ಡೇಂಜರ್ ನಲ್ಲಿ ಇದ್ದೇವೆ: ಯೆಸ್ ಬ್ಯಾಂಕ್ ಫಾರೆಕ್ಸ್ ಕಾರ್ಡ್ ಅವಲಂಬಿತ ಭಾರತೀಯ ವಿದೇಶಿ ಪ್ರಯಾಣಿಕರು
ಯೆಸ್ ಬ್ಯಾಂಕ್ ಬಿಕ್ಕಟ್ಟಿನಿಂದ ವಿದೇಶಕ್ಕೆ ಬ್ಯಾಂಕಿನ ಪ್ರೀ ಪೆಯ್ಡ್ ಫಾರೆಕ್ಸ್ ಕಾರ್ಡ್ ಬಳಸಿ ಹೋಗಿರುವ ಗ್ರಾಹಕರಿಗೆ ಭೀತಿ ಹುಟ್ಟಿಸಿದೆ. ಪ್ರಯಾಣ, ಊಟ, ವಸತಿಗೆ ಮತ್ತಿತರ ದೈಂನಂದಿನ ಚಟುವಟಿಕೆಗಳಿಗೆ ನಗದಿನ ಬದಲು ಕಾರ್ಡ್ ಜೊತೆಗೆ ಈ ಬಹುತೇಕರು ಪ್ರಯಾಣ ಬೆಳೆಸಿದ್ದರು. ಸುಮಾರು ನಲವತ್ತು ಸಾವಿರ ಗ್ರಾಹಕರಿಗೆ ತೊಂದರೆ ತಲೆದೋರಿದೆ ಎಂದು ಅಂದಾಜಿಸಲಾಗಿದೆ.
ಆರ್ ಬಿ ಐ ಗುರುವಾರ ಯೆಸ್ ಬ್ಯಾಂಕ್ ನಗದು ಹಿಂಪಡೆಯುವುದಕ್ಕೆ ನಿರ್ಬಂಧ ಹೇರಿತ್ತು. ಒಬ್ಬ ವ್ಯಕ್ತಿ ಗರಿಷ್ಠ 50 ಸಾವಿರ ಮೊತ್ತವನ್ನಷ್ಟೇ ಹಿಂಪಡೆಯಬಹುದಾಗಿ ತಿಳಿಸಿತ್ತು. ತುರ್ತು ಪರಿಸ್ಥಿತಿಗಳಾದ, ಆರೊಗ್ಯ ಖರ್ಚು, ಉನ್ನತ ಶಿಕ್ಷಣ ಅಥವಾ ಮದುವೆ ಖರ್ಚುಗಳಿಗೆ ಮಾತ್ರ ಈ ನಿರ್ಬಂಧವನ್ನು ಸಡಿಲಿಸಿ ತುರ್ತು ಪರಿಸ್ಥಿತಿಗಳಲ್ಲಿ ಐದು ಲಕ್ಷದವರೆಗೆ ಹಣ ಹಿಂತೆಗೆಯಲು ಠೇವಣಿದಾರರಿಗೆ ಅವಕಾಶ ನೀಡಿತ್ತು.
ಇಂತಹ ತೊಂದರೆಗೆ ಸಿಕ್ಕಿಕೊಂಡಿರುವ ಟ್ವಿಟರ್ ಬಳಕೆದಾರರೊಬ್ಬರು ಎಸ್ ಒ ಎಸ್ ಪರಿಸ್ಥಿತಿಯಲ್ಲಿ ಇದ್ದೇನೆ ಎಂದಿದ್ದಾರೆ. “ಪ್ರೀ ಪೆಯ್ಡ್ ಎಂಬುದು ಮುಖ್ಯ ಪದ. ನನ್ನ ಕಾರ್ಡ್ ಸೇವೆಯನ್ನು ಹೇಗೆ ನಿಲ್ಲಿಸುತ್ತೀರಿ? ಇದರಿಂದ ನಾನು ಇಲ್ಲಿ ಸಿಕ್ಕಿಹಾಕಿಕೊಂಡೀದ್ದೇನೆ. ಇದು ಎಸ್ ಒ ಎಸ್ ಪರಿಸ್ಥಿತಿ” ಎಂದು ಕೆನಡಾದಲ್ಲಿ ಕಾರ್ಡ್ ಬಳಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವ ಸೌಮಿತ್ರ ಚಕ್ರವರ್ತಿ ಎಂಬುವವರು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಟ್ಯಾಗ್ ಮಾಡಿ ಬರೆದಿದ್ದಾರೆ.

