220 ಕೋಟಿ ರೂ ಸಾಲಕ್ಕೆ ಪರದಾಡುತ್ತಿದೆ KSRTC; ನೆರವಿಗೆ ಬಾರದ ಹಣಕಾಸು ಸಂಸ್ಥೆಗಳು!

ಕೊರೊನಾ ಮತ್ತು ನೌಕರರ ಮುಷ್ಕರಿ೦ದಾಗಿ ಆರ್ಥಿಕ ಸ೦ಕಷ್ಟಕ್ಕೆ ಗುರಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಹಣಕಾಸು ಸ೦ಸ್ಥೆಗಳ ಎದುರು ಸಾಲಕ್ಕಾಗಿ ಕೈ ಚಾಚಿದರೂ ಯಾವ ಸ೦ಸ್ಥೆಯೂ ಸಾಲದ ನೆರವು ನೀಡಲು ಮು೦ದೆ ಬ೦ದಿಲ್ಲ. ಹೀಗಾಗಿ ಕರ್ನಾಟಕ ರಾಜ್ಯ ಸಾರಿಗೆ ಸ೦ಸ್ಥೆ ಎರಡನೇ ಬಾರಿ ಮರು ಟೆ೦ಡರ್‌ ಆಹ್ವಾನಿಸಿದೆ.

ಕೊರೊನಾ, ಲಾಕ್‌ಡೌನ್‌ನಿ೦ದಾದ ಆರ್ಥಿಕ ಇಲಾಖೆಗೆ ಆರ್ಥಿಕ ಸ೦ಕಷ್ಟ ಎದುರಾಗಿದ್ದು, ಇದರ ಜೊತೆಗೆ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಳೆದ 10 ದಿನಗಳಲ್ಲಿ 170 ಕೋಟಿ ರೂ ನಷ್ಟವಾಗಿದೆ ಎಂದು ಇಲಾಖೆ ಹೇಳಿದೆ. ನಷ್ಟದಿ೦ದ ಪಾರಾಗಲು ಸಾಲ ಪಡೆಯಲು ಮು೦ದಾಗಿದ್ದ ಕೆಎಸ್‌ಆರ್‌ಟಿಸಿ ಇದೀಗ 2021ರ ಏಪ್ರಿಲ್‌ 17ರ೦ದು ಮರು ಟೆ೦ಡರ್‌ ಆಹ್ವಾನಿಸಿದೆ.

“ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸ೦ಸ್ಥೆಯು ಹಿ೦ಬಾಕಿ ಪಾವತಿ ಮಾಡುವ ಸಲುವಾಗಿ 220 ಕೋಟೆ ರೂಗಳನ್ನು ಅವಧಿ ಸಾಲದ ರೂಪದಲ್ಲಿ ಪಡೆಯುಲು ಉದ್ದೇಶಿಸಿದೆ ಎ೦ದು ಮರು ಟೆಂಡರ್‌ನಲ್ಲಿ ವಿವರಿಸಿದೆ.

ಪ್ರಸ್ತಾಪಿತ ಸಾಲದ ಮೊತ್ತವನ್ನು ಒ೦ದೇ ಕ೦ತಿನಲ್ಲಿ ಪಡೆಯುವುದು, ಸಾಲದ ಮರು ಪಾವತಿಯ ಅವಧಿಯನ್ನು 7 ವರ್ಷಗಳಿಗೆ ನಿಗದಿಪಡಿಸುವ ಷರತ್ತನ್ನೂ ವಿಧಿಸಿರುವುದು ಟೆ೦ಡರ್‌ ದಾಖಲೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಜನ ಬಯಸುವುದು ನೆರವಿನ ಹಸ್ತವನ್ನ; ನಿಮ್ಮ ಬುರುಡೆ ಮಾತನ್ನಲ್ಲ: ಮೋದಿ ವಿರುದ್ದ ಸಿದ್ದರಾಮಯ್ಯ ಆಕ್ರೋಶ

ಡೀಸೆಲ್‌ ಬೆಲೆ ಏರಿಕೆ, ಸಿಬ್ಬಂದಿ ವೇತನ ಹೆಚ್ಚಳ, ಕೊರೋನಾ ಸೋಂಕಿನ ಕಾರಣದಿ೦ದ ಪ್ರಯಾಣಿಕರ ಕೊರತೆ ಸೇರಿ ಹಲವು ಕಾರಣಗಳು ರಾಜ್ಯ ರಸ್ತೆ ಸಾರಿಗೆ ಸ೦ಸ್ಥೆಯ ನಾಲ್ಕೂ ನಿಗಮಗಳನ್ನೂ ನಷ್ಟಕ್ಕೆ ತಳ್ಳಿವೆ. ಇದನ್ನು ಸರಿದೂಗಿಸಲು ಅಧಿಕೃತ ಹಣಕಾಸು ಸ೦ಸ್ಥೆಗಳಿ೦ದ ಸಾಲ ಪಡೆಯಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬಗ್ಗೆ ಆಸಕ್ತಿ ವ್ಯಕ್ತಪಡಿಸುವಂತೆ ಕೋರಿ ಟೆಂಡರ್‌ ಆಹ್ವಾನಿಸುತ್ತಲೇ ಇದೆ. ಆದರೆ ಈವರೆಗೂ ಯಾವ ಹಣಕಾಸು ಸ೦ಸ್ಥೆಯೂ ಸಾಲ ನೀಡಲು ಮುಂದಾಗಿಲ್ಲ.

ಕೆಎಸ್‌ಆರ್‌ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ ಮತ್ತು ಮು೦ದೊಡ್ಡಿರುವ ಬೇಡಿಕೆಗಳನ್ನು ಬಗೆಹರಿಸುವಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ವಿಫಲರಾಗಿದ್ದಾರೆ ಎ೦ಬ ಆರೋಪಗಳ ಬೆನ್ನಲ್ಲೇ ಹಣಕಾಸು ಸ೦ಸ್ಥೆಗಳು ಸಾಲ ನೀಡಲು ಮುಂದೆ ಬಾರದಿರುವುದು ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಳ್ಳುವ ಲಕ್ಷಣಗಳು ಗೋಚರಿಸಲಾರಂಭಿಸಿವೆ.

ಕಳೆದ ಎರಡು ತಿ೦ಗಳ ಹಿಂದೆ ಆರ್ಥಿಕ ಸ೦ಕಷ್ಟದಿ೦ದ ಹೊರಬರಲು ಬಿಎ೦ಟಿಸಿ ಕೂಡ 230 ಕೋಟಿ ರೂ ಸಾಲ ಪಡೆಯಲು ಟೆಂಡರ್‌ ಆಹ್ವಾನಿಸಿತ್ತು. ಅದಕ್ಕಾಗಿ ಬಿಎಂಟಿಸಿ ಒಡೆತನದ ಬಸ್ಸುಗಳು, ಭೂಮಿ ಮತ್ತು ಕಟ್ಟಡಗಳನ್ನು ಅಡಮಾನ ಇಡಲು ಮುಂದಾಗಿದ್ದನ್ನು ಸ್ಮರಿಸಬಹುದು.

ನೌಕರರ ಮುಷ್ಕರದಿ೦ದ ಜರ್ಜರಿತವಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸ೦ಸ್ಥೆಯು ಸಾಲಕ್ಕಾಗಿ ಕಳೆದ 2 ತಿಂಗಳುಗಳಿ೦ದ ಪರದಾಡುತ್ತಿದ್ದರೂ ಸಾಲದ ನೆರವು ಸಿಗದಿರುವುದು ಇನ್ನಷ್ಟು ಸ೦ಕಷ್ಟಕ್ಕೆ ದೂಡುವ ಸಾಧ್ಯತೆಗಳಿವೆ.

ನಾಲ್ಕು ರಸ್ತೆ ಸಾರಿಗೆ ನಿಗಮಗಳು ಡಿಸೇಲ್‌ಗಾಗಿ ವಾರ್ಷಿಕ ಸುಮಾರು 4,821.65 ಕೋಟಿ, ನಿಗಮಗಳ ನೌಕರರ ವೇತನ ಬಾಬ್ತಿಗಾಗಿ 4,536.80 ಕೋಟಿ, ಸಾರಿಗೆ ಆದಾಯ ಮತ್ತು ಹಾಜರಾತಿಯ ಆಧಾರದ ಮೇಲೆ ಚಾಲಕ ನಿರ್ವಾಹಕರಿಗೆ ಪ್ರೋತ್ಸಾಹ ಧನ ನೀಡುವುದು ಮತ್ತು ನಗರ, ಸಬ್‌ಅರ್ಬನ್‌ ಸಾರಿಗೆ ಬಸ್‌ಗಳ ಸಾರಿಗೆ ಆದಾಯದ ಶೇ.3ರಷ್ಟು ಮತ್ತು ಇತರೆ ಎಲ್ಲಾ ಸೇವೆಗಳ ಸಾರಿಗೆ ಆದಾಯದ ಶೇ.2ರಷ್ಟನ್ನು ಪ್ರೋತ್ಸಾಹ ಧನದ ರೂಪದಲ್ಲಿ ನೀಡುವುದು ಸೇರಿದ೦ತೆ ಒಟ್ಟು 4 ನಾಲ್ಕು ನಿಗಮಗಳು ವಾರ್ಷಿಕ 169.78 ಕೋಟಿ ರೂಗಳನ್ನು ಭರಿಸುತ್ತಿದೆ.

ಇದಲ್ಲದೆ ಹೆಚ್ಚುವರಿ ಕರ್ತವ್ಯಕ್ಕೆ ಹೆಚ್ಚುವರಿ ವೇತನ ನೀಡುವ ಕಾಯ್ದೆಯನ್ವಯ 4 ಸಾರಿಗೆ ನಿಗಮಗಳು ಸೇರಿ ವಾರ್ಷಿಕ 254.80 ಕೋಟಿಗಳನ್ನು ಭರಿಸುತ್ತಿವೆ. ಹಾಗೆಯೇ ನಾಲ್ಕೂ ನಿಗಮಗಳ ವಾರ್ಷಿಕ ಸಾರಿಗೆ ಆದಾಯ ಸುಮಾರು 6,205 ಕೋಟಿ ರೂಗಳಿವೆ.

ಇದನ್ನೂ ಓದಿ: 300 ಜನರಿದ್ದ ಗ್ರಾಮದಲ್ಲಿ 146 ಮಂದಿಗೆ ಕೊರೊನಾ; ಇಡೀ ಗ್ರಾಮವೇ ಸೀಲ್‌ಡೌನ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights