ಫ್ಯಾಕ್ಟ್‌ಚೆಕ್: ಕೇರಳದ 32 ಸಾವಿರ ಹಿಂದೂ ಹುಡುಗಿಯರನ್ನು ಅಪಹರಿಸಿ ISIS ಉಗ್ರರನ್ನಾಗಿ ಮಾಡಲಾಗಿದೆಯೆ?

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಹಿಜಾಬ್ ಧರಿಸಿರುವ ಹಿಂದೂ ಮಹಿಳೆ ಎಂದು ಹೇಳಿಕೊಂಡು ಮಾತನಾಡುವ ಮಹಿಳೆ “ತನ್ನ ಹೆಸರು ಶಾಲಿಸಿ ಉನ್ನಿಕೃಷ್ಣ ಕೇರಳದ ಹಿಂದೂ ಮಹಿಳೆ. ನಾನು ದಾದಿಯಾಗಲು ಬಯಸಿದ್ದೆ. ಆದರೆ ಇಂದು ನಾನು ಫಾತಿಮ ಬಾ, ಐಸಿಸ್ ಭಯೋತ್ಪಾದಕಿ” ಎಂದು ಹೇಳುವ ವಿಡಿಯೋವೊಂದು ಪ್ರಸಾರವಾಗುತ್ತಿದೆ.

ನನ್ನನ್ನು ಮನೆಯಿಂದ ಅಪಹರಿಸಿ  ಪ್ರಸ್ತುತ ಅಫ್ಘಾನಿಸ್ತಾನದ ಜೈಲಿನಲ್ಲಿ ISIS ಭಯೋತ್ಪಾದಕರಾಗಿ ಬಂಧಿಸಲ್ಪಟ್ಟಿದ್ದಾರೆ. ಇದು ನನ್ನೊಬ್ಬಳ ಕಥೆಯಲ್ಲ ನನ್ನಂತೆ  ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಸುಮಾರು 32,000 ಹುಡುಗಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ. ಅವರಲ್ಲಿ ಹೆಚ್ಚಿನವರು ಸಿರಿಯಾ, ಅಫ್ಘಾನಿಸ್ತಾನ ಮತ್ತು ಇತರ ಪ್ರದೇಶಗಳಲ್ಲಿ ISIS ಮತ್ತು ಹಕ್ಕಾನಿ ಪ್ರಭಾವದ ಪ್ರದೇಶದಲ್ಲಿ ಕೊನೆಗೊಳ್ಳುತ್ತಾರೆ. ಇದನ್ನು ನಿಲ್ಲಿಸಲು ಯಾರಿಂದಲಾದರೂ ಸಾಧ್ಯವೆ? ಎಂದು ಹೇಳುವ ವಿಡಿಯೋ ಕ್ಲಿಪ್‌ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

ಕುತೂಹಲ ಭರಿತ ಈ ವಿಡಿಯೋವನ್ನು ಏನ್‌ಸುದ್ದಿ.ಕಾಂ ವಾಟ್ಸಾಪ್‌ ಸಂಖ್ಯೆಗೂ ಹಂಚಿಕೊಳ್ಳವ ಮೂಲಕ, ನಮ್ಮ ಓದುಗರು ಈ ವಿಡಿಯೋ ದೃಶ್ಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಹಾಗಾಗಿ ಈ ವಿಡಿಯೋದ ದೃಶ್ಯಾವಳಿಗಳ ವಾಸ್ತವವೇನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಪರಿಶೀಲಿಸಿದಾಗ ಇದು ” THE KERELA STORY” ಎಂಬ ಸಿನಿಮಾದ ದೃಶ್ಯಗಳು ಎಂದು ಕೆಲವು ಮೂಲಗಳು ದೃಢಪಡಿಸಿವೆ. ನವೆಂಬರ್ 3 ರಂದು ವಿಪುಲ್ ಅಮೃತಲಾಲ್ ಶಾ ಅವರ ದಿ ಕೇರಳ ಸ್ಟೋರಿಯ ಟೀಸರ್ ಅನ್ನು ಬಿಡುಗಡೆ ಮಾಡಲಾಯಿತು. ಇದು ಕೇರಳದ ಮಹಿಳೆಯರನ್ನು ಹೇಗೆ ಬಲವಂತವಾಗಿ ಪರಿವರ್ತಿಸಲಾಗುತ್ತದೆ ಮತ್ತು ಐಸಿಸ್‌ಗೆ ಸೇರಿಸಲಾಗುತ್ತದೆ ಎಂಬ ಕಥೆಯನ್ನು ಹೇಳುತ್ತದೆ ಎಂದು india today ವರದಿ ಮಾಡಿದೆ.

ಟೀಸರ್‌ನಲ್ಲಿ ನಟಿ ಅದಾ ಶರ್ಮಾ ಅವರು ಮುಸ್ಲಿಂ ಮಹಿಳೆ ಫಾತಿಮಾ ಬಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟೀಸರ್‌ನ ಕ್ಲಿಪ್‌ನಲ್ಲಿ ಬರುವ ಫಾತಿಮಾ ಎಂಬ ಪಾತ್ರವನ್ನು ಪರಿಚಯಿಸುತ್ತ, ತಾನು ನರ್ಸ್ ಆಗುವ ಮೂಲಕ ಮಾನವೀಯತೆಗೆ ಸೇವೆ ಸಲ್ಲಿಸಲು ಬಯಸಿದ್ದೆ ಆದರೆ ನನ್ನನ್ನು ಅಪಹರಿಸಿ ಮತಾಂತರ ಮಾಡಿ ISIS ಭಯೋತ್ಪಾದಕಳನ್ನಾಗಿ ಮಾಡಲಾಯಿತು ಎಂದು ಹೇಳುತ್ತ ಅಂತಿಮವಾಗಿ ಅಫ್ಘಾನಿಸ್ತಾನದ ಜೈಲಿನ ಬಂಧಿ ಎಂದು ಹೇಳುವ ದೃಶ್ಯವನ್ನು ಟೀಸರ್‌ನಲ್ಲಿ ಕಾಣಬಹುದು. ಅದಾ ಶರ್ಮಾ ಟೀಸರ್‌ಅನ್ನು ಹಂಚಿಕೊಂಡಿದ್ದಾರೆ.

ಅಂಕಣಕಾರ ತಾರೆಕ್ ಫತೇಹ್ ಟೀಸರ್ ಅನ್ನು ಹಂಚಿಕೊಂಡಿದ್ದು, “ಭಾರತದ 32,000 #ಹಿಂದೂ ಹುಡುಗಿಯರನ್ನು #ಇಸ್ಲಾಂಗೆ ಮತಾಂತರಿಸಲಾಗಿದೆ, #ISIS ಗುಲಾಮರನ್ನಾಗಿ ಮಾರಾಟ ಮಾಡಲಾಗಿದೆ ಮತ್ತು ಈಗ ಜೈಲಿನಲ್ಲಿ ಅಥವಾ ಮರಳಿನಲ್ಲಿ ಸಮಾಧಿ ಮಾಡಲಾಗಿದೆ ಇದು ಅವರ ಕಥೆ, #TheKeralaStory ಎಂದು ಪೋಸ್ಟ್‌ ಮಾಡಿದ್ದಾರೆ.

ರಾಹುಲ್ ಈಶ್ವರ್ ಕೇರಳದ ಕಥೆಯನ್ನು ‘ಒಂದು ದೊಡ್ಡ ಉತ್ಪ್ರೇಕ್ಷೆ’ ಎಂದು ಕರೆದಿದ್ದಾರೆ

The Kerala Story ಉತ್ಪ್ರೇಕ್ಷೆಯಾಗಿದೆ ಎಂದು ಕಾರ್ಯಕರ್ತ ರಾಹುಲ್ ಈಶ್ವರ್ ಅಭಿಪ್ರಾಯಪಟ್ಟಿದ್ದಾರೆ.  “ಕೇರಳ ಶಿಕ್ಷಣ, ಆರೋಗ್ಯ, ಮೂಲಸೌಕರ್ಯಗಳಲ್ಲಿ ಉತ್ತಮ ಪ್ರಗತಿಯನ್ನು ಹೊಂದಿರುವ ಭಾರತದ ಅತ್ಯುತ್ತಮ ರಾಜ್ಯಗಳಲ್ಲಿ ನಂಬರ್ ಓನ್ ಆಗಿದೆ. ಇದು ಭಯಾನಕ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಆದರೆ 32,000 ಮಹಿಳೆಯರ ಮತಾಂತರ ಎಂಬುದು ಒಂದು ದೊಡ್ಡ ಸುಳ್ಳು #TheKeralaStory  ಟ್ವೀಟ್ ಮಾಡಿದ್ದಾರೆ.

“ಕೇರಳವು ಭಾರತದ ಅತ್ಯುತ್ತಮ ರಾಜ್ಯಗಳಲ್ಲಿ ಒಂದಾಗಿದೆ. ಆದರೆ ನಮಗೆ ಕೆಲವು ಸಮಸ್ಯೆಗಳಿವೆ. ಅದರಲ್ಲಿ ಮೂಲಭೂತವಾದ ಒಂದು. ಸುಮಾರು 100 ಜನರು ಐಸಿಸ್ ಭಯೋತ್ಪಾದಕರನ್ನು ಸೇರುವುದು ನಾವು ಎದುರಿಸುತ್ತಿರುವ ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ಖಂಡಿತವಾಗಿಯೂ, ಇದನ್ನು ಹೈಲೈಟ್ ಮಾಡಬೇಕು ಆದರೆ 32,000 ಹುಡುಗಿಯರು ಹೋಗಿದ್ದಾರೆ ಎಂಬುದು ಶುದ್ದ ಸುಳ್ಳು  32 ಸಾವಿರ ಎನ್ನುವುದು ಉತ್ಪ್ರೇಕ್ಷೆಯಾಗಿದೆ ಎಂದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ‘The Kerela Story’ ಎಂಬ ಸಿನಿಮಾವನ್ನು ವಿಪುಲ್ ಶಾ ನಿರ್ಮಿಸಿದ್ದಾರೆ ಮತ್ತು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ. ಹಾಗಾಗಿ ಇದು ಸಿನಿಮಾವೊಂದರ ದೃಶ್ಯಗಳಾಗಿದೆಯೆ ಹೊರತು ನೈಜ ಘಟನೆ ಅಲ್ಲ. ಹಾಗಾಗಿ ಪೋಸ್ಟ್‌ನಲ್ಲಿನ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಾವು ಕಚ್ಚಿದಾಗ ಗೋಡಂಬಿ ಮರದ ತೊಗಟೆ ತಿಂದರೆ ಸಾವಿನಿಂದ ಪಾರಾಗಬಹುದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights