ಜೈ ಶ್ರೀರಾಮ್‌ ಘೋಷಣೆ ಕೂಗಲು ನಿರಾಕರಿಸಿದ ಬಾಲಕ; ಬಿಜೆಪಿ ಕಾರ್ಯಕರ್ತನಿಂದ ಅಮಾನಷ ಹಲ್ಲೆ!

ಜೈ ಶ್ರೀರಾಮ್ ಎಂದು ಘೋಷಣೆ ಕೂಗಲು ನಿರಾಕರಿಸಿದ ಹತ್ತು ವರ್ಷದ ಬಾಲಕನನ್ನು ಬಿಜೆಪಿ ಕಾರ್ಯಕರ್ತನೊಬ್ಬ ಅಮಾನುಷವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಫುಲಿಯಾದಲ್ಲಿ ನಡೆದಿದೆ.

ಫುಲಿಯಾದಲ್ಲಿ ಚಹಾ ನಡೆಸುತ್ತಿದ್ದ ಮಹಾದೇಬ್ ಪ್ರಾಮಾಣಿಕ್‌ ಎಂಬಾತ ನಾಲ್ಕನೇ ತರಗತಿ ಓದುತಿದ್ದ ಬಾಲಕ ಮಹಾದೇವ್ ಶರ್ಮಾಗೆ ಜೈ ಶ್ರೀರಾಮ್‌ ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾನೆ. ಅದಕ್ಕೂ ಮೊದಲು ಆರೋಪಿ ಪ್ರಾಮಾಣಿಕ್‌, ಬಾಲಕನ ತಂದೆ ಟಿಎಂಸಿಯನ್ನು ಬೆಂಬಲಿಸುತ್ತಿರುವುದಕ್ಕಾಗಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆನಂತರ ಭಾಕನಿಗೆ ಘೋಷಣೆ ಕೂಗುವಂತೆ ಬೆದರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಘೋಷಣೆ ಕೂಗಲು ಬಾಲಕ ನಿರಾಕರಿಸಿದ್ದು, ಆತನಿಗೆ ಪ್ರಾಮಾಣಿಕ್ ಅಮಾನುಷವಾಗಿ ಥಳಿಸಿದ್ದಾನೆ. ಆಗ ಕೆಲವು ಗ್ರಾಮಸ್ಥರು ಧಾವಿಸಿ ಬಾಲಕನನ್ನು ರಕ್ಷಿಸಿದ್ದಾರೆ.

ಹಲ್ಲೆಗೊಳಗಾದ ಬಾಲಕನ ತಂದೆ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, ಟಿಎಂಸಿ ಪಕ್ಷದ ಬೆಂಬಲಿಗನಾಗಿದ್ದಾನೆ. ಎಪ್ರಿಲ್ 17ರಂದು ನಡೆದ 5ನೇ ಹಂತದ ಚುನಾವಣೆಯಲ್ಲಿ ಆತ ಟಿಎಂಸಿ ಪಕ್ಷದ ಪರವಾಗಿ ಸಕ್ರಿಯವಾಗಿ ಕೆಲಸ ಮಾಡಿದ್ದು, ಇದು ಬಿಜೆಪಿ ಕಾರ್ಯಕರ್ತ ಪ್ರಾಮಾಣಿಕ್‌ಗೆ ಅಸೂಯೆ ಹುಟ್ಟಿಸಿದೆ ಎಂದು ತಿಳಿದು ಬಂದಿದೆ.

ಥಳಿತಕ್ಕೊಳಗಾದ ಬಾಲಕನ ಮುಖ, ತಲೆ ಹಾಗೂ ಬೆನ್ನಿನ ಮೇಲೆ ಗಾಯಗಳಾಗಿದ್ದು, ಆತನನ್ನು ರಾಣಾಘಾಟ್ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ ಆಘಾತಕ್ಕೊಳಗಾಗಿದ್ದು, ಆತ ದೇಹಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯ ಬಳಿಕ ಉದ್ರಿಕ್ತರಾದ ಸ್ಥಳೀಯರು ಪ್ರಾಮಾಣಿಕ್ನನ್ನು ಥಳಿಸಿದ್ದಾರೆ ಹಾಗೂ ಕೆಲವು ಪ್ರತಿಭಟನಕಾರರು ಆತನ ಬಂಧನಕ್ಕೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ 12ರಲ್ಲಿ ರಸ್ತೆ ತಡೆ ನಡೆಸಿದರು. ಘಟನೆಯ ಬಳಿಕ ಪ್ರಾಮಾಣಿಕ್ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

Read Also: ಜನ ಬಯಸುವುದು ನೆರವಿನ ಹಸ್ತವನ್ನ; ನಿಮ್ಮ ಬುರುಡೆ ಮಾತನ್ನಲ್ಲ: ಮೋದಿ ವಿರುದ್ದ ಸಿದ್ದರಾಮಯ್ಯ ಆಕ್ರೋಶ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights