ಫ್ಯಾಕ್ಟ್ಚೆಕ್ : ಹಿಂದೂ ಪ್ರಯಾಣಿಕರನ್ನು ಬಸ್ನಿಂದ ಕೆಳಗಿಳಿಸಿ, ಬಸ್ಸಿನಲ್ಲೆ ನಮಾಜ್ ಮಾಡಿದ ಮುಸ್ಲಿಂ ಚಾಲಕ! ಈ ಘಟನೆ ಎಲ್ಲಿ ನಡೆದಿದೆ ಗೊತ್ತೆ?
ಮುಸ್ಲಿಂ ಚಾಲಕನೊಬ್ಬ ಎಸಿ ಬಸ್ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ, ಹಿಂದೂ ಪ್ರಯಾಣಿಕರು ಬಸ್ ಹತ್ತಲು ಬಿಸಿಲಲ್ಲಿ ಕಾಯುತ್ತ ನಿಂತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದು, ಎಸಿ ಬಸ್ಸಿನಲ್ಲಿ ಮುಸ್ಲಿಂ ಚಾಲಕ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಎಲ್ಲಾ ಹಿಂದೂ ಪ್ರಯಾಣಿಕರನ್ನು ಹೊರಗೆ ನಿಲ್ಲಿಸಿದ್ದಾನೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
ಸುದರ್ಶನ್ ಹಿಂದಿ ಸುದ್ದಿವಾಹಿನಿಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಹಿಂದೂಗಳು ಇಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ ಎಂದು ಪ್ರಸಾರ ಮಾಡಲಾಗಿದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲಿಸಿದಾಗ, ಈ ಘಟನೆ ನಡೆದಿರುವುದು ಭಾರತದಲ್ಲಿ ಅಲ್ಲ ದುಬೈನಲ್ಲಿ ಎಂದು ತಿಳಿದುಬಂದಿದೆ. ಬಸ್ಸಿನಲ್ಲಿ ದುಬೈ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ರಸ್ತೆ ಸಾರಿಗೆ ಪ್ರಾಧಿಕಾರದ ವೆಬ್ಸೈಟ್ನಲ್ಲಿ ವಿಳಾಸ ಮತ್ತು ಇತರ ವಿವರಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಎಲ್ಲ ಪ್ರಯಾಣಿಕರ ಅನುಮತಿ ಪಡೆದ ನಂತರವೇ ಚಾಲಕ ಪ್ರಾರ್ಥನೆ ಸಲ್ಲಿಸಿದ್ದಾನೆ ಎಂದು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಹೇಳಿದ್ದಾರೆ ಎಂದು ಫ್ಯಾಕ್ಟ್ಲಿ ವರದಿ ಮಾಡಿದೆ.

ಇದೇ ತಿಂಗಳ ಜೂನ್ 11ರಂದು ದುಬೈನಲ್ಲಿ ಬಸ್ ಚಾಲಕನು ಪ್ರಾರ್ಥನೆ ಮಾಡಲು 5 ನಿಮಿಷಗಳ ಕಾಲಾವಕಾಶ ಕೇಳಿದಾಗ ಪ್ರಯಾಣಿಕರು ಯಾವುದೇ ಆಕ್ಷೇಪಣೆಯಿಲ್ಲದೆ ಸಹಕರಿಸಿದರು ಎಂದು ವಿಡಿಯೋವನ್ನು ಹಂಚಿಕೊಂಡ ಬಳಕೆದಾರರು ಹೇಳಿದ್ದಾರೆ.
https://twitter.com/WhereIsMy_Food/status/1667914890693214209?ref_src=twsrc%5Etfw%7Ctwcamp%5Etweetembed%7Ctwterm%5E1668272202448347137%7Ctwgr%5Ea66b0bd03b52feb9a916b494d62acbd6e8c0642f%7Ctwcon%5Es2_&ref_url=https%3A%2F%2Ffactly.in%2Ftelugu-video-of-driver-offering-namaz-in-a-bus-is-from-dubai%2F
ಆದರೆ ಈ ಟ್ವೀಟ್ಗೆ ದುಬೈನ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರ ಉತ್ತರ ನೀಡಿದೆ. ಘಟನೆಯ ಕುರಿತು ತನಿಖೆ ನಡೆಸಲಾಗಿದ್ದು, ಚಾಲಕ ತನ್ನ ಬಿಡುವಿನ ಸಮಯದಲ್ಲಿ ನಮಾಜ್ ಮಾಡಿದ್ದಾನೆ ಎಂದು ಪ್ರಾಧಿಕಾರವು ತಿಳಿಸಿದೆ. RTA ನಿಯಮಗಳ ಪ್ರಕಾರ ನಿಗದಿತ ಟ್ರಿಪ್ ಸಮಯದ ಮೊದಲು / ನಂತರ ಯಾರಿಗೂ ಬಸ್ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಈ ಸಮಯದಲ್ಲಿ ಚಾಲಕ ಪ್ರಯಾಣಿಕರ ಒಪ್ಪಿಗೆಯನ್ನು ಪಡೆದು ಪ್ರಾರ್ಥನೆ ಸಲ್ಲಿಸಿದ್ದಾನೆ ಎಂದು ಹೇಳಿದೆ. ನಂತರ ಎಲ್ಲಾ ಪ್ರಯಾಣಿಕರು ಬಸ್ ಏರಿ ಪ್ರಯಾಣ ಬೆಳಸಿರುವುದಾಗಿ ತಿಳಿದುಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದುಬೈನಲ್ಲಿ ಬಸ್ ಚಾಲಕ ಪ್ರಯಾಣಿಕರ ಅನುಮತಿ ಪಡೆದು ನಮಾಜ್ ಮಾಡಿದ ಘಟನೆಯನ್ನು ಭಾರತದಲ್ಲಿ ನಡೆದ ಘಟನೆ ಎಂದು ಕೋಮು ಬಣ್ಣ ಹಚ್ಚಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಕೇದಾರನಾಥ ಹಿಂದೂ ಯಾತ್ರಿಗಳ ಮೇಲೆ ಹಲ್ಲೆ ನಡೆಸಿದ್ದು ಮುಸ್ಲಿಮರಲ್ಲ! ಮತ್ತ್ಯಾರು?

