ರಾಜ್ಯದ ಜನರಿಗೆ ಬಿಗ್ ಶಾಕ್..? : ಆಸ್ತಿ ತೆರಿಗೆ ಹೆಚ್ಚಳ ಪ್ರಸ್ತಾಪಕ್ಕೆ ಗ್ರೀನ್ ಸಿಗ್ನಲ್!

ಕೊರೊನಾ ಸೋಂಕಿಗೆ ಇಡೀ ರಾಜ್ಯವೇ ನಲುಗಿ ಹೋಗಿದೆ. ಹೀಗಿರುವಾಗ ರಾಜ್ಯ ಸರ್ಕಾರ ರಾಜ್ಯದ ಜನರಿಗೆ ಬಿಗ್ ಶಾಕ್ ಕೊಟ್ಟಿದೆ. ಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾಪಕ್ಕೆ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ಪಾಲಿಕೆಗಳು, ನಗರಪಾಲಿಕೆ, ಪುರಸಭೆ ವ್ಯಾಪ್ತಿಗೆ ಬರುವ ವಸತಿ ಕಟ್ಟಡ, ವಾಣಿಜ್ಯ ಕಟ್ಟಡಗಳು ಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾಪಕ್ಕೆ ಸಂಪುಟ ಸಭೆ ಅಸ್ತು ಎಂದಿದೆ.

ಹೌದು… ಶೇ. 15 ರಿಂದ 30 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಪ್ರಸ್ತಾಪಕ್ಕೆ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ನೆರೆ ಪ್ರವಾಹ ಹಾಗೂ ಕೊರೊನಾ ಸೋಂಕಿಗೆ ಜನ ಮಾತ್ರವಲ್ಲದೇ ರಾಜ್ಯ ಸರ್ಕಾರ ಕೂಡ ಸಂಕಷ್ಟ ಎದುರಿಸುತ್ತಿದೆ. ನೆರೆ ಪ್ರವಾಹದಿಂದಾಗ ಈ ಹಿಂದೆ ಕೇಂದ್ರಕ್ಕೆ ಪರಿಹಾರ ಬೇಡಿದ್ದ ರಾಜ್ಯ ಸರ್ಕಾರಕ್ಕೆ ತೃಪ್ತಿದಾಯಕ ನೆರವು ಸಿಗಲಿಲ್ಲ. ನಂತರ ಏಕಾಏಕಿ ರಾಜ್ಯಕ್ಕೆ ಎಂಟ್ರಿ ಕೊಟ್ಟ ಕೊರೊನಾ ರಾಜ್ಯದ ಜನತೆಯ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ತಲುಪಿಸಿದೆ. ಹೀಗಾಗಿ ಸರ್ಕಾರ ಚೇತರಿಸಿಕೊಳ್ಳಲು ತೆರೆಗೆಯ ಹೊರೆ ಹೇರುತ್ತಿದೆ ಎನ್ನಲಾಗುತ್ತಿದೆ.

ಕೊರೊನಾ ಕಾರ್ಮೋಡದಿಂದ ಹೊರಬಾರಲು ಸಾಧ್ಯವಾಗದ ಜನರಿಗೆ ತೆರಿಗೆ ಬರೆ ಎಳೆದಂತಾಗಿದೆ. ಈಗಾಗಲೇ ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಹೆಚ್ಚಳವನ್ನೇ ಸಹಿಸಿಕೊಳ್ಳದ ಜನ ತೆರಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights