ಪೆಟ್ರೋಲ್‌ ಬೆಲೆ ಏರಿಕೆಗೆ ಬೇಸತ್ತ ಯುವಕನಿಂದ ಹೊಸ ಪ್ಲಾನ್..!

ಇತ್ತೀಚಿಗೆ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಗಗನಕ್ಕೆ ಏರಿದೆ. ಅದರಲ್ಲೂ ಪೆಟ್ರೋಲ್ ಬೆಲೆ ಸರಿ ಸುಮಾರು ನೂರಕ್ಕೆ ಏರಿಕೆಯಾಗಿದೆ. ಈಗ ಒಂದು ಲೀಟರ್ ನಲ್ಲಿ‌ ಅದೆಷ್ಟು ಕಿಮೀ ಬೈಕ್ ಚೆಲಿಸಬಲ್ಲದು? ಅಬ್ಬಬ್ಬಾ ಅಂದರೆ 30 ರಿಂದ 40 ಕಿಮೀ. ಮಾತ್ರ. ಆದರೆ ಈ ವಿದ್ಯಾರ್ಥಿ ಕಂಡು ಹಿಡಿದ ಸೈಕಲ್, ಕೇವಲ 6 ರೂ.ನಲ್ಲಿ‌ 40 ಕಿಮೀ ಓಡ್ತದೆ ಅಂದ್ರೆ ನೀವು ನಂಬಲೇಬೇಕು…!

ಹೀಗೆ ರಸ್ತೆಯಲ್ಲಿ ಓಡುತ್ತಿರುವ ಈ ಸೈಕಲ್ ನೋಡಿದರೆ, ನಿಮಗೆ ಅಚ್ಚರಿ ಅನಸುತ್ತೆ. ಗದಗನ ಒಕ್ಕಲಗೇರಿ ನಿವಾಸಿ ಪ್ರಜ್ವಲ್ ಹಬೀಬ್ ಎಂಬ ಯುವಕ ಯಾರ ಸಹಾಯವೂ ಇಲ್ಲದೆ, ತನ್ನದೆಯಾದ ಪ್ಲ್ಯಾನ್ನಲ್ಲಿ ಮನೆಯಲ್ಲಿಯೇ ಎಲೆಕ್ಟ್ರಿಕಲ್ ಸೈಕಲ್ ತಯಾರಿಸಿದ್ದಾನೆ. ಗುಜರಿ ಸೇರಿದ್ದ ಸೈಕಲ್ ಈ ಯುವಕನ ಕೈಚಳಕ ದಿಂದ ಎಲೆಕ್ಟ್ರಿಕಲ್ ಬೈಸಿಕಲ್ ಆಗಿ‌ ಪರಿವರ್ತನೆ ಯಾಗಿದೆ.

ಕೇವಲ ೧೬ ನೇ ವಯಸ್ಸಿನ ಈ ಯುವಕ‌ ಮೊದಲ ವರ್ಷದ ಡಿಪ್ಲೋಮ್ ವಿದ್ಯಾರ್ಥಿ. ಈ ಸೈಕಲ್ ಗೆ 12 ವೋಲ್ಟ್ ನ ಎರಡು ಬ್ಯಾಟರಿ, 24 ಗೆರ್ಡ್ ಮೋಟಾರ್‌, ಅಳವಡಿಸಲಾಗಿದ್ದು, ಬ್ಯಾಟರಿ ಸಂಪರ್ಕ ಕಲ್ಪಿಸಿ ಚಾರ್ಜ್ ಮಾಡಿದರೆ ಮುಗಿಯಿತು. ಕೈಯಲ್ಲಿ ಎಕ್ಸ್ ಲೆಟರ್ ಮೂಲಕ ಸೈಕಲ್ ಓಡಿಸಬಹುದು. ಒಂದು ನಿಮಿಷಕ್ಕೆ 20 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುತ್ತದೆ. ಹಾಗೇ ಒಂದುಗಂಟೆ ಚಾರ್ಜ್ ಮಾಡಿದರೆ ಸಾಕು ಸುಮಾರು ೨೫ ರಿಂದ ೩೦ ಕಿಲೋಮೀಟರ್ ವರೆಗೆ ಓಡಿಸಬಹುದು. ಅಕಸ್ಮಾತ್ ದೂರಹೋದ ಸಂದರ್ಭದಲ್ಲಿ ಬ್ಯಾಟರಿ ಖಾಲಿಯಾದರೂ ತುಳಿದುಕೊಂಡು ಬರಬಹುದು. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹಾಗೂ ವಾಯುವ್ಯ ಮಾಲಿನ್ಯ ನಿಯಂತ್ರಣಕ್ಕಾಗಿ ಈ ಸೈಕಲ್ ತಯಾರಿಸಿದ್ದೆನೆ ಅಂತಿದ್ದಾನೆ ಯುವಕ ಪ್ರಜ್ವಲ್.

ಇನ್ನೂ ಈ ಪ್ರಜ್ವಲ್ ಹಬೀಬ್ ಡಿಪ್ಲೋಮಾ ಇ & ಇ ಪ್ರಥಮ ವರ್ಷ ವ್ಯಾಸಂಗ ಮಾಡುತಿದ್ದಾನೆ. ಕಡು ಬಡತನ ಕುಟುಂಬವಾದ್ದರಿಂದ ತಂದೆ ಪರಶುರಾಮ ಹಬೀಬ್ ಎಗ್ ರೈಸ್ ಅಂಗಡಿಯನ್ನು ಇಟ್ಟುಕೊಂಡು ಜೀವನವನ್ನು ನಡೆಸುತ್ತಿದ್ದಾರೆ. ಇನ್ನೂ ಈ ಎಲೆಕ್ಟ್ರಿಕ್ ಸೈಕಲ್ ಕೇವಲ ೯ ಸಾವಿರ ರೂಪಾಯಿ ನಲ್ಲಿ ತಯಾರಾಗಿದೆ. ಈ ವಿದ್ಯಾರ್ಥಿ ಈ ಸೈಕಲ್ ತೆಗೆದುಕೊಂಡು ಹೊರಟರೆ ಸಾಕು, ಎಲ್ಲರೂ ನಿಲ್ಲಿಸಿ ಸೂಪರ್ ಆಗಿದೆ ಅಂತ ಕಾಮೆಂಟ್ ಮಾಡಿ, ಶಹಬಾಶ್ ಹೇಳಿ ಸೆಲ್ಫಿ ತೆಗೆದುಕೊಳ್ತಾರೆ.

ಶಾಲಾ- ಕಾಲೇಜ್ ಗೆ ಹೋಗುವ ವಿದ್ಯಾರ್ಥಿಗಳು, ಆಫೀಸ್ ಇತರೆ ಕೆಲಸಕ್ಕೆ ಹೋಗುವವರು ಕೂಡಾ ಇಂತಹ ಎಲೆಕ್ಟ್ರಿಕಲ್ ಸೈಕಲ್ ಬಳಸಬಹುದು. ಬಡತನದಲ್ಲಿ ಬೆಳೆದ ನನ್ನ ಮಗ ಎಲೆಕ್ಟ್ರಿಕ್ ಸೈಕಲ್ ಮಾಡಿರೋದು ನನಗೆ ಬಹಳ ಖುಷಿಯಾಗಿದೆ ಅಂತಾರೆ ವಿದ್ಯಾರ್ಥಿಯ ತಾಯಿ. ತಾಂತ್ರಿಕತೆಯ ಯಾವ ಕೋರ್ಸ್ ಮುಗಿಸದೇ ಚಿಕ್ಕ ವಯಸ್ಸಿನಲ್ಲಿ ಸಾಧನೆಗೆ ಮುಂದಾಗಿರುವುದು ತುಂಬಾನೆ‌ ಖುಷಿ ಆಗ್ತಿದೆ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಈ ಯುವಕನಿಗೆ ಪ್ರೋತ್ಸಾಹಿಸಬೇಕು ಅಂತಿದ್ದಾರೆ ಸ್ಥಳಿಯರು.

ಒಟ್ನಿನಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಈ ಎಲೆಕ್ಟ್ರಿಕ್ ಸೈಕಲ್ ತುಂಬಾನೆ ಹವಾ ಮಾಡಿದೆ. ವಿದ್ಯಾರ್ಥಿಯ ಕಮ್ಮಾಲ್ ನೋಡಿ ಎಲ್ಲರೂ ನಿಬ್ಬೆರಗಾಗಿದ್ದಾರೆ. ಸೂಕ್ತವಾದ ಪ್ರೋತ್ಸಾಹ ಸಿಕ್ಕರೆ ಎಲೆಕ್ಟ್ರಿಕ್ ಫೀಲ್ಡ್ ನಲ್ಲಿ ಈ ವಿದ್ಯಾರ್ಥಿ ಅಮೋಘವಾದ ಸಾಧನೆ ಮಾಡೋದರಲ್ಲಿ ಸಂಶಯವಿಲ್ಲಾ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights