FACT CHECK | 19ನೇ ವಯಸ್ಸಿನಲ್ಲಿ ಅರವಿಂದ್ ಕೇಜ್ರಿವಾಲ್ ಅತ್ಯಾಚಾರ ಎಸಗಿದ್ದರೇ?
37 ವರ್ಷದ ಹಿಂದಿನ ಪತ್ರಿಕೆಯ ತುಣುಕೊಂದನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. 8 ಜೂನ್ 1987 ರ ಪತ್ರಿಕೆ ಕ್ಲಿಪ್ಪಿಂಗ್ ಅನ್ನು ವ್ಯಾಪಕವಾಗಿ ಪ್ರಸಾರ ಮಾಡುತ್ತ, ಐಐಟಿ ವಿದ್ಯಾರ್ಥಿ, ಅರವಿಂದ್ ಕೇಜ್ರಿವಾಲ್ ತನ್ನ 19ನೇ ವಯಸ್ಸಿನಲ್ಲಿ ಅತ್ಯಾಚಾರ ಎಸಗಿದ್ದರು ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.
https://twitter.com/bhaskerreddy70/status/1775031357217161661
“19 ವರ್ಷದ ಖರಗ್‌ಪುರದ ವಿದ್ಯಾರ್ಥಿ ಅರವಿಂದ್ ಕೇಜ್ರಿವಾಲ್ ಸ್ಥಳೀಯ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ್ದರು. ಈ ಕುರಿತು 8 ಜೂನ್ 1987 ರಲ್ಲಿ ದ ಟೆಲಿಗ್ರಾಫ್ ಪತ್ರಿಕೆ ವರದಿಯನ್ನು ಪ್ರಕಟಿಸಿದೆ.. ನೋಡಿ ಇದು ಇಂದಿನ ದೆಹಲಿ ಮುಖ್ಯಮಂತ್ರಿಯ ಅಸಲಿಯತ್ತು” ಎಂಬ ಪೇಪರ್ ಕಟ್ಟಿಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪೇಪರ್ ಕಟ್ಟಿಂಗ್ ವರದಿಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಗಂಭೀರ ಆರೋಪವನ್ನ ಮಾಡಲಾಗಿದೆ. ಪ್ರಸ್ತುತ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿಯನ್ನು ಕಳೆದ ತಿಂಗಳು ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿ ಬಂಧಿಸಿತ್ತು.
ಅರವಿಂದ್ ಕೇಜ್ರಿವಾಲ್ ಅವರ ವಿರೋಧಿ ಬಣವು ಕೂಡ ಇದೇ ವರದಿಯನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ವರದಿ ಪತ್ರಿಕೆಯೊಂದರ ಪೇಪರ್ ಕಟ್ಟಿಂಗ್ ಆಗಿರುವುದರಿಂದ ಬಹುತೇಕರು ಇದು ನಿಜವೆಂದು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೇಪರ್ ಕಟ್ಟಿಂಗ್‌ನ ತುಣುಕಿನಲ್ಲಿ ಪ್ರಸಾರ ಮಾಡಲಾಗ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, “ದಿ ಟೆಲಿಗ್ರಾಫ್” ಎಂಬ ಪತ್ರಿಕೆಯಲ್ಲಿ ಇಂತಹ ವರದಿಗಳು ಬಂದಿರುವ ಬಗ್ಗೆಯಾಗಲಿ, ಅತ್ಯಾಚಾರ ಕುರಿತಾದ ಉಲ್ಲೇಖವಾಗಲಿ ಕಂಡುಬಂದಿಲ್ಲ. ಇನ್ನು ವೈರಲ್ ಪೇಪರ್ ಕಟ್ಟಿಂಗ್ಸ್ ಅನ್ನ ಗಮನಿಸಿದಾಗ ಕೆಲವೊಂದು ವ್ಯಾತ್ಯಾಸಗಳು ಕಂಡು ಬಂದಿದೆ.
ವೈರಲ್ ಆಗುತ್ತಿರುವ ಪತ್ರಿಕೆಯ ಹೆಸರು ದ ಟೆಲಿಗ್ರಾಫ್ ಎಂದಿದೆ ಮತ್ತು ಅದರಲ್ಲಿನ ಶೀರ್ಷಿಕೆ IIT ವಿದ್ಯಾರ್ಥಿ ಅತ್ಯಾಚಾರದ ಆರೋಪಿ ಎಂದು ಅರ್ಧ ಸುದ್ದಿಯನ್ನು ಪ್ರಕಟಿಸಲಾಗಿದೆ. ಆದರೆ ಮೂರನೇ ಕಾಲಂನಲ್ಲಿ ಬೇರೆಯದ್ದೇ ಸುದ್ದಿ ಇದೆ. ವೈರಲ್ ಆಗುತ್ತಿರುವ ಪೇಪರ್ ಕಟ್ಟಿಂಗ್ fodey.com ನಂತಹ ವೆಬ್‌ಸೈಟ್ ಬಳಸಿ ಸೃಷ್ಠಿಸಿರುವ ನಕಲಿ ಪೇಪರ್ ಅವೃತ್ತಿಯಾಗಿದೆ ಎಂಬುದು ಪತ್ತೆಯಾಗಿದೆ.
fodey.com ನಲ್ಲಿರುವ ಪತ್ರಿಕೆಯಾದ ದ ಡೈಲಿ ವಾಟ್‌ಎವರ್ ಎಂಬ ಪತ್ರಿಕೆಯ ಪೇಪರ್ ಕಟ್ಟಿಂಗ್ ಇದಾಗಿದೆ., ಇದರಲ್ಲಿ 30 ಆಗಸ್ಟ್ 2006 ಎಂಬ ದಿನಾಂಕವಿದೆ. ಇದರ ಹೆಡ್‌ಲೈನ್‌ನಲ್ಲಿ ಮಂಗಳ ಗ್ರಹದ ನಿವಾಸಿಗಳು ಭೂಮಿಯನ್ನು ಆಕ್ರಮಿಸುತ್ತಾರೆ ಎಂಬ ಶೀರ್ಷಿಕೆ ಇದೆ. ಇದೇ ಪೇಪರ್ ಕಟ್ಟಿಂಗ್ ಅನ್ನು ಬಳಸಿಕೊಂಡು ಈ ಸುಳ್ಳು ಪೇಪರ್ ಕಟಿಂಗ್ ಸೃಷ್ಟಿಸಲಾಗಿದೆ ಎಂಬುದು ತಿಳಿದು ಬಂದಿದೆ. ಇನ್ನು ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಅತ್ಯಾಚಾರದ ಆರೋಪ ಇರುವ ಕುರಿತು ಇದುವರೆಗೂ ಯಾವುದೇ ಅಧಿಕೃತ ವರದಿಗಳು ಬಂದಿಲ್ಲ. ಹಾಗಾಗಿ ವೈರಲ್ ಪೇಪರ್ ಕ್ಲಿಪ್ ಸುಳ್ಳಿನಿಂದ ಕೂಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಐಐಟಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು ಎಂದು ಸುಳ್ಳು ಪೇಪರ್ ಕಟ್ಟಿಂಗ್‌ಅನ್ನು ಆನ್‌ಲೈನ್ ಟೂಲ್ ಬಳಸಿ ಸೃಷ್ಟಿಸಲಾದ ನಕಲಿ ಕ್ಲಿಪ್ಪಿಂಗ್ ಅನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ನರಹಂತಕ ವೀರಪ್ಪನ್ ಪುತ್ರಿ ವಿದ್ಯಾರಾಣಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ನಿಜ ! ಆದರೆ BJP ಪಕ್ಷದಿಂದಲ್ಲ