FACT CHECK | ಅರವಿಂದ್ ಕೇಜ್ರಿವಾಲ್ ಜೆಇಇ ಪರಿಕ್ಷೆಯಲ್ಲಿ ಫೇಲ್ ಆಗಿದ್ದರಂತೆ ? ವೈರಲ್ ಪೋಸ್ಟ್ನ ಅಲೀಯತ್ತೇನು ಗೊತ್ತೇ?
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವಾಗಿದ್ದು ಅವರಿಗೆ ಸಂಬಂಧಿಸಿದ ಪೋಸ್ಟ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಅರವಿಂದ್ ಕೇಜ್ರಿವಾಲ್ ಜೆಇಇ ಪಾಸ್ ಆಗದೇ ಕಾರ್ಪೊರೇಟ್ ಕೋಟಾದ ಮೂಲಕ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರವೇಶ ಪಡೆದಿದ್ದಾರೆ ಎಂಬ ಹೇಳಿಕೆಯಿರುವ ಪೋಸ್ಟ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಏಪ್ರಿಲ್ 18, 2016 ರಂದು ಐಐಟಿ ಖರಗ್ಪುರ ನೀಡಿರುವ ಆರ್ಟಿಐ ಉತ್ತರ ಪ್ರತಿಯನ್ನು ಉಲ್ಲೇಖಿಸಿ, ಅರವಿಂದ್ ಕೇಜ್ರಿವಾಲ್ ಅವರ ಜೆಇಇ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿಲ್ಲ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ.
ಬಹಳಷ್ಟು ಫೇಸ್ಬುಕ್ ಹಾಗೂ ಟ್ವಿಟರ್ ಬಳಕೆದಾರರು ಈ ಫೋಟೋಗಳನ್ನು ಹಿಂದಿ ವಾಕ್ಯಗಳೊಂದಿಗೆ ಹಂಚಿಕೊಂಡಿದ್ದು, ಅದರಲ್ಲಿ ಲವಣಾಸುರ ಐಐಟಿಯ ಆರ್ಟಿಐ ಮಾಹಿತಿಯಂತೆ ಅರವಿಂದ್ ಕೇಜ್ರಿವಾಲ್ ಜೆಇಇ ಪರೀಕ್ಷೆ ಬರೆಯದೇ ಕೋಟಾದಡಿ ಐಐಟಿಗೆ ಪ್ರವೇಶ ಪಡೆದಿದ್ದಾರೆ. ಜಿಂದಾಲ್ ಕಂಪನಿಯ ಕೋಟಾದಲ್ಲಿ ಅರವಿಂದ್ ಕೇಜ್ರಿವಾಲ್ ಐಐಟಿ ಪ್ರವೇಶ ಪಡೆದಿದ್ದು, ಅವರ ಜೆಇಇ ಪರೀಕ್ಷೆಯ ಫಲಿತಾಂಶ ಇದುವರೆಗೂ ಸಾರ್ವಜನಿಕಗೊಳಿಸಿಲ್ಲ ಎಂದು ಬರೆಯಲಾಗಿದೆ.
ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ? ಅರವಿಂದ ಕೇಜ್ರಿವಾಲ್ ಜೆಇಇ ಪಾಸ್ ಆಗದೆ ಕಾರ್ಪೊರೇಟ್ ಕೋಟಾದ ಅಡಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರವೇಶ ಪಡೆದಿದ್ದಾ ಎಂಬುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 10 ಜುಲೈ 2016 ಡೆಕ್ಕನ್ ಹೆರಾಲ್ಡ್ ಮಾಡಿದ ವರದಿ ಲಭ್ಯವಾಗಿದೆ.

ವರದಿ ಪ್ರಕಾರ, ಐಐಟಿ ಖರಗ್ಪುರ ಮೊದಲು ನೀಡಿದ ಆರ್ಟಿಐ ಉತ್ತರದಿಂದ ವಿವಾದ ಸೃಷ್ಟಿಯಾದ ಬಳಿಕ ಐಐಟಿ ಖರಗ್ಪುರ ಮತ್ತೊಂದು ಆರ್ಟಿಐಗೆ ಪ್ರತಿಕ್ರಿಯಿಸಿ ಉತ್ತರಿಸಿದೆ. ಅದರಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಜೆಇಇ ರ್ಯಾಂಕಿಂಗ್ ಅನ್ನು ಸ್ಪಷ್ಟಪಡಿಸಲಾಗಿದೆ. ಮೊದಲು ರ್ಯಾಂಕಿಂಗ್ ಮಾಹಿತಿ ಸಿಕ್ಕಿಲ್ಲವಾದರೂ ಬಳಿಕ ಹುಡುಕಿದಾಗ ಅರವಿಂದ್ ಕೇಜ್ರಿವಾಲ್ ಅವರು ಜೆಇಇನಲ್ಲಿ 563 ರ್ಯಾಂಕಿಂಗ್ ಪಡೆದಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಪದವಿಯ ಮಾಹಿತಿಯನ್ನು ನೀಡುವಂತೆ ಕೇಂದ್ರ ಮಾಹಿತಿ ಆಯೋಗದ ಏಳು ವರ್ಷಗಳ ಹಿಂದಿನ ಆದೇಶವನ್ನು ಗುಜರಾತ್ ಹೈಕೋರ್ಟ್ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಈ ಪೋಸ್ಟ್ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಅದಲ್ಲದೇ ಈ ಪ್ರಕರಣದಲ್ಲಿ ದಿಲ್ಲಿ ಸಿಎಂಗೆ 25 ಸಾವಿರ ರೂ. ದಂಡವನ್ನು ವಿಧಿಸಿದ ಹೊರತಾಗಿಯೂ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷವು ಮೋದಿ ಮೇಲೆ ವಾಗ್ದಾಳಿ ಮುಂದುವರಿಸಿತ್ತು. ಅದಲ್ಲದೇ ಪ್ರಧಾನಿ ಪದವಿ ಪ್ರಮಾಣ ಪತ್ರ ಸುಳ್ಳು ಎಂದು ನರೇಂದ್ರ ಮೋದಿ ಅವರ ಲೋಕಸಭಾ ಸದಸ್ಯತ್ವವನ್ನು ಪ್ರಶ್ನಿಸಲಾಗಿತ್ತು.
ಐಐಟಿ ಖರಗ್ಪುರದ ಮಾಜಿ ರಿಜಿಸ್ಟ್ರಾರ್ ಪ್ರದೀಪ್ ಪೇನೆ ಎಬಿಪಿ ನ್ಯೂಸ್ ಜೊತೆ ಮಾತನಾಡಿದ್ದು, ಅರವಿಂದ್ ಕೇಜ್ರಿವಾಲ್ ಅವರು ಜೆಇಇನಲ್ಲಿ 563ನೇ ರ್ಯಾಂಕಿಂಗ್ ಪಡೆದಿದ್ದಾರೆ. ಜಿಂದಾಲ್ ಗ್ರೂಫ್ನ ಯಾವುದೇ ಕೋಟಾದಡಿ ಪ್ರವೇಶ ಪ್ರವೇಶ ಪಡೆದಿಲ್ಲ ಎಂದು ಹೇಳಿದ್ದರು.
ಐಐಟಿ ಖರಗ್ಪುರದ ಉಪ ರಿಜಿಸ್ಟ್ರಾರ್ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿ ಅನಂತಬಂಧು ಪಾತ್ರ ಅವರು ಅಭಿಷೇಕ್ ಮೋದಕ್ ಎನ್ನುವವರು ಆರ್ಟಿಐ ಅರ್ಜಿಗೆ ನೀಡಿರುವ ಉತ್ತರವನ್ನು ಬೂಮ್ ಉಲ್ಲಖಿಸಿ ವರದಿಯನ್ನು ಪ್ರಕಟಿಸಿದೆ. ಅದರಲ್ಲಿ ಅರವಿಂದ್ ಕೇಜ್ರಿವಾಲ್ ಐಐಟಿಜೆಇಇ ರ್ಯಾಂಕಿಂಗ್ನಲ್ಲಿ 563ನೇ ರ್ಯಾಂಕಿಂಗ್ ಪಡೆದಿರುವುದು ಇದೆ. ಇನ್ನು, ಮೋದಕ್ ಅವರನ್ನು ಟ್ವಿಟ್ಟರ್ ಮೂಲಕ ಸಂಪರ್ಕಿಸಿದಾಗ ಆರ್ಟಿಐ ಉತ್ತರ ಸರಿಯಾಗಿದೆ ಎಂದು ಹೇಳಿದ್ದಾರೆ ಎಂದು ಬೂಮ್ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನದಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 19ನೇ ವಯಸ್ಸಿನಲ್ಲಿ ಅರವಿಂದ್ ಕೇಜ್ರಿವಾಲ್ ಅತ್ಯಾಚಾರ ಎಸಗಿದ್ದರೇ?

