Fact check: ಪಾಟ್ನಾದಲ್ಲಿ ರೈಲ್ವೇ ಉದ್ಯೋಗಾಕಾಂಕ್ಷಿಗಳು ನಡೆಸಿದ ಹಿಂಸಾಚಾರಕ್ಕೆ ಖಾನ್ ಸರ್ ಪ್ರಚೋದನೆ ಕಾರಣ ಎಂದು ಹಳೆಯ ವಿಡಿಯೋ ತಪ್ಪಾಗಿ ಹಂಚಿಕೊಳ್ಳಲಾಗಿದೆ

ಬಿಹಾರದ ಪಾಟ್ನಾದಲ್ಲಿ ಇತ್ತೀಚೆಗೆ ನಡೆದ RRB-NTPC ಆಕಾಂಕ್ಷಿಗಳ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ಈ ಹಿಂಸಾಚಾರದ ಹಿಂದೆ ಯಾರೆಲ್ಲಾ ಇದ್ದಾರೆ ಎಂದು ತನಿಖೆ ನಡೆಸಿರುವ ಪೊಲೀಸರು ಖಾನ್ ಸರ್ ಎಂಬುವವರ ಹೆಸರನ್ನು ಪ್ರಕರಣದಲ್ಲಿ ಸೇರಿಸಿ ಎಫ್‌ಐಆರ್ ಮಾಡಲಾಗಿದೆ.  ಖಾನ್ ಸರ್ ಎಂಬುವವರು ಖಾನ್ ಜಿಎಸ್ ಸಂಶೋಧನಾ ಕೇಂದ್ರವನ್ನು ನಡೆಸುತ್ತಿರುವ ಮುಖ್ಯಸ್ಥರು. ಪಾಟ್ನಾದಲ್ಲಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಲು ಖಾನ್ ಸರ್ ಪ್ರೇರೇಪಿಸಿದ್ದಾರೆ ಎನ್ನವ 18 ಸೆಕೆಂಡುಗಳ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಖಾನ್ ಸರ್ ಹೇಳಿದ್ದಾರೆ ಎನ್ನಲಾದ ವೈರಲ್ ವಿಡಿಯೊದಲ್ಲಿ “ನಾವು ಕರೋನ ವೈರಸ್ ಸಾಂಕ್ರಾಮಿಕದ ಮಧ್ಯದಲ್ಲಿದ್ದೇವೆ ಮತ್ತು ಯುವಕರು ಬೀದಿಗಿಳಿದಿಲ್ಲ ಎಂದು ಸರ್ಕಾರವು ಸುಮ್ಮನಿರುವಂತೆ ಕಾಣುತ್ತಿದೆ. ಆದರೆ ಇದೇ ಸ್ಥಿತಿ ಮುಂದುವರಿದರೆ ಯುವಕರು ಬೀದಿ ಪಾಲಾಗುವುದು ಗ್ಯಾರಂಟಿ. ಸರ್ಕಾರ ಉದ್ಯೋಗ ನೀಡದಿದ್ದರೆ ಅವರನ್ನು ಬೀದಿಗಿಳಿಯುವಂತೆ ಮಾಡುತ್ತೇವೆ ಎಂದು ಭಾರತ ಮಾತೆಯ ಮೇಲೆ ಪ್ರಮಾಣ ಮಾಡುತ್ತೇನೆ. ಪರಿಸ್ಥಿತಿ ಸುಧಾರಿಸದಿದ್ದರೆ, ಯುವಕರನ್ನು ಬೀದಿಗೆ ತರಲಾಗುತ್ತದೆ ಮತ್ತು ಅವರು ಧರಣಿಗಿಳಿದರೆ ದೆಹಲಿಯಲ್ಲಿ ಜಾಗ ಸಾಲದು ಎಂದು ವಿಡಿಯೊದ ತುಣಿಕಿನಲ್ಲಿ ಹೇಳಿರುವುದನ್ನು ಕೇಳಬಹುದು.

ವಿಡಿಯೊದ ಹೇಳಿಕೆಯನ್ನು ಪರಿಗಣಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಈ ಪೈಕಿ ಖಾನ್ ಸರ್ ಎಂಬಾತನ ಹೆಸರು ಬಹಿರಂಗವಾಗಿದೆ. ಖಾನ್ ಸರ್ ಎಂಬಾತ ತನ್ನ ವಿಶಿಷ್ಟ ಶೈಲಿಯ ಬೋಧನೆಯಿಂದ ಖ್ಯಾತಿ ಪಡೆದಿದ್ದರು. ಈ ಖಾನ್ ಸರ್ ಹಾಗೂ ಆತನ ಖಾಸಗಿ ತರಬೇತಿ ಸಂಸ್ಥೆಯಲ್ಲಿನ ಇತರ 16 ಮಂದಿ ರೈಲ್ವೆ ಉದ್ಯೋಗದ ಆಕಾಂಕ್ಷಿಗಳಿಗೆ ಹಿಂಸಾಚಾರ ನಡೆಸಲು ಪ್ರಚೋದನೆ ನೀಡಿದ್ದರು ಎಂಬ ಆಪಾಧನೆ ಮೇರೆಗೆ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಆರ್‌ಆರ್‌ಬಿ-ಎನ್‌ಟಿಪಿಸಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ, ವೈರಲ್ ವಿಡಿಯೊದ ಪರಿಗಣಿಸಿ ಗುಂಪನ್ನು ಪ್ರಚೋದಿಸಿದ ಆರೋಪದ ಮೇಲೆ ಖಾನ್ ಸರ್, 16 ವಿದ್ಯಾರ್ಥಿಗಳು ಮತ್ತು ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೊ ಬಗ್ಗೆ ಅನುಮಾನ ಮೂಡಿದ್ದು ವೈರಲ್ ವಿಡಿಯೋದ ಸತ್ಯಾಸತ್ಯತೆಗಳನ್ನು ತಿಳಿಯಲು ಫ್ಯಾಕ್ಟ್‌ಚೆಕ್ ಮಾಡಲಾಗಿದೆ.

ಫ್ಯಾಕ್ಟ್‌ಚೆಕ್ 

You tube ನಲ್ಲಿ ಹಲವು ಕೀ ವರ್ಡ್ ಸರ್ಚ್ ನಡೆಸಿದಾಗ ಆಗಸ್ಟ್ 31, 2020 ರಂದು ಅಪ್‌ಲೋಡ್ ಮಾಡಿದ ಖಾನ್ GS ರಿಸರ್ಚ್ ಸೆಂಟರ್ ಚಾನೆಲ್‌ನಲ್ಲಿ ಮೂಲ ವೀಡಿಯೊ ಲಭ್ಯವಾಗಿದೆ. Twitter ನಲ್ಲಿ ವೈರಲ್ ಆಗಿರುವ ಕ್ಲಿಪ್ 13:00 ನಿಮಿಷಕ್ಕೆ ಪ್ರಾರಂಭವಾಗುತ್ತದೆ. ವೀಡಿಯೊದಲ್ಲಿ, ಖಾಲಿ ಹುದ್ದೆಗಳಿಗೆ ಪರೀಕ್ಷೆಗಳನ್ನು ನಡೆಸುವಲ್ಲಿ ಎಸ್‌ಎಸ್‌ಸಿ-ರೈಲ್ವೆಯ ವಿಫಲತೆಯನ್ನು ಖಾನ್ ಸರ್ ಟೀಕಿಸಿದ್ದಾರೆ.

 

SSC (Staff Service Commission) ವಿರುದ್ಧದ ವಿದ್ಯಾರ್ಥಿಗಳ ಅಭಿಯಾನವನ್ನು ರವೀಶ್ ಕುಮಾರ್ ಅವರು ಸೆಪ್ಟೆಂಬರ್ 1, 2020 ರಂದು ವಿವರಿಸಿದ್ದಾರೆ.
 

 

ಆದ್ದರಿಂದ, ಎಸ್‌ಎಸ್‌ಸಿ-ರೈಲ್ವೆ ಪರೀಕ್ಷೆಗಳನ್ನು ನಡೆಸುವಲ್ಲಿ ವಿಫಲವಾಗಿದೆ ಎಂದು ಖಾನ್ ಸರ್ ಟೀಕಿಸುವ ಹಳೆಯ ವೀಡಿಯೊವನ್ನು ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದ್ದು, ವಿಡಿಯೊವನ್ನು ಇತ್ತೀಚಿಗೆ ನಡೆದ  RRB-NTPC ಆಕಾಂಕ್ಷಿಗಳ ಪ್ರತಿಭಟನೆ, ಹಿಂಸಾಚಾರಕ್ಕೆ  ಪ್ರಚೋದಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿರಿ: Fact check: 4 ಕಿಡ್ನಿಗಳನ್ನು ದಾನ ಮಾಡಲಾಗುತ್ತಿದೆ ಎಂಬ ಸಂದೇಶ ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights