FACT CHECK | ಹಾಡುಹಗಲೆ ಬೈಕ್ ಕಳ್ಳತನದ ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?

ರಸ್ತೆಯಲ್ಲಿ ಹೋಳಿ ಆಡುತ್ತಾ ಬರುವ ಇಬ್ಬರು ವ್ಯಕ್ತಿಗಳು ಎರಡು ಬೈಕ್‌ಗಳನ್ನು ಕದಿಯಲು ಪ್ರಯತ್ನಿಸುತ್ತಿರುವುದನ್ನು ತೋರಿಸುವ 3 ನಿಮಿಷಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೊನೆಯಲ್ಲಿ, ಅವರು ಯಶಸ್ವಿಯಾಗಿ ಬೈಕ್ ಅನ್ನು ಕದ್ದು ತಪ್ಪಿಸಿಕೊಳ್ಳುತ್ತಾರೆ. ಈ ಸಮಯದಲ್ಲಿ, ಪೊಲೀಸ್ ವಾಹನ ಸೇರಿದಂತೆ ಅನೇಕ ವಾಹನಗಳು ರಸ್ತೆಯಲ್ಲಿ ಹಾದು ಹೋಗುತ್ತವೆ, ಆದರೆ ಹಗಲು ಹೊತ್ತಿನಲ್ಲಿ ನಡೆಯುತ್ತಿರುವ ಕಳ್ಳತನವನ್ನು ಯಾರೂ ಗಮನಿಸುವುದಿಲ್ಲ.

ಮಮತಾ ರಾಜ್‌ಗಡ್ ಎಂಬ ಎಕ್ಸ್‌ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು , “ಈ ವೀಡಿಯೊದಲ್ಲಿ ಬೈಕ್ ಕಳ್ಳರನ್ನು ನೋಡಿ” ಎಂದು ಬರೆದಿದ್ದಾರೆ. (ಆರ್ಕೈವ್ ಮಾಡಿದ ಲಿಂಕ್)

“ಕಳ್ಳರು ಇತ್ತೀಚಿನ ದಿನಗಳಲ್ಲಿ ಎಷ್ಟು ಬುದ್ಧಿವಂತರಾಗಿದ್ದಾರೆಂದರೆ ಅವರು ಕಾನೂನನ್ನು ಅಣಕಿಸಿದ್ದಾರೆ. ಪೊಲೀಸರ ಕಣ್ಣುಗಳ ಮುಂದೆಯೇ ಹಗಲು ಹೊತ್ತಿನಲ್ಲಿ ಎರಡು ಬೈಕ್‌ಗಳನ್ನು ಕದ್ದಿದ್ದಾರೆ” ಎಂಬ ಬರಹದೊಂದಿಗೆ ರೋಹಿತ್ ಸಿಂಗ್‌ ಎಂಬ ಎಕ್ಸ್‌ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. (ಆರ್ಕೈವ್ ಮಾಡಿದ ಲಿಂಕ್)

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಮಡಿದ್ದು ಅವುಗಳನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಿದಂತೆ ಹೋಳಿ ಆಚರಿಸುತ್ತಾ ಇಬ್ಬರು ವ್ಯಕ್ತಿಗಳು ಹಾಡುಹಗಲೆ ಬೈಕ್ ಕಳ್ಳತನ ಮಾಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಗಳನ್ನು ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ರಾಜ್ ಠಾಕೂರ್ ಅಫಿಶಿಯಲ್ ಎಂಬ ಇನ್‌ಸ್ಟಾಗ್ರಾಮ್ ಪೇಜ್‌ವೊಂದು ಲಭ್ಯವಾಗಿದೆ.

The bike theft video is scripted and created by the content creator Raj Thakur.

ವಿಡಿಯೋ ಪೋಸ್ಟ್‌ನಲ್ಲಿರುವ ಶಿರ್ಷಿಕೆಯ ಪ್ರಕಾರ, ಈ ವಿಡಿಯೋದಲ್ಲಿ ಕಂಡುಬರುವ ದೃಶ್ಯಗಳು ನಿಜವಲ್ಲ ಮತ್ತು ಸಂಪೂರ್ಣವಾಗಿ ಸ್ಕ್ರಿಪ್ಟ್ ಮಾಡಲಾಗಿದೆ ಎಂದು ಹೇಳಿದೆ. ಎಲ್ಲಾ ವಿಷಯವು ಕೇವಲ ಮನರಂಜನೆಯ ಉದ್ದೇಶಗಳಿಗಾಗಿ ಮತ್ತು ಜಾಗೃತಿಗಾಗಿ ಎಂದು  ಉಲ್ಲೇಖಿಸಲಾಗಿದೆ. ಬೈಕ್ ಕಳ್ಳತನದ ವಿಡಿಯೋ ಸ್ಕ್ರಿಪ್ಟ್ ನ ಸೃಷ್ಟಿಕರ್ತ ರಾಜ್ ಠಾಕೂರ್ ಎಂದು ಹೇಳಲಾಗಿದೆ.

The bike theft video is scripted and created by the content creator Raj Thakur.

ಈ ವೀಡಿಯೊದ ಪೂರ್ಣ ಆವೃತ್ತಿಯನ್ನು ನಾವು ರಾಜ್ ಠಾಕೂರ್ ಅವರ ಫೇಸ್‌ಬುಕ್ ಪುಟದಲ್ಲಿ ಕಂಡುಕೊಂಡಿದ್ದೇವೆ. ಇಲ್ಲಿಯೂ ಸಹ, ಇದು ಮನರಂಜನೆ ಮತ್ತು ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ರಚಿಸಲಾದ ಸ್ಕ್ರಿಪ್ಟ್ ಮಾಡಿದ ವೀಡಿಯೊ ಎಂದು ಶೀರ್ಷಿಕೆಯಲ್ಲಿ ಹೇಳಿದೆ.

ರಾಜ್ ಠಾಕೂರ್ ಒಬ್ಬ ಕಂಟೆಂಟ್‌ ಕ್ರಿಯೇಟರ್‌ ಆಗಿದ್ದು, ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪುಟಗಳು ಅನೇಕ ರೀತಿಯ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ಹೊಂದಿವೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಬೈಕ್ ಕದಿಯುವ ವಿಡಿಯೋ ಸ್ಕ್ರಿಪ್ಟ್‌ ವಿಡಿಯೋ  ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇಬ್ಬರು ವ್ಯಕ್ತಿಗಳು ಹಗಲು ಹೊತ್ತಿನಲ್ಲಿ ಎರಡು ಬೈಕ್‌ಗಳನ್ನು ಪೊಲೀಸರ ಸಮ್ಮುಖದಲ್ಲೆ  ಕದ್ದಿರುವುದನ್ನು ತೋರಿಸುವ ವೈರಲ್ ವೀಡಿಯೊ ಸಂಪೂರ್ಣವಾಗಿ ಸ್ಕ್ರಿಪ್ಟ್ ಆಗಿದೆ. ಇದನ್ನು ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊವನ್ನು ರಾಜ್ ಠಾಕೂರ್ ಎಂಬ ಕಂಟೆಂಟ್ ಕ್ರಿಯೇಟರ್ ಮತ್ತು ಅವರ ತಂಡವು ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಿಸಿದೆ ಎಂದು ವಿಡಿಯೋದ ಡಿಸ್‌ಕ್ಲೈಮರ್‌ನಲ್ಲಿ ತಿಳಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಳೆಯ ಫೋಟೊವನ್ನು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights