಎಸ್​ಐ ಹರ್ಜೀತ್ ಸಿಂಗ್ ಮತ್ತು ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಾರಿಯಾಗಿರುವ ಯುವಕರನ್ನು ಪತ್ತೆಹಚ್ಚಲು ಪೊಲೀಸರ ತಂಡ ರಚಿಸಲಾಗಿದ್ದು, ತಂಡವು ಆರೋಪಿಗಳ ಹುಡುಕಾಟದಲ್ಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights