ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ BJP ನಾಯಕರು; ಶೇಮ್‌ ಆನ್‌ ಬಿಜೆಪಿ ಎಂದ ಟಿಎಂಸಿ!

ಪಶ್ಚಿಮ ಬಂಗಾಳದ ಹೌರಾದಲ್ಲಿ ಭಾನುವಾರ ಬಿಜೆಪಿ ನಾಯಕರು ರ್ಯಾಲಿ ನಡೆಸಿದ್ದು, ಸಾರ್ವಜನಿಕ ಸಭೆಯಲ್ಲಿ  ಬಿಜೆಪಿ ನಾಯಕರು ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಕಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಟಿಎಂಸಿ ಪಕ್ಷದ ನಾಯಕ ಅಭಿಷೇಕ್‌ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವೆ ಸೃತಿ ಇರಾನಿ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗವಹಿಸಿದ್ದ ಬಿಜೆಪಿ ರ್ಯಾಲಿಯ ವೇದಿಕೆಯಲ್ಲಿ ರಾಷ್ಟ್ರಗೀತೆ ಹಾಡಲಾಗಿದ್ದು, ತಪ್ಪು-ತಪ್ಪಾದ ಪದಗಳನ್ನು ಉಚ್ಚರಿಸಿದ್ದಾರೆ.

ರಾಷ್ಟ್ರಗೀತೆ ಹಾಡುತ್ತಿರುವ ಬಿಜೆಪಿ ನಾಯಕರ ವಿಡಿಯೋವನ್ನು ಟ್ವೀಟ್‌ ಮಾಡಿರುವ ಅಭಿಷೇಕ್ ಬ್ಯಾನರ್ಜಿ, “ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಬೋಧಿಸುವವರಿಗೆ ರಾಷ್ಟ್ರಗೀತೆಯನ್ನು ಸರಿಯಾಗಿ ಹಾಡಲು ಸಹ ಬರುವುದಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

“ಭಾರತದ ಗೌರವ ಮತ್ತು ಹೆಮ್ಮೆಯನ್ನು ಎತ್ತಿಹಿಡಿಯುತ್ತೇವೆ ಎಂದು ಹೇಳಿಕೊಳ್ಳುವ ಪಕ್ಷಕ್ಕೆ ಸರಿಯಾಗಿ ರಾಷ್ಟ್ರಗೀತೆ ಹಾಡಲು ಬರುವುದಿಲ್ಲ! ಇದು ಬಿಜೆಪಿಗೆ ನಾಚಿಕೆಗೇಡು! ಈ ‘ರಾಷ್ಟ್ರ ವಿರೋಧಿ’ ಕೃತ್ಯಕ್ಕೆ ಬಿಜೆಪಿ, ಪ್ರಧಾನಿ ಮೋದಿ, ಅಮಿತ್ ಶಾ ಕ್ಷಮೆಯಾಚಿಸುತ್ತಾರೆಯೇ?” ಎಂದು ಅಭಿಷೇಕ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ಅಭಿಷೇಕ್‌ ಬ್ಯಾನರ್ಜಿಅವರ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ಅದರೆ, ಬಿಜೆಪಿಗರ ಎಡವಟ್ಟು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ಅಲ್ಲದೆ, ಬಿಜೆಪಿಗರ ವಿರುದ್ಧ ಎಡರಂಗ ಸಹ ಆಕ್ರೋಶ ವ್ಯಕ್ತಪಡಿಸಿದ್ದು, ರಾಷ್ಟ್ರಗೀತೆ ಹಾಡಲು ಬರದವರು ರಾಷ್ಟ್ರೀಯತೆಯ ಕುರಿತು ಧರ್ಮೋಪದೇಶವನ್ನು ನೀಡುತ್ತಿರುವುದು ವಿಪರ್ಯಾಸ ಎಂದು ಹೇಳಿದ್ದಾರೆ.

Read Also: ರಾಜಸ್ಥಾನ ಚುನಾವಣೆ: ಕಾಂಗ್ರೆಸ್‌ಗೆ ಭಾರೀ ಪೈಪೋಟಿ ಕೊಟ್ಟ BJP; ಗೆದ್ದು ಬೀಗಿದ ಕಾಂಗ್ರೆಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights