ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾದ ರಮೇಶ್ ಜಾರಕಿಹೊಳಿ ಹೇಳಿದ್ದೇನು..?

ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ವಿಚಾರಣೆ ಮಾಡಿದ ಎಸ್ಐಟಿ ಕೆಲವು ಮಾಹಿತಿಯನ್ನು ಕಲೆ ಹಾಕಿದೆ.

ಹೌದು.. ಸಿಡಿ ವಿಚಾರವಾಗಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಸಿಡಿಯಲ್ಲಿ ಕಾಣಿಸಿಕೊಂಡ ಎಂದು ಆರೋಪಿಸಲಾದ ರಮೇಶ್ ಜಾರಕಿಹೊಳಿಯನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗಿರಲಿಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿಯನ್ನು ವಿಚಾರಣೆಗೆ ಒಳಪಡಿಸಬೇಕೆಂಬ ಮಾತುಗಳು ಕೇಳಿ ಬರುತ್ತಿದ್ದವು. ಇದರ ಬೆನ್ನಲ್ಲೆ ರಮೇಶ್ ಜಾರಕಿಹೊಳಿಗೆ ಸಮನ್ಸ್ ಜಾರಿ ಮಾಡಿದ ಎಸ್ಐಟಿ ವಿಚಾರಣೆಯನ್ನು ಮಾಡಿದೆ. ಮೂರು ಗಂಟೆಗಳ ಕಾಲ ಮಾಜಿ ಸಚಿವರನ್ನು ಎಸ್ ಐಟಿ ವಿಚಾರಣೆಗೊಳಪಡಿಸಿ ನಾನಾ ಪ್ರಶ್ನೆಗಳನ್ನು ಮಾಡಿದೆ.

ಸಿಡಿ ಸ್ಫೋಟದ ತಂಡದಿಂದ ನಿಜಕ್ಕೂ ಬ್ಲ್ಯಾಕ್ ಮೇಲ್ ನಡೆದಿತ್ತೇ? ಯುವತಿ ತಮಗೆ ಪರಿಚಯವಿಲ್ಲವೇ? ಸಿಡಿ ಸ್ಫೋಟದ ಸೂತ್ರದಾರರು ಯಾವಾಗ ಸಂಪರ್ಕಿಸಿದ್ದರು? ಹೀಗೆ ನೂರಾರು ಪ್ರಶ್ನಗಳನ್ನು ಹಾಕಿ ಮಾಜಿ ಸಚಿವರಿಂದ ಅಧಿಕಾರಿಗಳು ಹೇಳಿಕೆ ಪಡೆದಿದ್ದಾರಂದು ಮೂಲಗಳು ತಿಳಿಸಿವೆ.

ಆದರೆ ಕೆಲ ಪ್ರಶ್ನೆಗಳಿಂದ ಜಾರಕಿಹೊಳಿ ಕೋಪಗೊಂಡು ಅಲ್ಲಿಂದ ನಿರ್ಗಮಿಸಲು ಪ್ರಯತ್ನಿಸಿದರು. ಬಳಿಕ ಅವರನ್ನು ಸಮಧಾನ ಮಾಡಿ ವಿಚಾರಣೆಗೊಳಪಡಿಸಲಾಗಿದೆ ಎನ್ನಲಾಗುತ್ತಿದೆ.

ಆದರೆ ಪ್ರಕರಣ ವಿಚಾರಣೆ ಹಂತದಲ್ಲಿ ಇರುವುದರಿಂದ ವಿಚಾರಣೆಯ ಬಗ್ಗೆ ಎಸ್ ಐಟಿ ಯಾವುದೇ ಮಾಹಿತಿಯನ್ನು ನೀಡಿಲ್ಲ.  ಆದರೆ ರಮೇಶ್ ಮಾಹಿತಿ ಆಧಾರದ ಮೇಲೆ ಕೆಲ ಜನರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದೆ.

ಜೊತೆಗೆ ಇನ್ನೇನು ಕೆಲ ದಿನಗಳಲ್ಲಿ ಯುವತಿ ಪೊಲೀಸ್ ಮುಂದೆ ಹಾಜರಾಗುತ್ತಾಳೆಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights