ರಾಜಸ್ಥಾನ ಚುನಾವಣೆ: ಕಾಂಗ್ರೆಸ್‌ ಭರ್ಜರಿ ಜಯ; ಎರಡನೇ ಸ್ಥಾನಕ್ಕೆ ಕುಸಿದ ಬಿಜೆಪಿ!

ರಾಜಸ್ಥಾನದಲ್ಲಿ ಆರು ಜಿಲ್ಲೆಗಳ 78 ಪಂಚಾಯತ್‌ ಸಮಿತಿಯ 1,564 ಸ್ಥಾನಗಳಿಗೆ ಮತ್ತು ಜಿಲ್ಲಾ ಪರಿಷತ್‌ನ 200 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಶನಿವಾರ ಫಲಿತಾಂಶ ಪ್ರಕಟವಾಗಿದೆ. ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಕಳೆದ ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದ ಬಿಜೆಪಿ ಎರಡನೇ ಸ್ಥಾನಕ್ಕೆ ಕುಸಿದಿದೆ.

ಒಟ್ಟು 1,564 ಸ್ಥಾನಗಳಲ್ಲಿ ಕಾಂಗ್ರೆಸ್‌ ಪಕ್ಷವು 670 ಪಂಚಾಯತಿ ಸ್ಥಾನಗಳನ್ನು ಮತ್ತು ಬಿಜೆಪಿ 551 ರಲ್ಲಿ ಸ್ಥಾನಗಳನ್ನು ಗೆದ್ದಿದೆ. ಇನ್ನು, ಆರ್‌ಎಲ್‌ಪಿ 40 ಮತ್ತು ಬಿಎಸ್‌ಪಿ 11 ಸ್ಥಾನಗಳನ್ನು ಗೆದ್ದಿದೆ. ಸ್ವತಂತ್ರರು 290 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಎರಡು ಸ್ಥಾನಗಳಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.

ಜಿಲ್ಲಾ ಪರಿಷತ್‌ನ ಒಟ್ಟು 200 ಸ್ಥಾನಗಳಲ್ಲಿ ಕಾಂಗ್ರೆಸ್‌ 99 ಸ್ಥಾನಗಳು, ಬಿಜೆಪಿ 90 ಸ್ಥಾನಗಳನ್ನು ಗೆದ್ದಿವೆ. ಉಳಿದಂತೆ ಇತರ ಪಕ್ಷಗಳು 11 ಸ್ಥಾನಗಳನ್ನು ಗೆದ್ದಿವೆ.

ಹಿಂದಿನ ಚುನಾವಣೆಯಲ್ಲಿ 1,328 ಪಂಚಾಯ್ತಿ ಸಮಿತಿ ಸ್ಥಾನಗಳ ಪೈಕಿ ಬಿಜೆಪಿ 585 ಸ್ಥಾನ ಗೆದ್ದಿತ್ತು. ಆದರೆ ಈ ಬಾರಿ ಒಟ್ಟು ಸ್ಥಾನಗಳ ಸಂಖ್ಯೆ 1564ಕ್ಕೆ ಹೆಚ್ಚಿದ್ದರೂ, ಬಿಜೆಪಿ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಗಳಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 100 ಜಿಲ್ಲಾ ಪಂಚಾಯತ್ ಸ್ಥಾನಗಳನ್ನು ಗೆದ್ದರೆ, 90 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿತ್ತು.

ಆಗಸ್ಟ್ 26, 29 ಮತ್ತು ಸೆಪ್ಟೆಂಬರ್ 1 ರಂದು ಭರತಪುರ, ದೌಸಾ, ಜೈಪುರ, ಜೋಧಪುರ, ಸವಾಯಿ ಮಾಧೋಪುರ ಮತ್ತು ಸಿರೋಹಿ ಜಿಲ್ಲೆಗಳಲ್ಲಿ ಒಟ್ಟು ಆರು ಜಿಲ್ಲಾ ಪರಿಷತ್‌ನ 200 ಸದಸ್ಯರು ಮತ್ತು 78 ಪಂಚಾಯತ್ ಸಮಿತಿಯ 1,564 ಸದಸ್ಯರನ್ನು ಆಯ್ಕೆ ಮಾಡಲು ಮೂರು ಹಂತಗಳಲ್ಲಿ ಮತದಾನ ನಡೆದಿತ್ತು.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ 2022: ಕಾಂಗ್ರೆಸ್‌ಗೆ ಬಿಗ್‌ಶಾಕ್‌; ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೇ ಅಧಿಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights