ದೇಶದ ಚಿತ್ತ ತಮಿಳುನಾಡಿನತ್ತ! ಕುತೂಹಲ ಕೆರಳಿಸಿದೆ ದ್ರಾವಿಡ ನಾಡಿನ ಚುನಾವಣೆ!

ಕೊರೊನಾ ಹಾವಳಿಯ ನಡುವೆಯೂ ದೇಶಾದ್ಯಂತ ಹಲವಾರು ಚುನಾವಣೆಗಳು ನಡೆಯುತ್ತಿವೆ. ಬಿಹಾರ ವಿಧಾನ ವಿಧಾನಸಭೆ, ರಾಜಸ್ಥಾನ ಸ್ಥಳೀಯ ಚುನಾವಣೆಗಳು, ಕೆಲವು ರಾಜ್ಯಗಳ ಪರಿಷತ್‌ ಚುನಾವಣೆ ಮತ್ತು ಹಲವು ಉಪಚುನಾವಣೆಗಳು ನಡೆದಿದ್ದು, ಬಿಜೆಪಿ ಹೆಚ್ಚು ಗೆಲುವು ಸಾಧಿಸಿದೆ. ಇದೀಗ, 2021ರ ಆರಂಭದಲ್ಲಿ ಪಶ್ಚಿಮ ಬಂಗಾಳ ಮತ್ತು ದ್ರಾವಿಡ ನಾಡು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು, ಎರಡೂ ರಾಜ್ಯಗಳು ಹಲವು ಕಾರಣಗಳಿಂದಾಗಿ ದೇಶದ ಚಿತ್ತವನ್ನು ಸೆಳೆಯುತ್ತಿವೆ.

ತಮಿಳುನಾಡಿನ ಮುಂಬರುವ ಚುನಾವಣೆ ಮೂರು ಆಯಾವುಗಳಲ್ಲಿ ಕುತೂಹಲವನ್ನು ಹೆಚ್ಚಿಸಿದೆ. ಮೊದಲನೆಯದಾಗಿ, ತಮಿಳುನಾಡಿನ ಕಳೆದ 50 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ ಡಿಎಂಕೆ ಪಕ್ಷದ ನಾಯಕ ಕರುಣಾನಿಧಿ ಮತ್ತು ಎಡಿಎಂಕೆ ಪಕ್ಷದ ನಾಯಕಿ ಜಯಲಲಿತ ಇಲ್ಲದೆ ಚುನಾವಣೆ ನಡೆಯುತ್ತಿದೆ. ಹೀಗಾಗಿ, ಚುನಾವಣೆಯಲ್ಲಿ ಮುಂದಾಳುಗಳ ಕಸರತ್ತು ಹೀಗಿರಲಿದೆ ಎಂಬುದಿದೆ. ಎರಡನೆಯದಾಗಿ, ಕರ್ನಾಟಕ ರಾಜ್ಯವನ್ನು ಬಿಟ್ಟರೆ ದಕ್ಷಿಣದ ಬೇರಾವ ರಾಜ್ಯಗಳಲ್ಲಿಯೂ ನೆಲೆ ಕಾರಣದ ಬಿಜೆಪಿ ತಮಿಳುನಾಡಿನಲ್ಲಿ ತನ್ನ ಖಾತೆ ತೆರೆಯಲೇಬೇಕು ಎಂದು ಭಾರೀ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ಮಾಜಿ ಐಪಿಎಸ್‌ ಅಣ್ಣಾಮಲೈ ಮತ್ತು ನಟಿ ಖುಷ್ಬೂ ಅವರನ್ನು ಪಕ್ಷಕ್ಕೆ ಕರೆತಂದಿರುವ ಬಿಜೆಪಿ ಖಾತೆ ತೆರೆಯಲಿದೆಯೇ ಎಂಬುದು ಚಿತ್ತವನ್ನು ಸೆಳೆದಿದೆ. ಮತ್ತುಮೂರನೆಯದಾಗಿ, ಸಿನಿಮಾ ಸ್ಟಾರ್‌ಗಳಾದ ರಜನೀಕಾಂತ್‌ ಮತ್ತು ಕಮಲ್‌ಹಾಸನ್‌ ಕೂಡ ಚುನಾವಣಾ ಕಣಕ್ಕಿಳಿದಿದ್ದು, ಸ್ಟಾರ್‌ಗಳ ಕಮಾಲ್‌ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕಮಲ್‌ ಹಾಸನ್‌ ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ತಮ್ಮ ಮಕ್ಕಳ್​ ನೀಧಿ ಮಯ್ಯಂ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಘೋಷಿಸಿದ್ದಾರೆ. ಇನ್ನು ರಜನೀಕಾಂತ್‌ ಚುನಾವಣಾ ಅಕಾಡಕ್ಕೆ ಇಳಿಯುವ ಸೂಚನೆ ಕೊಟ್ಟಿದ್ದರೂ, ಇನ್ನೂ ಖಚಿತ ಪಡಿಸಿಲ್ಲ. ಆದರೆ, ಅವರು ಕಣ್ಣಕ್ಕೆ ಇಳಿಯವುದು ಬಹುತೇಕ ಖಚಿತವಾಗಿದೆ.  ಘಟಾನುಗಟಿ ದ್ರಾವಿಡ ಪಕ್ಷಗಳ ನಡುವೆ ಚಿತ್ರನಟರ ರಾಜಕೀಯ ತಂತ್ರ ಹೇಗಿರಲಿದೆ ಎಂದು ಜನ ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ದ್ರಾವಿಡ ನಾಡಲ್ಲಿ ಬಿಜೆಪಿ ಆಟ: ಕೇಸರಿ ಪಡೆಗೆ ಮರುಳಾಗ್ತಾರಾ ತಮಿಳರು?

ರಾಜಕೀಯ ಸಕ್ರಿಯತೆಯನ್ನು ಆರಂಭಿಸಿರುವ ಕಮಲ್‌ ಹಾಸನ್‌ ಟ್ವಿಟರ್‌ನಲ್ಲಿ ರಾಜಕೀಯ ಆದೋಂಲನ ಆರಂಭಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ, ವೋಟರ್ ಐಡಿ (ಮತದಾನ ಗುರುತಿನ ಚೀಟಿ) ನಮಗೆ ಅಸ್ತ್ರ ಇದ್ದಂತೆ, ಮತದಾನ ಚಲಾಯಿಸಲು ಅರ್ಹರು ಚುನಾವಣೆಯಲ್ಲಿ ಮತ ಚಲಾಯಿಸಿ, ಐಡಿ ಇಲ್ಲದವರು ವೋಟರ್‌ ಐಡಿಗಾಗಿ ನೊಂದಾಯಿಸಿ. “ನಾನು ಬದಲಾಗುತ್ತೇನೆ, ಮತ ಚಲಾಯಿಸುತ್ತೇನೆ” ಎಂದು ಎಲ್ಲರೂ ಸಂಕಲ್ಪತೊಡಿ ಎಂದು ಕರೆಕೊಟ್ಟಿದ್ದರು.

ಅಲ್ಲದೆ, ಮೂರು ದಿನಗಳ ಹಿಂದೆ, ಹೊಸ ಸಂಸತ್‌ ಭವನದ ಶಂಕುಸ್ಥಾಪನೆಗೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿದ್ದ ಕಮಲ್‌, “ದೇಶದ ಅರ್ಧದಷ್ಟು ಜನರು ಹಸಿದು ಸಾಯುವಾಗ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸಂಸತ್ ಭವನದ ಅಗತ್ಯವೇನು?” ಎಂದು ಪ್ರಶ್ನೆ ಮಾಡಿದ್ದರು.

ತಮಿಳುನಾಡಿನಲ್ಲಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಡಿಎಂಕೆ ಪಕ್ಷದ ಆಡಳಿತದ ಚುಕ್ಕಾಣಿ ಹಿಡಿದಿದೆ. ಅಲ್ಲದೆ, ಈ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಸಾಧಿಸಿದ್ದು ಮತ್ತೊಂದು ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ತವಕದಲ್ಲಿದೆ.  ಬಿಜೆಪಿ ಈ ಚುನಾವಣೆಯಲ್ಲಾದರೂ ದ್ರಾವಿಡ ಮಣ್ಣಲ್ಲಿ ಖಾತೆ ತೆರೆಯಲೇಬೇಕು ಎಂಬ ಹುಮ್ಮಸ್ಸಿನಲ್ಲಿದೆ. ಮತ್ತೊಂದೆಡೆ ಸತತ 10 ವರ್ಷಗಳ ಕಾಲ ವಿರೋಧ ಪಕ್ಷದ ಸ್ಥಾನದಲ್ಲೇ ಕುಳಿತಿರುವ ಡಿಎಂಕೆ ಈ ವರ್ಷ ಅಧಿಕಾರಕ್ಕೇರುವ ತಯಾರಿಯಲ್ಲಿದೆ.

ಇದನ್ನೂ ಓದಿ: ಒಂದೂ ಸ್ಥಾನ ಗೆಲ್ಲದ ತಮಿಳುನಾಡಿನಲ್ಲಿ ಖಾತೆ ತೆರೆಯಲು ಹಪಾಹಪಿಸುತ್ತಿದೆ ಬಿಜೆಪಿ !

ಈ ನಡುವೆ ತಮಿಳುನಾಡಿನಲ್ಲಿ ಆಳಕ್ಕೆ ಬೇರೂರಿರುವ ಆಡಳಿತ ವಿರೋಧಿ ಅಲೆ ಮತ್ತು ಬಿಜೆಪಿ ವಿರೋಧಿ ಅಭಿಪ್ರಾಯ ಡಿಎಂಕೆ ಪಕ್ಷಕ್ಕೆ ಅನುಕೂಲವಾಗಿ ಪರಿಣಮಿಸಲಿದೆ ಎನ್ನಲಾಗುತ್ತಿದೆ. ಡಿಎಂಕೆ ಈ ಬಾರಿ ಗೆಲುವು ಸಾಧಿಸುವುದು ಖಚಿತ ಎಂದು ಸಹ ಈಗಾಗಲೇ ಹಲವಾರು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಆದರೆ, ನಟರಾದ ರಜನಿಕಾಂತ್ ಮತ್ತು ಕಮಲಹಾಸನ್ ತಮಿಳುನಾಡಿನ ಚಿತ್ರರಂಗದಲ್ಲಿ ತನ್ನದೇಯಾದ ಛಾಪು ಮೂಡಿಸಿದ ಕಲಾವಿದರು. ದೊಡ್ಡ ಅಭಿಮಾನಿವನ್ನು ಹೊಂದಿದ್ದಾರೆ. ಇವರು ಚುನಾವಣಾ ಅಕಾಡಕ್ಕಿಳಿದರೆ, ಡಿಎಂಕೆ, ಎಡಿಎಂಕೆ ಪಕ್ಷಗಳು ಮತಗಳು ಒಡೆಯಲಿವೆ. ಇದು ಯಾರಿಗೆ ಲಾಭ, ಯಾರಿಗೆ ನಷ್ಟ ತಂದುಕೊಡುತ್ತದೆ ಎಂಬುದನ್ನು ಅಖಾಡದಲ್ಲಿ ಕಾದುನೋಡಬೇಕಿದೆ.


ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಆಡಳಿತಾರೂಢ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ; BJPಗಿಂತ ಸ್ವತಂತ್ರರೇ ಹೆಚ್ಚು ಗೆಲುವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights