ಜನರು ಆಕ್ಸಿಜನ್‌ಗಾಗಿ ಅಳುತ್ತಿರುವಾಗ ಬಿಜೆಪಿ ನಾಯಕರು ವೇದಿಕೆಯಲ್ಲಿ ಜೋಕ್‌ ಹೇಳಿ ನಗುತ್ತಿದ್ದಾರೆ: ಪ್ರಿಯಾಂಕಾ ಗಾಂಧಿ

ಕೊರೊನಾ ಎರಡನೇ ಅಲೆಯು ದೇಶದಲ್ಲಿ 2020 ಕಹಿ ನೆನಪುಗಳನ್ನು ಮರುಕಳಿಸುತ್ತಿದೆ. ಕಳೆದ ವರ್ಷದಂತೆಯೇ ಜನರು ಆಸ್ಪತ್ರೆಗಳಲ್ಲಿ ಬೆಡ್‌, ಆಕ್ಸಿಜನ್‌, ಔಷಧಿಯ ಕೊರತೆಯಿಂದ ನರಳುತ್ತಿದ್ದಾರೆ. ಹಲವರು ಸಾವನ್ನಪ್ಪಿದ್ದಾರೆ. ಬೀದಿ ಬದಿಗಳಲ್ಲಿ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಇಂತಹ ಸಂಕಷ್ಟದಲ್ಲಿಯೂ ಬಿಜೆಪಿ ನಾಯಕರು ಚುನಾವಣಾ ರ್ಯಾಲಿಗಳಲ್ಲಿ ಜೋಕ್‌ಗಳನ್ನು ಹೇಳುತ್ತಾ ವೇದಿಕೆಯಲ್ಲಿ ನಗುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡೆ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರು ಏಪ್ರಿಲ್ 23 ರಂದು ಮುರ್ಷಿದಾಬಾದ್, ದಕ್ಷಿಣ ಕೋಲ್ಕತಾ, ಸಿಯುರಿ ಮತ್ತು ಮಾಲ್ಡಾದಲ್ಲಿ ಚುನಾವಣಾ ರ್ಯಾಲಿಗಳನ್ನು ನಡೆಸಲಿದ್ದಾರೆ. ಇದರ ಬದಲಿಗೆ ಮೋದಿ ಜನರೊಂದಿಗೆ ಕುಳಿತು ಪ್ರಸ್ತುತ ಬಿಕ್ಕಟ್ಟಿನ ಪರಿಹಾರದ ಬಗ್ಗೆ ಚರ್ಚಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಿರೋ ಸರ್ವೆಯ ಪ್ರಕಾರ ಸುಮಾರು 5 ಕೋಟಿ ಜನರಿಗೆ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಹೀಗದ್ದರೂ ಯೋಗಿ ಸರ್ಕಾರ ಅತ್ಯಂತ ಕಡಿಮೆ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿದೆ. ಅದರಲ್ಲಿ ಶೇ. 70 ರಷ್ಟು ಆಟಿಂಜನ್ ಟೆಸ್ಟ್ ನಡೆಸಿ, ಶೇ.30 ರಷ್ಟು ಮಾತ್ರ ಆರ್‌ಟಿಪಿಸಿಆರ್ ಟೆಸ್ಟ್ ನಡೆಸುತ್ತಿದೆ. ಖಾಸಗಿ ಲ್ಯಾಬ್‌ಗಳು ಪರೀಕ್ಷೆ ನಡೆಸದಂತೆ ಆದೇಶ ಹೊರಡಿಸಲಾಗಿದೆ. ಈ ಸರ್ಕಾರಕ್ಕೆ ಜನರ ಜೀವಕ್ಕಿಂತ ತಮ್ಮ ಸರ್ಕಾರದ ಪ್ರತಿಷ್ಠೆಯೇ ಮುಖ್ಯವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಉತ್ತರ ಪ್ರದೇಶದಲ್ಲಿ ಒಂದು ದಿನಕ್ಕೆ 29,754 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 9 ಲಕ್ಷಕ್ಕೆ ತಲುಪಿದೆ. 162 ಸಾವುಗಳೊಂದಿಗೆ ಸಾವಿನ ಸಂಖ್ಯೆ 10 ಸಾವಿರ ದಾಟಿದೆ ಎಂದು ಆರೋಗ್ಯ ಇಲಾಖೆ ವರದಿಗಳು ತಿಳಿಸಿವೆ.

ಆಕ್ಸಿಜನ್ ರಫ್ತು ಮಾಡಿದ್ದು ಏಕೆ?

ಭಾರತವು ಪ್ರಪಂಚದಲ್ಲಿಯೇ ಅತಿ ಹೆಚ್ಚು ಆಮ್ಲಜನಕ ಉತ್ಪಾದಿಸುವ ರಾಷ್ಟ್ರವಾಗಿದೆ. ಆದರೂ ನಮ್ಮ ದೇಶದ ಪ್ರಜೆಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ಸಿಗುತ್ತಿಲ್ಲ ಏಕೆ ಎಂದು ಪ್ರಿಯಾಂಕ ಗಾಂಧಿ ಪ್ರಶ್ನಿಸಿದ್ದಾರೆ. ಈ ಕುರಿಟು ಟ್ವೀಟ್ ಮಾಡಿರುವ ಅವರು ಅಂಕಿ ಅಂಶಗಳನ್ನು ಒದಗಿಸಿದ್ದಾರೆ.

ಭಾರತದ ಆಮ್ಲಜನಕ ರಫ್ತು

2019-20: 4502 ಮೆ.ಟನ್
2020-21: 9300 ಮೆ.ಟನ್

ನಮ್ಮಲ್ಲಿ ಆಮ್ಲಜನಕದ ಕೊರತೆ ಇರಲಿಲ್ಲ. ನಾವು ಆಮ್ಲಜನಕದ ಅತಿದೊಡ್ಡ ಉತ್ಪಾದಕರು. ಆದರೆ ಕೊರೊನಾದ ಬೆದರಿಕೆಯ ಹೊರತಾಗಿಯೂ, ಸರ್ಕಾರವು 2019-20ಕ್ಕೆ ಹೋಲಿಸಿದೆರೆ ಕಳೆದ ವರ್ಷ ಎರಡು ಪಟ್ಟು ಹೆಚ್ಚು ಆಮ್ಲಜನಕವನ್ನು ರಫ್ತುಮಾಡಿದೆ. ಈಗ ಹೇಳಿ ಆಮ್ಲಜನಕದ ಕೊರತೆಯಿಂದಾಗುತ್ತಿರುವ ಸಾವುಗಳಿಗೆ ಯಾರು ಕಾರಣ? ಎಂದು ಅವರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಜನ ಬಯಸುವುದು ನೆರವಿನ ಹಸ್ತವನ್ನ; ನಿಮ್ಮ ಬುರುಡೆ ಮಾತನ್ನಲ್ಲ: ಮೋದಿ ವಿರುದ್ದ ಸಿದ್ದರಾಮಯ್ಯ ಆಕ್ರೋಶ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights