ದೇಶದಲ್ಲಿ ಆಕ್ಸಿಜನ್‌ ಕೊರತೆ; ಭಾರತದಿಂದ ವಿದೇಶಕ್ಕೆ ರಫ್ತಾದ ಆಕ್ಸಿಜನ್‌ ಪ್ರಮಾಣ 734% ಹೆಚ್ಚಳ!

ಕೊರೊನಾ ಸೋಂಕಿನ ಎರಡನೇ ಅಲೆ ಭಾರೀ ತೀವ್ರ ಪ್ರಮಾಣದಲ್ಲಿ ಆವಾರಿಸಿಕೊಳ್ಳುತ್ತಿದೆ. ಕೊರೊನಾದ ಪ್ರಮುಖ ಲಕ್ಷಣಗಳಲ್ಲಿ ಉಸಿರಾಟದ ತೊಂದರೆಯೂ ಒಂದಾಗಿದ್ದು, ಆಕ್ಸಿಜನ್‌ಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಿಂದ ರಫ್ತಾದ ಆಕ್ಸಿಜನ್‌ ಪ್ರಮಾಣ ಕಳೆದ ವರ್ಷಕ್ಕಿಂತ 734% ಹೆಚ್ಚಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

2019-20ರ ಆರ್ಥಿಕ ವರ್ಷದಲ್ಲಿ ಭಾರತ 4,500 ಮೆಟ್ರಿಕ್‌ ಟನ್‌ ಆಕ್ಸಿಜನ್‌ಅನ್ನು ವಿದೇಶಗಳಿಗೆ ರಫ್ತು ಮಾಡಿತ್ತು. ಈ ವರ್ಷ ಆಕ್ಸಿಜನ್‌ ರಫ್ತು ಪ್ರಮಾಣ ದ್ವಿಗುಣಗೊಂಡಿದ್ದು, 2020ರ ಏಪ್ರಿಲ್‌ನಿಂದ 2021ರ ಜನವರಿ‌ ಅಂತ್ಯದ ವೇಳೆಗೆ 9,000 ಮೆಟ್ರಿಕ್‌ ಟನ್‌ ರಫ್ತು ಮಾಡಿದೆ.

ಜನವರಿ 2020ರ ನಂತರ ಭಾರತ 353 ಮೆಟ್ರಿಕ್ ಟನ್ ಆಕ್ಸಿಜನ್ ರಫ್ತುಗೊಳಿಸಿದ್ದರೆ ಈ ವರ್ಷದ ಜನವರಿಯೊಳಗಾಗಿ ಶೇ.734ರಷ್ಟು ಹೆಚ್ಚು ರಫ್ತುಗೊಂಡಿದೆ.

ಡಿಸೆಂಬರ್ 2019ರಲ್ಲಿ 538 ಮೆಟ್ರಿಕ್ ಟನ್‍ ಆಕ್ಸಿಜನ್‌ಅನ್ನು ದೇಶದಿಂದ ರಫ್ತು ಮಾಡಿತ್ತು. ಇದು ಡಿಸೆಂಬರ್ 2020ರಲ್ಲಿ ದೇಶದಿಂದ 2,193 ಟನ್ ಆಕ್ಸಿಜನ್ ರಫ್ತುಮಾಡಿದೆ. 2019ರ ಡಿಸೆಂಬರ್‌ಗೆ ಹೋಲಿಸಿದಾಗ 2020ರ ಡಿಸೆಂಬರ್‌ನಲ್ಲಿ ರಫ್ತಾಗಿರುವ ಆಕ್ಸಿಜನ್‌ ಪ್ರಮಾಣ ಶೇ308ರಷ್ಟು ಏರಿಕೆಯಾಗಿದೆ. ಫೆಬ್ರವರಿ ಹಾಗೂ ಮಾರ್ಚ್ 2021ರಲ್ಲಿ ಎಷ್ಟು ಆಕ್ಸಿಜನ್ ರಫ್ತುಗೊಂಡಿದೆ ಎಂಬ ಕುರಿತ ಅಂಕಿಅಂಶ ಲಭ್ಯವಾಗಿಲ್ಲ.

ಇದನ್ನೂ ಓದಿ: ದೆಹಲಿಗೆ ಮೀಸಲಿದ್ದ ಆಕ್ಸಿಜನ್ ಕೊಡದೆ ಕೇಂದ್ರದಿಂದ ವಂಚನೆ : ಕೇಜ್ರಿವಾಲ್ ಗಂಭೀರ ಆರೋಪ

ದೇಶದಲ್ಲಿಯೇ ಆಕ್ಸಿಜನ್‌ ಕೊರತೆ ಇದೆ ಎಂದು ವರದಿಯಾಗಿದೆ. ಹಲವಾರು ರಾಜ್ಯಗಳಲ್ಲಿ ತಮ್ಮ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆಯಿದ್ದು, ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಆಕ್ಸಿಜನ್‌ ಒದಗಿಸಿ ಎಂದು ಕೇಂದ್ರಕ್ಕೆ ಪತ್ರಗಳನ್ನು ಬರೆಯುತ್ತಲೇ ಇವೆ. ಆದರೆ, ಕೇಂದ್ರ ಸರ್ಕಾರ ರಾಜ್ಯಗಳ ಮನವಿಗೆ ಕಿವಿಗೊಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ದೇಶದಲ್ಲಿಯೇ ಆಕ್ಸಿಜನ್‌ ಕೊರತೆ ಇರುವ ಸಂದರ್ಭದಲ್ಲಿ ಅಷ್ಟು ಪ್ರಮಾಣದಲ್ಲಿ ಆಕ್ಸಿಜನ್‌ ರಫ್ತು ಮಾಡುತ್ತಿರುವುದೇಕೆ? ಸರ್ಕಾರದ ದೇಶದ ಜನರ ಆರೋಗ್ಯದ ಮೇಲೆ ಕಾಳಜಿ ಇಲ್ಲವೇ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಜನರು ಆಕ್ಸಿಜನ್‌ಗಾಗಿ ಅಳುತ್ತಿರುವಾಗ ಬಿಜೆಪಿ ನಾಯಕರು ವೇದಿಕೆಯಲ್ಲಿ ಜೋಕ್‌ ಹೇಳಿ ನಗುತ್ತಿದ್ದಾರೆ: ಪ್ರಿಯಾಂಕಾ ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights