ಬಿಗ್ ಬಾಸ್ 10ರ ಸ್ಪರ್ಧಿ ಸ್ವಾಮಿ ಓಂ ನಿಧನ…!

ಬಿಗ್ ಬಾಸ್ 10 ರಲ್ಲಿ ಬಹಳ ವಿವಾದಾತ್ಮಕವಾಗಿ ಹೆಸರುವಾಸಿಯಾಗಿದ್ದ ಸ್ವಾಮಿ ಓಂ(63) ಫೆಬ್ರವರಿ 3 ಬುಧವಾರ ದೆಹಲಿಯಲ್ಲಿ ನಿಧನರಾದರು. ವರದಿಗಳ ಪ್ರಕಾರ, ಅವರು ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಕೆಲವು ದಿನಗಳ ಹಿಂದೆ ಪಾರ್ಶ್ವವಾಯುನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ಹಿನ್ನೆಲೆ ಬುಧವಾರ ನಿಧನ ಹೊಂದಿದ್ದಾರೆ. ಸ್ವಾಮಿ ಓಂನ ಸ್ನೇಹಿತ ಮುಖೇಶ್ ಜೈನ್ ಅವರ ಪುತ್ರ ಅರ್ಜುನ್ ಜೈನ್ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ವರದಿಯ ಪ್ರಕಾರ, ಸ್ವಾಮಿ ಓಂ ಅವರಿಗೆ ಈ ಮೊದಲು ಕೊರೊನವೈರಸ್ ತಗುಲಿತ್ತು. ಜೊತೆಗೆ ಅದರಿಂದ ಚೇತರಿಸಿಕೊಂಡಿದ್ದರು.

“ಸ್ವಾಮಿ ಓಂ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೊರೋನವೈರಸ್ ನಿಂದ ಚೇತರಿಸಿಕೊಂಡ ನಂತರವೂ ಅವರು ನಡೆಯಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ನಂತರ ಅವರ ದೇಹದ ಅರ್ಧ ಭಾಗದಲ್ಲೂ ಪಾರ್ಶ್ವವಾಯು ಇತ್ತು. 15 ದಿನಗಳ ಹಿಂದೆ ಪಾರ್ಶ್ವವಾಯುದಿಂದ ಅವರ ಸ್ಥಿತಿ ಹದಗೆಟ್ಟಿತು. ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದರು” ಎಂದು ಅರ್ಜುನ್ ಜೈನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸ್ವಾಮಿ ಓಂ ಅವರ ಅಂತಿಮ ವಿಧಿಗಳನ್ನು ಇಂದು ಮಧ್ಯಾಹ್ನ 1.30 ಕ್ಕೆ ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಸ್ವಾಮಿ ಓಂ ಯಾರು?
ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ ನ 10 ನೇ ಸೀಸನ್ ನಲ್ಲಿ ಸ್ವಾಮಿ ಓಂ ವಿವಾದಾತ್ಮಕವಾಗಿ ಬೆಳಕಿಗೆ ಬಂದರು. ಕಾರ್ಯಕ್ರಮದ ಒಂದು ಸಮಯದಲ್ಲಿ ಅವರು ಸಹ ಸ್ಪರ್ಧಿಗಳಾದ ಬನಿ ಜೆ ಮತ್ತು ರೋಹನ್ ಮೆಹ್ರಾ ಅವರ ಮೇಲೆ ಮೂತ್ರ ವಿಸರ್ಜಿಸುತ್ತಿದ್ದರು. ಇದನ್ನು ವಿರೋಧಿಸಿ ಬನಿ ಮತ್ತು ರೋಹನ್ ಜೊತೆಗೆ ಉಳಿದ ಸ್ಪರ್ಧಿಗಳು ಸ್ವಾಮಿ ಓಂ ವಿರುದ್ಧ ಬಿಗ್ ಬಾಸ್ ಗೆ ದೂರು ನೀಡಿದ್ದರು. ಈ ಘಟನೆಯ ನಂತರ ಕಾರ್ಯಕ್ರಮದ ತಯಾರಕರು ಅವರನ್ನು ಮನೆಗೆ ಕಳುಹಿಸಬೇಕಾಗಿತ್ತು.

ಬಿಗ್ ಬಾಸ್ ನಿಂದ ಹೊರಬಂದ ಬಳಿಕವೂ ಸ್ವಾಮಿ ಭಾರೀ ಸುದ್ದಿಯಲ್ಲಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights