BJPಗೆ ಉತ್ತರದಲ್ಲಿ JDU, ದಕ್ಷಿಣದಲ್ಲಿ AIADMK ಖಡಕ್‌ ಎಚ್ಚರಿಕೆ ನೀಡಿವೆ: ಕಾರಣವೇನು ಗೊತ್ತಾ?

ತಮಿಳುನಾಡಿನಲ್ಲಿ ಮುಂದಿನ ವರ್ಷ (2021) ವಿಧಾನಸಭಾ ಚುನಾವಣೆ ನಡೆಯಲಿದೆ. ಆಡಳಿತಾರೂಢ AIADMK ಪಕ್ಷವು ಭಾನುವಾರ ಮೊದಲ ರ್ಯಾಲಿಯನ್ನು ನಡೆಸಿದ್ದು, ಮಿತ್ರಪಕ್ಷ ಬಿಜೆಪಿಗೆ ಎಚ್ಚರಿಕೆಯನ್ನೂ ನೀಡಿದೆ. ತಮಿಳುನಾಡಿನಲ್ಲಿ ನಮ್ಮ ಮೇಲೆ ನಿಯಂತ್ರಣ ಸಾಧಿಸಲು ಬಿಜೆಪಿ ಅವಕಾಶವಿಲ್ಲ. ಇಲ್ಲಿ ತಮ್ಮನ್ನು ಬಿಜೆಪಿ ಡಿಕ್ಟೇಟ್‌ ಮಾಡುವುದಾದರೆ ಅವರನ್ನು ಜೊತೆ ಸೇರಿಸಿಕೊಳ್ಳುವ ಮಾತೇ ಇಲ್ಲಾ ಎಂದು ಎಐಎಡಿಎಂಕೆ ಹೇಳಿದೆ.

ಕಳೆದ ವಾರ ಅರುಣಾಚಲ ಪ್ರದೇಶದಲ್ಲಿ ಬಿಜೆಪಿಯು ತನ್ನ ಮಿತ್ರ ಪಕ್ಷವಾದ ಜೆಡಿಯುಗೆ ಆಪರೇಷನ್‌ ಮಾಡಿ 06 ಜೆಡಿಯು ಶಾಸಕರನ್ನು ಬಿಜೆಪಿಗೆ ಸೇರಿಸಿಕೊಂಡಿದೆ. ಇದು ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರಿಗೆ ಭಾರೀ ಮುಖಭಂಗವನ್ನು ಉಂಟುಮಾಡಿದ್ದು, ಬಿಹಾರ ಆಡಳಿತದಲ್ಲಿ ಬಿಜೆಪಿ ಹೆಚ್ಚು ಮೂಗು ತೂರಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬೆನ್ನಲ್ಲೇ, ತಮಿಳುನಾಡಿನಲ್ಲಿ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಾಲಿ ಸಿಎಂ ಕೆ ಪಳನಿಸ್ವಾಮಿ ಅವರು ಕಣಕ್ಕಿಳಿಯುವುದನ್ನು ಬಿಜೆಪಿ ಒಪ್ಪಿಕೊಳ್ಳಬೇಕು. ಅಲ್ಲದೆ, ಚುನಾವಣೆಯಲ್ಲಿ ಗೆದ್ದರೆ, ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ನಿಯಂತ್ರಣ ಸಾಧಿಸಲು ಮುಂದಾಗದೇ ಇರುವಂತಹ ಹಲವು ನಿಯಮಗಳನ್ನು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಬಿಜೆಪಿ ಜೊತೆಗೆ ಸಖ್ಯವಿರುವುದಿಲ್ಲ ಎಂದು ಎಐಎಡಿಎಂಕೆ ಸಭೆಯಲ್ಲಿ ನಿರ್ಧಾರಿಸಲಾಗಿದೆ.

ಇದನ್ನೂ ಓದಿ: ಮಿತ್ರ ಪಕ್ಷಕ್ಕೇ ಆಪರೇಷನ್ ಮಾಡಿದ ಬಿಜೆಪಿ: JDU ಪಕ್ಷದ 06 ಶಾಸಕರು BJPಗೆ ಸೇರ್ಪಡೆ!

ಎಐಎಡಿಎಂಕೆ ನಾಯಕಿ ದಿ.ಜಯಲಲಿತಾ ಮತ್ತು ಡಿಎಂಕೆ ನಾಯಕ ದಿ.ಕರುಣಾನಿಧಿ ಅವರು ಇಲ್ಲಿದಿರುವ ಸಂದರ್ಭದಲ್ಲಿ ತಮಿಳುನಾಡಿನಲ್ಇ ಅನೇಕ ಪಕ್ಷಗಳು ರಾಜಕೀಯಕ್ಕೆ ಪ್ರವೇಶಿಸಲು ಯತ್ನಿಸುತ್ತಿವೆ. ಅಲ್ಲದೆ, ಅವರ ಪ್ರವೇಶವೂ ಯಶಸ್ವಿಯಾಗುತ್ತಿದೆ. ಕೆಲವು ರಾಷ್ಟ್ರೀಯ ಪಕ್ಷಗಳು “ಅವಕಾಶವಾದಿಗಳು, ದ್ರೋಹಿಗಳು ಮತ್ತು ದ್ರಾವಿಡ ಸಂಸ್ಕೃತಿಯನ್ನು ದೂಷಿಸುತ್ತಿವೆ”. ಅವರು ತಮಿಳುನಾಡನ್ನು ಹಾಳುಮಾಡಲು ಹವಣಿಸುತ್ತಿದ್ದಾರೆ ಎಂದು ಎಐಎಡಿಎಂಕೆ ಹಿರಿಯ ನಾಯಕ ಕೆ.ಪಿ.ಮುನುಸಾಮಿ ಆರೋಪಿಸಿದ್ದಾರೆ.

ಇಂತಹ ಎಲ್ಲಾ ಶಕ್ತಿಗಳು, ತಮಿಳುನಾಡಿನಲ್ಲಿ ದ್ರಾವಿಡ ಸಿದ್ಧಾಂತವು ರಾಜ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ತಳಹದಿಯಾಗಿರುವುದರಿಂದ ರಾಜಕೀಯ ಲಾಭ ಗಳಿಸಲು ಯತ್ನಿಸುತ್ತಿರುವವರನ್ನು ತಮಿಳು ಜನರು ಬೆಂಬಲಿಸುವುದಿಲ್ಲ ಎಂದು ಅವರು ಅರಿತುಕೊಳ್ಳಬೇಕು ಎಂದು ಮುನುಸಾಮಿ ಹೇಳಿದ್ದಾರೆ.

ತಮಿಳುನಾಡಿನ ಸಾಮಾಜಿಕ-ರಾಜಕೀಯ ವಾತಾವರಣವು ದ್ರಾವಿಡ ಚಳವಳಿಯಿಂದ ಪೋಷಿಸಲಾಗಿದೆ. ಇದನ್ನು ತಮಿಳು ಸಂಸ್ಕೃತಿ, ಭಾಷೆ ಮತ್ತು ಶೌರ್ಯದ ನೀತಿಗಳ ಮೇಲೆ ನಿರ್ಮಿಸಲಾಗಿದೆ. ಆದ್ದರಿಂದ ರಾಜ್ಯವು ದೇಶದ ಉಳಿದ ಭಾಗಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಮುನುಸಾಮಿ ಹೇಳಿದರು.

ದ್ರಾವಿಡ ಚಳವಳಿಯ ವೈಶಿಷ್ಟ್ಯವು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ರಾಜ್ಯಕ್ಕೆ ರಾಷ್ಟ್ರೀಯ ಪಕ್ಷಗಳ ಪ್ರವೇಶವನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸಿದೆ. ಇಲ್ಲಿ ರಾಜಕೀಯ ಲಾಭಗಳಿಸುವವರ ಆಟ ನಡೆಯುವುದಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಸ್ವತಂತ್ರವಾಗಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಅವರು ಎಐಎಡಿಎಂಕೆ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದ್ರಾವಿಡ ನಾಡಲ್ಲಿ ಬಿಜೆಪಿ ಆಟ: ಕೇಸರಿ ಪಡೆಗೆ ಮರುಳಾಗ್ತಾರಾ ತಮಿಳರು?

ಎಐಎಡಿಎಂಕೆ ಹಿರಿಯ ಪಾಲುದಾರ ಎಂದು ಬಿಜೆಪಿ ಒಪ್ಪಿಕೊಳ್ಳಬೇಕು, ಪಳನಿಸ್ವಾಮಿಯವರ ನೇತೃತ್ವವನ್ನು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ, ಕೇಸರಿ ಪಕ್ಷದೊಂದಿಗಿನ ಹೊಂದಾಣಿಕೆಯನ್ನು ಮರುಪರಿಶೀಲಿಸಬಹುದು ಎಂದು ಅವರು ಹೇಳಿದ್ದಾರೆ.

ಮುನುಸಾಮಿ ನೇರವಾಗಿ ಬಿಜೆಪಿಯನ್ನು ಹೆಸರಿನಿಂದ ಉಲ್ಲೇಖಿಸಿಲ್ಲ. ಆದರೂ, ಅವರ ಸಂದೇಶ ಕೇಂದ್ರ ಸರ್ಕಾರವನ್ನು ಮುನ್ನಡೆಸುತ್ತಿರುವ ರಾಷ್ಟ್ರೀಯ ಪಕ್ಷವನ್ನು ಉದ್ದೇಶಿಸಿತ್ತು ಎಂಬುದು ಸ್ಪಷ್ಟವಾಯಿತು.

“ಅದು ರಾಷ್ಟ್ರೀಯ ಪಕ್ಷವಾಗಲಿ ಅಥವಾ ರಾಜ್ಯ ಪಕ್ಷವಾಗಲಿ .. ಸರ್ಕಾರದ ನೇತೃತ್ವವನ್ನು ಎಐಎಡಿಎಂಕೆ ವಹಿಸಲಿದೆ. ಸಮ್ಮಿಶ್ರ ಸರ್ಕಾರದ ಅವಶ್ಯಕತೆಯಿಲ್ಲ. ಯಾವುದೇ ರಾಜಕೀಯ ಪಕ್ಷವು ಸಮ್ಮಿಶ್ರ ಸರ್ಕಾರದ ಕಲ್ಪನೆಯೊಂದಿಗೆ ಮೈತ್ರಿಗೆ ಮುಂದಾದರೆ, ಅವರು ದಯವಿಟ್ಟು ಅದರ ಬಗ್ಗೆ ಯೋಚಿಸುವುದನ್ನು ಬಿಡಿ “ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ದೇಶದ ಚಿತ್ತ ತಮಿಳುನಾಡಿನತ್ತ! ಕುತೂಹಲ ಕೆರಳಿಸಿದೆ ದ್ರಾವಿಡ ನಾಡಿನ ಚುನಾವಣೆ!

Spread the love

Leave a Reply

Your email address will not be published. Required fields are marked *