ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿ ಅಶ್ಲೀಲ ಚಿತ್ರ ನೋಡುತ್ತಿರುವಂತೆ ಎಡಿಟ್ ಮಾಡಿದ ಫೋಟೊ ಹಂಚಿಕೆ

ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊವೊಂದು ವೈರಲ್ ಆಗುತ್ತಿದ್ದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ತನ್ನ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರವನ್ನು ನೋಡುತ್ತಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

“ಮಹಾ ಜನಗಳೇ ನೋಡಿಕೊಳ್ಳಿ ಇವರೇ ನಮ್ಮ ದೇಶದ ಭವಿಷ್ಯದ ಪ್ರಧಾನ ಮಂತ್ರಿಗಳು” ಎಂಬ ವ್ಯಂಗ್ಯದೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಚಿತ್ರದಲ್ಲಿ ಇರುವಂತೆ ನಿಜವಾಗಿಯೂ ರಾಹುಲ್ ಗಾಂಧಿ ಸಾರ್ವಜನಿಕವಾಗಿ ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರವನ್ನು ವೀಕ್ಷಿಸಿದ್ದಾರೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಫೋಟೊವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ರಾಹುಲ್ ಗಾಂಧಿಯವರು ಅದೇ ಲುಕ್‌ನಲ್ಲಿರುವ ಒಂದೇ ರೀತಿಯ ಚಿತ್ರವೊಂದು ಗೆಟ್ಟಿ ಇಮೇಜಸ್‌ನಲ್ಲಿ ಲಭ್ಯವಾಗಿದೆ.

ಗೆಟ್ಟಿ ಇಮೇಜಸ್‌ನಲ್ಲಿ ಪೋಟೊವನ್ನು ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದ್ದು, 2016 ನವೆಂಬರ್ 8ರಂದು ನರೇಂದ್ರ ಮೋದಿ ಘೋಷಿಸಿದ ರೂ 1000 ಮತ್ತು ರೂ 500 ಮುಖಬೆಲೆಯ ಹಳೆಯ ನೋಟುಗಳ ಅಮಾನ್ಯೀಕರಣದಿಂದಾಗಿ ಸಾರ್ವಜನಿಕರು ಬ್ಯಾಂಕುಗಳ ಮುಂದೆ ಜಮಾಯಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನವೆಂಬರ್ 11, 2016 ರಂದು ಜನರ ಸಮಸ್ಯೆಯನ್ನು ಆಲಿಸುತ್ತ ರೂ 1000 ಮುಖಬೆಲೆಯ ಹಳೆಯ ನೋಟುಗಳನ್ನು ಎಣಿಸುತ್ತಿರುವುದನ್ನು ಕಾಣಬುಹುದು.

Embed from Getty Images

ndian National Congress vice-president Rahul Gandhi carries old denomination 1000 rupee notes at a bank as he arrives to exchange them in New Delhi on November 11, 2016. Long queues formed outside banks in India as people crowded into deposit and withdraw money after the two largest denomination notes were taken out of circulation.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಚಿತ್ರದಲ್ಲಿ ರಾಹುಲ್ ಗಾಂಧಿಯವರು ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿರುವಂತೆ ಎಡಿಟ್ ಮಾಡಲಾಗಿದೆ. ಎಡಿಟ್ ಮಾಡಿದ ಚಿತ್ರದಲ್ಲಿ ರಾಹುಲ್ ಗಾಂಧಿಯವರ ಕೈ ಬೆರಳುಗಳು ಮೊಂಡಾಗಿರುವುದನ್ನು ಕಾಣಬಹುದು. ಆದರೆ ಮೂಲ ಚಿತ್ರದಲ್ಲಿ ರಾಹುಲ್ ಗಾಂಧಿ ಕೈಬೆರಳುಗಳು ಸ್ಪಷ್ಟವಾಗಿ ಕಾಣುತ್ತವೆ. ಹಾಗಾಗಿ ವೈರಲ್ ಚಿತ್ರವನ್ನು ಎಡಿಟ್ ಮಾಡಿ ಹಂಚಿಕೊಂಡಿರುವುದು ದೃಢವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವ ರಾಹುಲ್ ಗಾಂಧಿ ಚಿತ್ರವನ್ನು ಗಿಟ್ಟಿ ಇಮೇಜಸ್‌ನಿಂದ ಮೂಲ ಫೋಟೋವನ್ನು ತೆಗೆದುಕೊಂಡು ಸಾರ್ವಜನಿಕವಾಗಿ ಅಶ್ಲೀಲ ಚಿತ್ರವನ್ನು ವೀಕ್ಷಿಸುತ್ತಿರುವಂತೆ ಮಾರ್ಫ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕ್ಯಾಪ್ಸಿಕಮ್‌ನಲ್ಲಿ ಪತ್ತೆಯಾಗಿದ್ದು ವಿಶ್ವದ ಅತ್ಯಂತ ಚಿಕ್ಕ ವಿಷಕಾರಿ ಹಾವು ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights