ಜೀವದ ಹಂಗು ತೊರೆದು ಮಗು ಕಾಪಾಡಿದ ಸಾಹಸಿಗೆ ಬೈಕ್ ಉಡುಗೊರೆ…!

ಮುಂಬೈನ ರೈಲ್ವೇ ನಿಲ್ದಾಣದಲ್ಲಿ ರೈಲು ಹಳಿಯ ಮೇಲೆ ಬಿದ್ದ ಮಗುವನ್ನು ಜೀವದ ಹಂಗು ತೊರೆದು ರಕ್ಷಣೆ ಮಾಡಿದ ರೈಲ್ವೆ ಪಾಯಿಂಟ್‌ಮ್ಯಾನ್ ಮಯೂರ್ ಶೆಲ್ಕೆ ಬಗ್ಗೆ ಭಾರತದಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಸಮಯ ಪ್ರಜ್ಞೆಯಿಂದ ಮಗುವನ್ನು ರಕ್ಷಿಸಿ ಮಯೂರ್ ಗೆ ಲೈಲ್ವೆ ಇಲಾಖೆಯಿಂದ 50 ಸಾವಿರ ಬಹುಮಾನದ ಜೊತೆಗೆ ಬೈಕ್ ಕೂಡ ಉಡುಗೊರೆಯಾಗಿ ಕೊಟ್ಟು ಗೌರವ ಸಲ್ಲಿಸಲಾಗಿದೆ.

ಮಹೀಂದ್ರಾ ಕಂಪನಿ ಒಡೆತನದ ಜಾವಾ ಬೈಕ್ಸ್ ಸಿಇಓ ಅನುಪಮ್ ಥರೇಜಾ ಅವರು ಮಯೂರ್ ಅವರ ಸಾಹಸಕ್ಕೆ ತಲೆಬಾಗಿ ಸಂಸ್ಥೆ ವತಿಯಿಂದ ಜಾವಾ ಕ್ಲಾಸಿಕ್ ಬೈಕ್ ಉಡುಗೊರೆ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.

ಮುಂಬೈನ ವಂಗಾನಿ ರೈಲ್ವೇ ನಿಲ್ದಾಣದಲ್ಲಿ ಮಯೂರ ಶೆಲ್ಕೆ ತಮ್ಮ ಜೀವ ಪಣಕ್ಕಿಟ್ಟು ಬಾಲಕನನ್ನು ಕಾಪಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ದೇಶಾದ್ಯಂತ ಜನ ಮೆಚ್ಚುಗೆ ಪಡೆದುಕೊಂಡಿದೆ. ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬಳು ಪುಟ್ಟ ಬಾಲಕನೊಂದಿಗೆ ರೈಲ್ವೆ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬಾಲಕ ರೈಲ್ವೆ ಹಳಿ ಬಳಿ ಮಹಿಳೆಯ ಕೈ ಹಿಡುದುಕೊಂಡೇ ಹೋಗುತ್ತಾನೆ. ಆದರೆ ಮಹಿಳೆ ಕೈ ಬಿಡಿಸಿಕೊಂಡ ಬಾಲಕ ಆಯ ತಪ್ಪಿ ರೈಲು ಹಳಿ ಮೇಲೆ ಬೀಳುತ್ತಾನೆ. ಬಾಲಕ ಹಳಿ ಮೇಲೆ ಬೀಳುತ್ತಿದ್ದಂತೆ ರೈಲು ಕೆಲವೇ ಅಡಿ ಅಂತರದಲ್ಲಿ ಆಗಮಿಸುತ್ತಿರುವುದನ್ನು ಕಂಡ ಮಯೂರ ಬಾಲಕನ ರಕ್ಷಣೆಗೆ ದಾವಿಸುತ್ತಾರೆ.

ಬಾಲಕನನ್ನು ಕೂಡಲೆ ಎತ್ತಿ ಹಳಿ ಬದಿ ಹಾಕುತ್ತಾ ತಾನೂ ಕೂಡ ಹಳಿ ಮೇಲಿನಿಂದ ಹೊರಬರುತ್ತಿದ್ದಂತೆ ರೈಲು ಪಾಸಾಗುವ ದೃಶ್ಯ ನಿಜಕ್ಕೂ ಎಂಥವರ ಎದೆ ಝಲ್ ಎನಿಸುತ್ತೆ. ಹೀಗೆ ತನ್ನ ಜೀವವನ್ನು ಲೆಕ್ಕಿಸದೆ ಮಗು ಜೀವ ಕಾಪಾಡಿದ ಮಯೂರ್ ಗೆ ಸಿಬ್ಬಂದಿಗಳು ಚಪ್ಪಾಳೆ ತಟ್ಟಿ ಅಭಿನಂದನೆ ತಿಳಿಸಿದ್ದಾರೆ.

 

Spread the love

Leave a Reply

Your email address will not be published. Required fields are marked *