ರಾಜಸ್ಥಾನದ 50ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳು ಕಾಂಗ್ರೆಸ್‌ ತೆಕ್ಕೆಗೆ; BJPಗೆ ಭಾರೀ ಮುಖಭಂಗ!

ರಾಜಸ್ಥಾನದ 20 ಜಿಲ್ಲೆಗಳಲ್ಲಿ 90 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಅನುಕೂಲಕರ ಫಲಿತಾಂಶಗಳು ಬಂದಿವೆ. ಸ್ವತಂತ್ರ ಸದಸ್ಯರ ಬೆಂಬಲಿಗೊಂದಿಗೆ 50ಕ್ಕೂ ಹೆಚ್ಚು ಪುರಸಭೆಗಳಲ್ಲಿ ಕಾಂಗ್ರೆಸ್‌ ಆಡಳಿತ ರಚಿಸುವ ಸಾಧ್ಯತೆಯಿದೆ. ಒಟ್ಟು 3,034 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 1,194 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ 1,146 ಮತ್ತು ಸ್ವತಂತ್ರ ಅಭ್ಯರ್ಥಿಗಳು 631 ಸ್ಥಾನಗಳನ್ನು ಗೆದ್ದಿದ್ದಾರೆ.

ಬಿಜೆಪಿ ತೆಕ್ಕೆಯಲ್ಲಿದ್ದ 23 ಪುರಸಭೆಗಳ ಪೈಕಿ 19ರಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದಿದೆ. ಅಲ್ಲದೆ, 37 ನಗರ ಸಂಸ್ಥೆಗಳಲ್ಲಿ ಸ್ವತಂತ್ರರು ಕಾಂಗ್ರೆಸ್‌ಗೆ ಬೆಂಬಲವನ್ನು ನೀಡುವ ಸಾಧ್ಯತೆಯಿದೆ. ಪುರಸಭೆಗಳ ಅಧ್ಯಕ್ಷರನ್ನು ಆಯ್ಕೆಗೆ ಫೆಬ್ರವರಿ 7 ರಂದು ಮತದಾನ ನಡೆಯಲಿದೆ.

ಅಜ್ಮೀರ್ ಮುನ್ಸಿಪಲ್ ಕಾರ್ಪೋರೇಶನ್‌(ಪುರಸಭೆ)ನಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಅಜ್ಮೀರ್‌ನ 80 ವಾರ್ಡ್‌ಗಳಲ್ಲಿ ಕಾಂಗ್ರೆಸ್ 18 ಮತ್ತು ಬಿಜೆಪಿ 48 ಗೆದ್ದಿದೆ.

ಟೋಂಕ್ ಜಿಲ್ಲೆಯ ನಿವಾಯ್ ಮತ್ತು ಬಿಕಾನೆರ್ ಜಿಲ್ಲೆಯ ನೋಖಾ ಎಂಬ ಎರಡು ಪುರಸಭೆಗಳಲ್ಲಿ ಎನ್‌ಸಿಪಿ ಅಚ್ಚರಿಯ ಬಹುಮತ ಪಡೆದು ಆಡಳಿತ ರಚಿಸಲು ಸಜ್ಜಾಗಿದೆ.

ಉಪಚುನಾವಣೆ ನಡೆಯಲಿರುವ ನಾಲ್ಕು ರಾಜ್ಯ ವಿಧಾನಸಭಾ ಕ್ಷೇತ್ರಗಳ ಐದು ಪುರಸಭೆಗಳಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದನ್ನು ಗೆದ್ದದ್ದು, ಸ್ವತಂತ್ರರು ಮೂರು ಪುರಸಭೆಗಳಲ್ಲಿ ಬಹುಮತ ಪಡೆದ್ದಾರೆ. ರಾಜಸಮಂದ್‌ ಪುರಸಭೆಯನ್ನು ಕಾಂಗ್ರೆಸ್ ಗೆದ್ದಿದೆ, ಭಿಲವಾರ ಜಿಲ್ಲೆಯ ಸಹಾರಾ ಪುರಸಭೆಯಲ್ಲಿ ಬಿಜೆಪಿ ಗೆದ್ದಿದೆ, ಸ್ವತಂತ್ರ ಅಭ್ಯರ್ಥಿಗಳು ಉದಯಪುರ ಜಿಲ್ಲೆಯ ಭಿಂದರ್ ಮತ್ತು ಚುರು ಜಿಲ್ಲೆಯ ಸುಜನ್‌ಘರ್‌ ಮತ್ತು ಬಿಡಾಸರ್‌ನಲ್ಲಿ ಗೆಲುವು ಸಾಧಿಸಿದ್ದಾರೆ.

ರೈತರ ಆಂದೋಲನದ ಮಧ್ಯೆ ರಾಜ್ಯದ ಜನರು ಆಡಳಿತ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ ಹೇಳಿದ್ದಾರೆ.

ಕಾಂಗ್ರೆಸ್ 50 ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ಮಂಡಳಿಗಳನ್ನು ರಚಿಸುತ್ತದೆ. ಏಕೆಂದರೆ ಕಾಂಗ್ರೆಸ್‌, ಹಲವಾರು ಪುರಸಭೆಗಳು ಮತ್ತು ನಗರಸಭೆಗಳಲ್ಲಿ ಸ್ವತಂತ್ರರಿಗೆ ಬೆಂಬಲವನ್ನು ನೀಡಿತು.

ಜನವರಿ 28 ರಂದು ಮತದಾನ ನಡೆದ 90 ಸ್ಥಳೀಯ ಸಂಸ್ಥೆಗಳಲ್ಲಿ ಒಂಬತ್ತು ನಗರ ಸಭೆಗಳು ಮತ್ತು 80 ಪುರಸಭೆಗಳು ಸೇರಿದ್ದವು. ಇವುಗಳಲ್ಲಿ, ಇತರ ಪಕ್ಷಗಳಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು 46, ರಾಷ್ಟ್ರೀಯ ಲೋಕ್ತಂತ್ರಿಕ್ ಪಕ್ಷ 13, ಸಿಪಿಐ (ಎಂ) 3 ಮತ್ತು ಬಹುಜನ ಸಮಾಜ ಪಕ್ಷದ ಒಂದು ವಾರ್ಡ್ ಗೆದ್ದಿದೆ.

ಇದನ್ನೂ ಓದಿ: ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ BJP ನಾಯಕರು; ಶೇಮ್‌ ಆನ್‌ ಬಿಜೆಪಿ ಎಂದ ಟಿಎಂಸಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights