Bigg Boss: ಕಾಣದಂತೆ ಮಾಯವಾದವು ಬಿಗ್ ಬಾಸ್ ಮನೆಯ ವಸ್ತುಗಳು..!

ಬಿಗ್ ಬಾಸ್ ಮನೆಯ ಎಲ್ಲಾ ವಸ್ತುಗಳು ಕಾಣದಂತೆ ಮಾಯಾವಾಗಿವೆ. ಇದರಿಂದಾಗಿ ಬೆಳ್ಳಂಬೆಳಿಗ್ಗೆ ಮನೆಯ ಎಲ್ಲಾ ಸದಸ್ಯರಿಗೂ ಬಿಗ್ ಶಾಕ್ ಆಗಿದೆ.

ಹೌದು… ಮನೆಯ ಬೆಡ್, ದಿನಸಿ, ಬಾತ್ ರೂಮ್ ವಸ್ತುಗಳು, ಬ್ರೆಶ್, ಪಾತ್ರೆಗಳು, ತರಕಾರಿ ಎಲ್ಲವನ್ನು ಬಿಗ್ ಬಾಸ್ ತೆಗೆದುಕೊಂಡಿದ್ದಾರೆ. ಬೆಳಿಗ್ಗೆ ಕಾಫಿ, ತಿಂಡಿ ಯಾಗವುದೂ ಇಲ್ಲ. ಅಷ್ಟೇ ಯಾಕೆ ಸ್ನಾನ ಕೂಡ ಇಲ್ಲ.

ಬಿಗ್ ಬಾಸ್ ಮನೆನೇ ಹಾಗೆ. ಯಾವುದು ಕೂಡ ಸುಲಭವಾಗಿ ಸಿಗುತ್ತೆ ಅಂತ ಹೇಳಲು ಸಾಧ್ಯವೇ ಇಲ್ಲ. ಮನೆಯ ಸದಸ್ಯರಿಗೆ ಕೆಲವೊಂದು ವಸ್ತುಗಳು ತುಂಬಾ ಈಜಿಯಾಗಿ ಸಿಗ್ತಾಯಿದ್ವು. ಅದಕ್ಕೆ ಬಿಗ್ ಬಾಸ್ ಮನೆಯ ಎಲ್ಲಾ ವಸ್ತುಗಳನ್ನು ತೆಗೆದುಕೊಂಡಿದ್ದಾರೆ. ಮನೆಯ ಎಲ್ಲಾ ವಸ್ತುಗಳನ್ನು ಪಡೆಲು ಹಂತ ಹಂತವಾಗಿ ಆಟಗಳನ್ನು ಕೊಡುತ್ತಿದ್ದಾರೆ. ಈ ಆಟದಲ್ಲಿ ಗೆದ್ದರೆ ಮಾತ್ರ ವಸ್ತುಗಳನ್ನು ವಾಪಸ್ ಪಡೆಯಬಹುದು.

ಹೀಗಾಗಿ ಬಿಗ್ ಬಾಸ್ ನೀಡಿದ ಮೊದಲ ಆಟದಲ್ಲಿ ಮನೆಗೆ ದಿನಸಿ ತೆಗೆದುಕೊಂಡ ಮನೆಯ ಸದಸ್ಯರು, 2ನೇ ಆಟದಲ್ಲಿ ಪಾತ್ರೆಗಳನ್ನು ಪಡೆದರು. ಆದರೆ ಮೂರನೆ ಆಟದಲ್ಲಿ ಬಾತ್ ರೂಮ್ ಸಾಮಾಗ್ರಿಗಳನ್ನು ಆಯ್ಕೆ ಮಾಡಿದ್ದರು ಆದರೆ ಇದನ್ನು ಪಡೆಯುವಲ್ಲಿ ಮನೆಯ ಸದಸ್ಯರು ವಿಫಲವಾಗಿದ್ದಾರೆ.

ಒಟ್ಟಿನಲ್ಲಿ ಬಿಗ್ ಬಾಸ್ ನೀಟಿದ ಆಟದಲ್ಲಿ ಮನೆಯ ಸದಸ್ಯರು ಒಂದನ್ನ ಪಡೆದುಕೊಂಡರೆ ಮತ್ತೊಂದನ್ನ ಪಡೆದುಕೊಳ್ಳದೇ ಇರುವುದು ಒಂದೊಂದು ವಸ್ತುವಿನ ಬೆಲೆ ಗೊತ್ತಾದಂತಾಗಿದೆ. ಮುಂದಿನ ಆಟದಲ್ಲಿ ಮನೆಯ ಸದಸ್ಯರು ಯಾವ ವಸ್ತು ಕಳೆದುಕೊಳ್ತಾರೆ ಯಾವುದನ್ನ ಕಳೆದುಕೊಳ್ಳುತ್ತಾರೆ ಅಂತ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights