ಮಾರ್ಚ್‌ 31ರ ವರೆಗೆ ರೈಲು ಪ್ರಯಾಣಕ್ಕಿಲ್ಲ ಅವಕಾಶ

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಇಂದು ಜನತಾ ಕರ್ಪ್ಯೂಗೆ  ಕೇಂದ್ರ ಸರ್ಕಾರ ಕರೆಕೊಟ್ಟಿತ್ತು. ದೇಶದ ಪ್ರಮುಖ ನಗರಗಳಲ್ಲಿ ಜನತಾ ಕರ್ಫ್ಯೂಗೆ ಕರೆಗೆ ಓಗೊಟ್ಟು ಮನೆಗಳಲ್ಲಿಯೇ ಉಳಿದಿದ್ದಾರೆ. ಇಂದಿನ ಜನತಾ ಕರ್ಫ್ಯೂಗೆ ಬೆಂಬಲಿಸಿದ್ದ ರೈಲ್ವೇ ಇಲಾಖೆ ಇಂದು ಎಲ್ಲಾ ರೈಲುಗಳ ಸಂಚಾರವನ್ನು ರದ್ದುಗೊಳಿಸಿತ್ತು.

ಕೊರೊನಾ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುಲು ರೈಲುಗಳ ಸಂಚಾರವನ್ನು ಮಾರ್ಚ್‌ 31ರ ವರೆಗೆ ರದ್ದುಗೊಳಿಸಿರುವುದಾಗಿ ರೈಲ್ವೇ ಇಲಾಖೆ ತಿಳಿಸಿದೆ. ಹೆಚ್ಚು ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತರಾದ್ದರಿಂದ ಸೋಂಕು ಹೆಚ್ಚಾಗಿ ಹರಡುವ ಸಾಧ್ಯತೆಯನ್ನು ಪರಿಗಣಿಸಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಪ್ರಯಾಣಿಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು ಕೇವಲ ಗೂಡ್ಸ್ ರೈಲುಗಳು ಮಾತ್ರ ಸಂಚರಿಸಲಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ರೈಲ್ವೆಇಲಾಖೆ ಪ್ರಯಾಣಿಕ ರೈಲು ಸಂಚಾರ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ನಿರ್ಧರಿಸಲಾಗಿದ್ದು, ಕೇವಲ ಗೂಡ್ಸ್ ರೈಲು ಸಂಚರಿಸಲಿವೆ. ಉಪನಗರ ರೈಲುಗಳು ಮತ್ತು ಕೋಲ್ಕತ್ತಾ ಮೆಟ್ರೊ ಸೇವೆಗಳು ಇಂದು ಮಧ್ಯರಾತ್ರಿಯವರೆಗೆ ಸಂಚರಿಸಲಿವೆ.

ಮಾರ್ಚ್ 13ರಿಂದ 16ರ ವರೆಗೆ ರೈಲುಗಳಲ್ಲಿ ಸಂಚರಿಸಿದ 12 ಪ್ರಯಾಣಿಕರಲ್ಲಿ ಕೊರೋನಾ ವೈರಸ್ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಈ ಕ್ರಮ ಕೈಗೊಂಡಿದೆ.

ಮಾರ್ಚ್ 31ರವರೆಗೆ ರೈಲುಗಳು ರಾಜ್ಯಕ್ಕೆ ಬರಲು ಅವಕಾಶ ಕೊಡಬೇಡಿ ಎಂದು ಜಾರ್ಖಂಡ್ ಸರ್ಕಾರ ರೈಲ್ವೆ ಮಂಡಳಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights