ಫ್ಯಾಕ್ಟ್‌ಚೆಕ್ : ಯುವತಿಯನ್ನು ಮರಕ್ಕೆ ನೇತು ಹಾಕಿ ಥಳಿಸುತ್ತಿರುವ ವಿಡಿಯೋ ದೃಶ್ಯಗಳು ಮಣಿಪುರದಲ್ಲ! ಮತ್ತೆಲ್ಲಿಯದ್ದು?

ಮಣಿಪುರದಲ್ಲಿ ಹಿಂಸಾಚಾರಗಳು ನಡೆದ ಸಂದರ್ಭದಲ್ಲಿ ಇಂಟರ್‌ನೆಟ್‌ ಸೌಲಭ್ಯವನ್ನು ಕಡಿತಗೊಳಿಸಲಾಗಿತ್ತು. ನಂತರದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರವಾದ ವಿಡಿಯೋಗಳಲ್ಲಿ ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಪೈಶಾಚಿಕ ಕೃತ್ಯಗಳು ದೇಶದವನ್ನೆ ಬೆಚ್ಚಿಬೀಳಿಸಿತ್ತು. ಈಗ ಮತ್ತೆ ಅಂತಹದೇ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು ಮಣಿಪುರದಲ್ಲಿ ನಡೆದ ಘಟನೆಯ ವಿಡಿಯೋಗಳು ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಇನ್ನು ಕೆಲವರು ಈ ವೈರಲ್ ವಿಡಿಯೋವನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಸರ್ಕಾವನ್ನು ಟೀಕಿಸಿ ಪೋಸ್ಟ್‌ ಮಾಡಿದ್ದಾರೆ. ಹಾಗಿದ್ದರೆ ಈ ವೈರಲ್ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ ದೃಶ್ಯಗಳು ಎಲ್ಲಿಯವು? ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜುಲೈ 2, 2021 ರಂದು ದಿ ಕ್ವಿಂಟ್‌ ಪ್ರಕಟಿಸಿದ ವರದಿ ಲಭ್ಯವಾಗಿದೆ. ವರದಿಯ ಪ್ರಕಾರ 19ವರ್ಷದ ಮಹಿಳೆಯನ್ನು ಆತನ ತಂದೆ ಮತ್ತು ಸಹೋದರ ಸೇರಿ ಮರಕ್ಕೆ ಕಟ್ಟಿ ನೇತು ಹಾಕಿ ಥಳಿಸುತ್ತಿದ್ದಾರೆ ಎಂದು ವರದಿಯಾಗಿದೆ.

19ವರ್ಷದ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಗಂಡನ ಮನೆಯಿಂದ ಯಾರಿಗೂ ಹೇಳದಂತೆ ಹೋಗಿದ್ದ ಹುಡುಗಿಯ ತಂದೆ ಮತ್ತು ಆಕೆಯ ಅಣ್ಣ ಮರಕ್ಕೆ ಕಟ್ಟಿ ಮನಸೋ ಇಚ್ಚೆ ಥಳಿಸಿರುವ ಈ ಘಟನೆ ಮಧ್ಯಪ್ರದೇಶದ ಅಲಿರಾಜ್‌ಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ನಂತರ ಥಳಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದಂತೆ ಯುವತಿಯ ತಂದೆ ಮತ್ತು ಸಹೋದರನ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

19ವರ್ಷದ ಮಹಿಳೆಯನ್ನು  21 ವರ್ಷದ ಯುವಕನೊಂದಿಗೆ ವರದಕ್ಷಿಣೆ ನೀಡಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಕೆಲವೊಮ್ಮೆ ಯುವತಿ ತನ್ನ ಪತಿಗೆ ತಿಳಿಸದೆ ತವರು ಮನೆಗೆ ಹೋಗುತ್ತಿದ್ದಳು. ಇದರಿಂದ ಪೋಷಕರು ಬೇಸರಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 2, 2021 ರಂದು, ಅಲಿರಾಜ್‌ಪುರ ಪೊಲೀಸರು ಹುಡುಗಿಯ ತಂದೆ ಕೆಲ್ ಭೇಲ್, ಸಹೋದರ ಭುವನ್ ಭೇಲ್, ಸಂಬಂಧಿಕರಾದ ಕರಮ್ ಭೇಲ್ ಮತ್ತು ದಿನೇಶ್ ಭೇಲ್ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ, ಸೆಕ್ಷನ್ 294, 323 ಮತ್ತು 355 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಲಿರಾಜ್‌ಪುರ ಎಸ್‌ಪಿ ವಿಜಯ್ ಭಗವಾನಿ ದಿ ಕ್ವಿಂಟ್‌ಗೆ ತಿಳಿಸಿದ್ದಾರೆ. ದಾಳಿಯ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಯ ನಂತರ ತಾಯಿಯೊಂದಿಗೆ ಬಿಡುಗಡೆ ಮಾಡಲಾಗಿದೆ ಎಂದು ವರದಿ ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 19 ವರ್ಷದ ಯುವತಿಯೊಬ್ಬಳಿಗೆ ಮದುವೆಯಾಗಿದ್ದು  ಅಧೇ ಂದರ್ಬದಲ್ಲಿ ಆಕೆಯ ಗಂಡನ  ಗುಜರಾತ್‌ಗೆ ಕೂಲಿ ಕೆಲಸಕ್ಕೆಂದು ಹೋದಾಗ. ಮಹಿಳೆ ತನ್ನ ಗಂಡನ ಮನೆಯಲ್ಲಿ ಇರಲು ಸಾಧ್ಯವಾಗದೆ  ಎರಡನೇ ಬಾರಿಗೆ ತನ್ನ ಅತ್ತೆಯ ಮನೆಯಿಂದ ಓಡಿಹೋಗಿದ್ದಳು ಮತ್ತು ತನ್ನ ತಾಯಿಯ ಚಿಕ್ಕಪ್ಪನ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದಳು. ಇದು ಅವಳ ತಂದೆ ಮತ್ತು ಮೊದಲ ಸೋದರಸಂಬಂಧಿಗಳನ್ನು ಕೆರಳಿಸಿತು.

ಆಕೆಯ ತಂದೆ ಮತ್ತು ಸೋದರಸಂಬಂಧಿಗಳು ಅವಳನ್ನು ತನ್ನ ಚಿಕ್ಕಪ್ಪನ ಮನೆಯಿಂದ ಹೊರಗೆಳೆದು ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಪರಿ ಪರಿಯಾಗಿ ಬೇಡಿಕೊಂಡರೂ ಬಿಡದೆ ಥಳಿಸಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಅಲಿರಾಜ್‌ಪುರದಲ್ಲಿ ನಡೆದಿದೆ. ಆದರೆ ಈ ದೃಶ್ಯಗಳು ಮಣಿಪುರದಲ್ಲಿ ನಡೆದಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಕ್ವಿಂಟ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಕ್ಯಾಪ್ಸಿಕಮ್‌ನಲ್ಲಿ ಪತ್ತೆಯಾಗಿದ್ದು ವಿಶ್ವದ ಅತ್ಯಂತ ಚಿಕ್ಕ ವಿಷಕಾರಿ ಹಾವು ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights