ದೆಹಲಿಗೆ ಮೀಸಲಿದ್ದ ಆಕ್ಸಿಜನ್ ಕೊಡದೆ ಕೇಂದ್ರದಿಂದ ವಂಚನೆ : ಕೇಜ್ರಿವಾಲ್ ಗಂಭೀರ ಆರೋಪ

ದೆಹಲಿಗೆ ಮೀಸಲಿದ್ದ ಆಕ್ಸಿಜನ್ ಕೊಡದ ಕೇಂದ್ರ ಸರ್ಕಾರ ದೆಹಲಿಯ ವೈದ್ಯಕೀಯ ಆಮ್ಲಜನಕದ ಪ್ರಮಾಣವನ್ನು ಕಡಿಮೆಗೊಳಿಸಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

ಹೌದು..  ದೆಹಲಿಗೆ ಮೀಸಲಿದ್ದ ಆಕ್ಸಿಜನ್ ನನ್ನು ಇತರ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಆರೋಪಿಸಿದ್ದಾರೆ. ದೆಹಲಿಗೆ ಮೀಸಲಾದ 140 ಮೆಟ್ರಿಕ್ ಟನ್ ಆಮ್ಲಜನಕವನ್ನು ಇತರ ರಾಜ್ಯಗಳಿಗೆ ಕಳುಹಿಸಲಾಗಿದ್ದು, ಇದರಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿ ಆಮ್ಲಜನಕದ ತೀವ್ರ ಕೊರತೆಯನ್ನು ಎದುರಿಸುತ್ತಿದೆ ಅದನ್ನು ಪುನಃಸ್ಥಾಪಿಸಬೇಕು ಎಂದು ಕೇಜ್ರಿವಾಲ್ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ.

“ವೇಗವಾಗಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಯಿಂದ, ದೆಹಲಿಗೆ ಸಾಮಾನ್ಯ ಪೂರೈಕೆಗಿಂತ ಹೆಚ್ಚಿನ ಆಮ್ಲಜನಕದ ಅವಶ್ಯಕತೆ ಇದೆ. ಪೂರೈಕೆಯನ್ನು ಹೆಚ್ಚಿಸುವ ಬದಲು, ನಮ್ಮ ಸಾಮಾನ್ಯ ಪೂರೈಕೆಯನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ ಮತ್ತು ದೆಹಲಿಯ ಕೋಟಾವನ್ನು ಇತರ ರಾಜ್ಯಗಳಿಗೆ ತಿರುಗಿಸಲಾಗಿದೆ “ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

ದೆಹಲಿ ಕಳೆದ 24 ಗಂಟೆಗಳಲ್ಲಿ 25,462 ಪ್ರಕರಣಗಳನ್ನು ದಾಖಲಿಸಿದ್ದು, ಈವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 8.5 ಲಕ್ಷಕ್ಕಿಂತ ಹೆಚ್ಚಿನದಾಗಿದೆ. ಸಾವಿನ ಸಂಖ್ಯೆ 161 ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights