Fact check: 4 ಕಿಡ್ನಿಗಳನ್ನು ದಾನ ಮಾಡಲಾಗುತ್ತಿದೆ ಎಂಬ ಸಂದೇಶ ಸುಳ್ಳು

ಆತ್ಮೀಯ ಸ್ನೇಹಿತರೇ, ಡಾ ಸುಧೀರ್ ಮತ್ತು ಅವರ ಪತ್ನಿ ಅಪಘಾತದಲ್ಲಿ ಸಾವನ್ನಪ್ಪಿದ್ದು (ನನ್ನ ಸ್ನೇಹಿತನ ಸಹೋದ್ಯೋಗಿ) ಅವರ ನಾಲ್ಕು ಕಿಡ್ನಿಗಳು ಲಭ್ಯವಿದೆ, ಅವರ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದ್ದಾರೆ. ಸುಧೀರ್  ಅವರ ರಕ್ತದ ಗುಂಪು ಬಿ+ ಮತ್ತು ಅವರ ಪತ್ನಿಯ ರಕ್ತದ ಗುಂಪು ಒ+ ಆಗಿದ್ದು  ಅವರ ಕುಟುಂಬ ಮಾನವೀಯ ಉದ್ದೇಶಕ್ಕಾಗಿ ಕಿಡ್ನಿ ದಾನ ಮಾಡಲು ನಿರ್ಧರಿಸಿದೆ. ಹಾಗಾಗಿ ಯಾರಿಗಾದರೂ ಅವಶ್ಯಕತೆ ಇದ್ದರೆ ಇದರ ಅನುಕೂಲತೆಗಳನ್ನು ಪಡೆದುಕೊಳ್ಳಬಹುದು, ದಯವಿಟ್ಟು ಪ್ರಸಾರ ಮಾಡಿ ಎಂದು mobile ಸಂಖ್ಯೆಯನ್ನು ನೀಡಿ ಸಂಪರ್ಕಿಸಿ ಎಂದು ಸಂದೇಶದಲ್ಲಿ ನಮೂದಿಸಿದಾರೆ. ಇದು ವಾಟ್ಸಾಪ್ ಮತ್ತು ಫೇಸ್‌ಬುಕ್‌ಗಳಲ್ಲಿ ವೈರಲ್ ಆಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

 

ಕೆಲವು ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ ವೈರಲ್ ಸಂದೇಶಕ್ಕೆ ಸಂಬಂಧಿಸಿದಂತೆ ಕೆಲವು ವರದಿಗಳು ಲಭ್ಯವಾಗಿವೆ. yourQuote ಎಂಬ ವೆಬ್‌ಸೈಟ್ ನಲ್ಲಿ 2018 ಮೇ 12 ರಂದು ವರದಿಯನ್ನು ಇಲ್ಲಿ ನೋಡಬಹುದು. ಹಾಗೆಯೆ 2017 ರಲ್ಲಿ ಇದೇ ಸಂದೇಶ  ಅದೇ ಮೊಬೈಲ್ ಸಂಖ್ಯೆಯನ್ನೊಳಗೊಂಡಂತೆ ವಾಟ್ಸಪ್ ಮತ್ತು ಫೇಸ್‌ಬುಕ್ ನಲ್ಲಿ ವೈರಲ್ ಆಗಿದೆ. ಹಾಗೆಯೆ 2020 ಮತ್ತು 2021ರಲ್ಲಿಯೂ ವೈರಲ್ ಆಗಿದೆ. ಇದನ್ನು ಹಲವಾರು ಟ್ವಿಟರ್‌ನಲ್ಲಿಯೂ ಸಹ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್:

ಫ್ಯಾಕ್ಟ್ ಚೆಕ್ ಮೂಲಕ ವೈರಲ್ ಆದ ಸಂದೇಶದ ಸತ್ಯಾಸತ್ಯತೆಗಳನ್ನು ಹುಡುಕಿದಾಗ ಲಭ್ಯವಾದ ಮಾಹಿತಿ ಪ್ರಕಾರ ಇದೊಂದು ಸುಳ್ಳು ಸುದ್ದಿಯಾಗಿದೆ. ಈ ಸುದ್ದಿ ಸುಮಾರು ದಿನಗಳಿಂದ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ.

ಮತ್ತೊಮ್ಮೆ ವೈರಲ್ ಸಂದೇಶದಲ್ಲಿ ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿಯು ವೈರಲ್ ಸಂದೇಶದಲ್ಲಿ ಇರುವ ಸುದ್ದಿ ಸುಳ್ಳು.  ಆ ರೀತಿ ದಾನಿಗಳಾಗಲಿ, ಕಿಡ್ನಿಯನ್ನು ನೀಡುತ್ತೇವೆ ಎಂಬ ಸುದ್ದಿಗಳು ಸುಳ್ಳಾಗಿವೆ. ಅದನ್ನು ಶೇರ್ ಮಾಡಬೇಡಿ ಎಂದಿದ್ದಾರೆ. ಹಾಗಾಗಿ ಫ್ಯಾಕ್ಟ್ ಚೆಕ್ ಮೂಲಕ ಜಾಗೃತಿ  ಮೂಡಿಸಲಾಗುತ್ತಿದೆ.

ಮತ್ತಷ್ಟು ಸರ್ಚ್ ಮಾಡಿದಾಗ ವೈರಲ್ ಆದ ಸಂದೇಶಕ್ಕೆ ಸಂಬಂಧಿಸಿದಂತೆ The Hindu ಮತ್ತು Thelengana today ಯಲ್ಲಿ ವರದಿಗಳು ಬಂದಿದ್ದು ಕೆಲವು ವರ್ಷಗಳಿಂದ ಹರಿದಾಡುತ್ತಿರುವ ಈ ಸುದ್ದಿ ಸುಳ್ಳಾಗಿದೆ ಎಂದು ವರದಿ ಮಾಡಿವೆ.

ಒಟ್ಟಾರೆ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ(ವಾಟ್ಸಪ್‌ನಲ್ಲಿ) ವೈರಲ್ ಆಗುತ್ತಿರುವ ಈ ಸುದ್ದಿ ಸುಳ್ಳಾಗಿದ್ದು ಅದನ್ನು ನಂಬುವ ಜನರು ಹಲವರಿಗೆ ಮತ್ತೆ ಮತ್ತೆ ಶೇರ್ ಮಾಡುವ ಮೂಲಕ ತಪ್ಪು ಸಂದೇಶವನ್ನು ಹಂಚುತ್ತಿದ್ದಾರೆ ಎಂದು ಫ್ಯಾಕ್ಟ್‌ಚೆಕ್ ಮೂಲಕ ಬಯಲಾಗಿದೆ.


ಇದನ್ನು ಓದಿರಿ: Fact check: ವಿದ್ಯಾರ್ಥಿನಿ ಸಾವಿಗೆ ಮತಾಂತರದ ಸುಳ್ಳು ಆರೋಪ ಹೊರಿಸಿದ “ಪೋಸ್ಟ್ ಕಾರ್ಡ್ ಕನ್ನಡ”


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights