ಬಿಗ್ ಬಾಸ್ ಅರವಿಂದ್ಗೆ ತೋರಿಸಿದ ಆ ವಿಡಿಯೋದಿಂದ ಗೊತ್ತಾಯ್ತು ಪ್ರಶಾಂತ್ ಹೇಳಿದ ಸುಳ್ಳು.!

ಕೆಲವೊಂದು ವಿಚಾರಗಳು ಈ ವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆ ತಿಳಿದೇ ಇಲ್ಲ. ಯಾಕಂದರೆ ಈ ವಾರ ಕಿಚ್ಚ ಸುದೀಪ್ ನಿರೂಪಣೆ ಇರಲಿಲ್ಲ. ಹೀಗಾಗಿ ಬಿಗ್ ಬಾಸ್ ಪ್ರೇಕ್ಷಕರ ಫೋನ್ ಕಾಲ್ ಹಾಗೂ ವಿಡಿಯೋ ತೋರಿಸುವ ಮೂಲಕ ಮನೆಯ ಸದಸ್ಯರಿಗೆ ತಿಳಿಯದ ಕೆಲವೊಂದು ವಿಚಾರಗಳನ್ನು ತಿಳಿಸಲಾಗುತ್ತಿದೆ. ಹೀಗೆ ಬಿಗ್ ಬಾಸ್ ಅರವಿಂದ್ಗೆ ತೋರಿಸಿದ ವಿಡಿಯೋದಿಂದ ಪ್ರಶಾಂತ್ ಹೇಳಿದ ಸುಳ್ಳು ಗೊತ್ತಾಗಿದೆ.

ಹೌದು… ಮೊನ್ನೆ ದಿವ್ಯ ಮತ್ತು ನಿಧಿ ಸುಬ್ಬಯ್ಯ ಮಾಡಿಕೊಂಡ ಒಪ್ಪಂದದ ವಿಚಾರ ಪ್ರೇಕ್ಷಕರ ಫೋನ್ ಕಾಲ್ ಮೂಲಕ ಗೊತ್ತಾಗಿದೆ. ಇದರ ಭಾಗವಾಗಿ ಬಿಗ್ ಬಾಸ್ ಅರವಿಂದ್ಗೆ ವಿಡಿಯೋವೊಂದನ್ನು ತೋರಿಸಿದ್ದಾರೆ. ಈ ವಿಡಿಯೋದಲ್ಲಿ ಪ್ರಶಾಂತ್ ಹೇಳಿದ ಸುಳ್ಳು ಹಾಗೂ ಈ ಸುಳ್ಳಿನಿಂದಾಗಿ ನಿಧಿ ಸುಬ್ಬಯ್ಯ ಮೇಲಿನ ಅಪನಂಬಿಕೆ ಅರವಿಂದ್ ದೃಷ್ಟಿಯಿಂದ ದೂರವಾಗಿದೆ.

ನಿಧಿ ಸುಬ್ಬಯ್ಯ ಹಾಗೂ ಪ್ರಶಾಂತ್ ಸಂಬರಿಗಿ ಇಬ್ಬರೂ ಜೊತೆಗೂಡಿ ಸದಸ್ಯರಲ್ಲಿ ಅತ್ಯುತ್ತಮ ಪ್ರೇಮ ಪತ್ರ ಹಾಗೂ ಉತ್ತಮ ಆಟ ಆಡಿದ್ದಾರೆಂದು ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಇವರಿಬ್ಬರು ಚರ್ಚಿಸುವ ವೇಳೆ ನಿಧಿ ಸುಬ್ಬಯ್ಯ ತಮಗೆ ಮಾತನಾಡಲು ಅವಕಾಶವೇ ನೀಡಿಲ್ಲ ಎಂದು ಪ್ರಶಾಂತ್ ಸಂಬರಿಗಿ ಮನೆಯ ಎಲ್ಲಾ ಸದಸ್ಯರ ಮುಂದೆ ಹೇಳಿಕೊಂಡಿದ್ದರು. ಮಾತ್ರವಲ್ಲದೇ ಅತ್ಯುತ್ತಮ ಪ್ರೇಮ ಪತ್ರ ಹಾಗೂ ಉತ್ತಮ ಆಟ ಆಡಿದ್ದಾರೆಂದು ದಿವ್ಯ ಸುರೇಶ್ ರನ್ನು ಆಯ್ಕೆ ಮಾಡಿದ್ದು ನಿಧಿಯವರೇ ನಾನಲ್ಲ ಎಂದು ಹೇಳಿ ಬೇಕಾದ್ರೆ ಬಿಗ್ ಬಾಸ್ ವಿಡಿಯೋ ತೋರಿಸಲಿ ಎಂದು ಸತ್ಯದ ಮೇಲೆ ಹೊಡದಂತೆ ಹೇಳಿದ್ದರು.

ಇದರಿಂದಾಗಿ ಮನೆಯ ಎಲ್ಲಾ ಸದಸ್ಯರು ಈಗಾಗಲೇ ಒಪ್ಪಂದದ ಮೂಲಕ ಆಟವನ್ನು ಗೆದ್ದ ನಿಧಿ ಹಾಗೂ ದಿವ್ಯ ಮೇಲೆ ಕೋಪಗೊಂಡಿದ್ದು ಮಾತ್ರವಲ್ಲದೇ ಪ್ರಶಾಂತ್ ಹೇಳಿದ ಮಾತನ್ನೂ ನಂಬಿದ್ದರು.

ಹೀಗಾಗಿ ಬಿಗ್ ಬಾಸ್ ಅರವಿಂದ್ ಗೆ ನಿಧಿ ಹಾಗೂ ಪ್ರಶಾಂತ್ ಇಬ್ಬರು ಚರ್ಚೆ ವೇಳೆ ಏನಾಯ್ತು ಎನ್ನುವ ವಿಡಿಯೋವನ್ನು ತೋರಿಸಿದ್ದಾರೆ. ಇದರಿಂದ ಪ್ರಶಾಂತ್ ಹೇಳಿದ ಸುಳ್ಳು ಬಯಲಾಗಿದೆ. ವಿಡಿಯೋ ನೋಡಿದ ಅರವಿಂದ್ ನಿಧಿ ಅವರ ಬಳಿ ಕ್ಷಮೆ ಕೇಳಿದ್ದಾರೆ.

ಆದರೆ ಅರವಿಂದ್ , ಶುಭಾ, ನಿಧಿ ಅವರಿಗೆ ಹೊರತುಪಡಿಸಿ ಮನೆಯ ಎಲ್ಲಾ ಸದಸ್ಯರಿಗೆ ಪ್ರಶಾಂತ್ ಹೇಳಿದ ಮಾತ್ರ ಸುಳ್ಳು ತಿಳಿದಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights