ದೀಪ್ ಸಿಧು ಅಮಿತ್ ಶಾ ಛತ್ರಿಯಡಿ ಅವಿತುಕೊಂಡಿರಬಹುದು : ರಮ್ಯಾ ವ್ಯಂಗ್ಯ!

ಜನವರಿ 26 ರಂದು ರೈತರ ಟ್ರ್ಯಾಕ್ಟರ್ ರ್ಯಾಲಿಯನ್ನು ಹಿಂಸಾಚಾರಕ್ಕೆ ತಿರುಗಿಸಿದ ಕೆಲ ವ್ಯಕ್ತಿಗಳ ಹುಡುಕಾಟಕ್ಕೆ ದೆಹಲಿ ಪೋಲೀಸ್ ಬಲೆ ಬೀಸಿದೆ. ಇದರಲ್ಲಿ ಪ್ರಮುಖ ವ್ಯಕ್ತಿ ದೀಪ್ ಸಿಧು. ಹೀಗಾಗಿ ದೆಹಲಿ ಪೋಲೀಸರು ದೀಪ್ ಬಗ್ಗೆ ಸುಳುವು ಕೊಟ್ಟವರಿಗೆ 1 ಲಕ್ಷ ಬಹುಮಾನ ಘೋಷಿಸಿದ್ದಾರೆ. ಈ ವೇಳೆ ಟ್ವೀಟ್ ಮಾಡಿದ ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ ಬಿಜೆಪಿ ಸರ್ಕಾರದ ಕಾಲೆಳೆದಿದ್ದಾರೆ.

“ದೀಪ್ ಸಿಧು ಕಾಣೆಯಾಗಿದ್ದಾರಾ? ಅವರೆಲ್ಲೋ ಅಮಿತ್ ಶಾ ಅವರ ಛತ್ರಿಯಡಿ ಅವಿತುಕೊಂಡಿರಬಹುದು ಲಾ… ಲಾ… ಲಾ…” ಎಂದು ರಮ್ಯಾ ಹಾಡು ಹಾಡಿದ ಶೈಲಿಯಲ್ಲಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

https://twitter.com/divyaspandana/status/1356891632105385985?ref_src=twsrc%5Etfw%7Ctwcamp%5Etweetembed%7Ctwterm%5E1356891632105385985%7Ctwgr%5E%7Ctwcon%5Es1_&ref_url=https%3A%2F%2Fwww.kannadaprabha.com%2Fkarnataka%2F2021%2Ffeb%2F03%2Fdeep-sidhu-must-be-hiding-under-amit-shahs-umbrella-actress-ramya-438824.html

ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನಾ ನಿರತ ರೈತರಿಗೆ ಉಗ್ರರು ಎಂಬ ಪಟ್ಟ ಕಟ್ಟಿ ಶಾಂತವಾಗಿದ್ದ ಪ್ರತಿಭಟನೆಯನ್ನು ಹಿಂಸಾಚಾರವೆಂದು ದೂಷಿಸುವಂತೆ ಮಾಡುತ್ತಿರುವ ಕಾಣದ ಕೈಗಳ ವಿರುದ್ಧ ದೇಶದೆಲ್ಲೆಡೆ ತನಿಖೆಗೆ ಆಗ್ರಹ ವ್ಯಕ್ತವಾಗುತ್ತಿದೆ.

ಜನವರಿ 26ರಂದು ಕೆಂಪು ಕೋಟೆಯಲ್ಲಿ ಸಿಖ್ ಧ್ವಜವನ್ನು ಹಾರಿಸಿದ ನಟ ಹಾಗೂ ಬಿಜೆಪಿ ಕಾರ್ಯಕರ್ತನೆಂದು ಹೇಳಲಾಗುವ ದೀಪ್ ಸಿಧು ಬಂಧನಕ್ಕೆ ಒತ್ತಡ ಹೇರಲಾಗುತ್ತಿದೆ. ಈಗಾಗಲೇ ಈತನ ಬಂಧನಕ್ಕೆ ವಿಶೇಷ ತಂಡ ರಚನೆಯಾಗಿದೆ. ಇದರ ಬೆನ್ನಲ್ಲೇ ದೆಹಲಿ ಪೋಲೀಸರು ದೀಪ್ ಸಿಧು ಬಗ್ಗೆ ಸುಳಿವು ಕೊಟ್ಟವರಿಗೆ 1 ಲಕ್ಷ ಬಹುಮಾನ ಘೋಷಿಸಿದೆ.

ದೆಹಲಿ ಪ್ರತಿಭಟನೆ ಹಿಂಸಾಚಾರದಲ್ಲಿ ಹಲವಾರು ಪೋಲೀರು ಹಾಗೂ ರೈತರು ಗಾಯಗೊಂಡಿದ್ದು, 100 ಕ್ಕೂ ಹೆಚ್ಚು ರೈತರು ಕಾಣೆಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದು, ತನಿಖೆ ಮಾಡಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಪೋಲೀಸರು ಕೆಲವರನ್ನು ಬಂಧಿಸಿದ್ದಾರೆನ್ನಲಾಗುತ್ತಿದೆ. ಆದರೂ ಕಾಣೆಯಾದವರು ಪೋಲೀಸರು ಬಂಧಿಸಿದವರು ಒಂದೇ ವ್ಯಕ್ತಿಗಳಾ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಕುಟುಂಬ ಕಾಣೆಯಾದ ರೈತರ ಬಗ್ಗೆ ಆತಂಕಗೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights