ಫ್ಯಾಕ್ಟ್‌ಚೆಕ್: ನಟ ಅಕ್ಷಯ್ ಕುಮಾರ್ ಭಾರತೀಯ ಸೇನೆಗಾಗಿ ನೀಡಿದ ಸಲಹೆಯನ್ನು ಪ್ರಧಾನಿ ಮೋದಿ ಸ್ವೀಕರಿಸಿದ್ದು ನಿಜವೇ?

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗಿದ್ದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಲಹೆ ಮೇರೆಗೆ ಮೋದಿ ಭಾರತೀಯ ಸೇನೆಗೆ ಸಂಬಂಧಿಸಿದಂತೆ ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಡಿದ್ದಾರೆ. ವೈರಲ್ ಪೋಸ್ಟ್‌ ಕೆಳಗಿನಂತಿದೆ.

ಇದೇ ಪ್ರತಿಪಾದನೆಯೊಂದಿಗೆ ಹಲವು ಫೇಸ್‌ಬುಕ್ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಸಲಹೆ ಮೇರೆಗೆ ಮೋದಿ ಸರ್ಕಾರದಿಂದ ಮತ್ತೊಂದು ಉತ್ತಮ ನಿರ್ಧಾರ 

ಕೇವಲ ಒಂದು ರೂಪಾಯಿಯ ದೈನಂದಿನ ಪಾವತಿ, ಅದು ಕೂಡ ಭಾರತೀಯ ಸೇನೆಗೆ. ನಿನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮೋದಿ ಸರ್ಕಾರ ಭಾರತೀಯ ಸೇನೆಯ ಆಧುನಿಕತೆಗಾಗಿ ಮತ್ತು ಯುದ್ಧ ವಲಯದಲ್ಲಿ ಗಾಯಗೊಂಡ ಅಥವಾ ಹುತಾತ್ಮರಾದ ಸೈನಿಕರಿಗಾಗಿ ಬ್ಯಾಂಕ್ ಖಾತೆಯನ್ನು ತೆರೆದಿದೆ. ಇದರಲ್ಲಿ ಪ್ರತಿಯೊಬ್ಬ ಭಾರತೀಯನು ತನ್ನ ಸ್ವಂತ ಇಚ್ಛೆಯ ಮೇರೆಗೆ ಯಾವುದೇ ಮೊತ್ತವನ್ನು ದಾನ ಮಾಡಬಹುದು. ಇದು ರೂ.1 ರಿಂದ ಪ್ರಾರಂಭವಾಗುತ್ತದೆ ಮತ್ತು ಅನಿಯಮಿತವಾಗಿರುತ್ತದೆ.*

* ಈ ಹಣವನ್ನು ಸೇನೆ ಮತ್ತು ಅರೆಸೇನಾ ಪಡೆಗಳಿಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಸಹ ಬಳಸಲಾಗುತ್ತದೆ. ಮನ್ ಕಿ ಬಾತ್ ನಲ್ಲಿ ಇಂದಿನ ಜ್ವಲಂತ ಪರಿಸ್ಥಿತಿ ಹಾಗೂ ಫೇಸ್ ಬುಕ್, ಟ್ವಿಟರ್, ವಾಟ್ಸಾಪ್ ನಲ್ಲಿ ಜನರ ಸಲಹೆಗಳ ಕುರಿತು ಅಂತಿಮ ನಿರ್ಧಾರ ಕೈಗೊಂಡ ಮೋದಿ ಸರ್ಕಾರ, ನವದೆಹಲಿಯಲ್ಲಿ ಸೇನಾ ವೆಲ್ ಫೇರ್ ಫಂಡ್ ಬ್ಯಾಟಲ್ ಕ್ಯಾಶುವಾಲಿಟಿ ಫಂಡ್ ಖಾತೆಯನ್ನು ತೆರೆದಿದೆ, ಕೆನರಾ ಬ್ಯಾಂಕ್.

* ಇದು ಚಿತ್ರನಟ ಅಕ್ಷಯ್ ಕುಮಾರ್ ಅವರ ಮಾಸ್ಟರ್ ಸ್ಟ್ರೋಕ್. ಭಾರತ ಸೂಪರ್ ಪವರ್ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತದ 130 ಕೋಟಿ ಜನಸಂಖ್ಯೆಯ 70% ಜನರು ಈ ನಿಧಿಯಲ್ಲಿ ಪ್ರತಿದಿನ ಕೇವಲ ಒಂದು ರೂಪಾಯಿಯನ್ನು ಹಾಕಿದರೆ, ಆ ಒಂದು ರೂಪಾಯಿ ಒಂದು ದಿನದಲ್ಲಿ 100 ಕೋಟಿ ಆಗುತ್ತದೆ. 30 ದಿನಗಳಲ್ಲಿ 3000 ಕೋಟಿ ಮತ್ತು ಒಂದು ವರ್ಷದಲ್ಲಿ 36000 ಕೋಟಿ. 36,000 ಕೋಟಿಗಳು ಪಾಕಿಸ್ತಾನದ ವಾರ್ಷಿಕ ರಕ್ಷಣಾ ಬಜೆಟ್ ಕೂಡ ಅಲ್ಲ. ಪ್ರತಿನಿತ್ಯ 100 ಅಥವಾ 1000 ರೂಪಾಯಿ ನಿಷ್ಪ್ರಯೋಜಕ ಕೆಲಸಕ್ಕೆ ಖರ್ಚು ಮಾಡುತ್ತೇವೆ, ಆದರೆ ಸೇನೆಗೆ ಒಂದು ರೂಪಾಯಿ ಕೊಟ್ಟರೆ ಭಾರತ ಸೂಪರ್ ಪವರ್ ಆಗುವುದು ಖಂಡಿತ.

* ನಿಮ್ಮ ಹಣವನ್ನು ರಕ್ಷಣಾ ಸಚಿವಾಲಯದ ಸೇನಾ ನೆರವು ಮತ್ತು ಯುದ್ಧ ಅಪಘಾತ ನಿಧಿಗೆ ನೇರವಾಗಿ ಠೇವಣಿ ಮಾಡಲಾಗುತ್ತದೆ. ಇದು ಮಿಲಿಟರಿ ವಸ್ತು ಮತ್ತು ಸೇನಾ ಸಿಬ್ಬಂದಿಗೆ ಉಪಯುಕ್ತವಾಗಿದೆ.

ಹಾಯ್ ಹಾಯ್ ಪಾಕಿಸ್ತಾನ್ ಮಾಡುವುದರಿಂದ, ರಸ್ತೆ ತಡೆದು ವಾಗ್ದಾಳಿ ಮಾಡುವುದರಿಂದ ಏನೂ ಆಗುವುದಿಲ್ಲ. ಮೋದಿ ಮತ್ತು ದೇಶದ ಜನರ ಚಿಂತನೆಯನ್ನು ಕಾರ್ಯಗತಗೊಳಿಸಿ ಮತ್ತು ನಮ್ಮ ದೇಶದ ಸೈನ್ಯವನ್ನು ಬಲಪಡಿಸಿ. ಇದರಿಂದ ಪಾಕಿಸ್ತಾನ, ಚೀನಾದಂತಹ ದೇಶಗಳಿಗೆ ಬೇರೆ ಯಾವುದೇ ದೇಶದ ಸಹಾಯವಿಲ್ಲದೆ ತಮ್ಮ ಸ್ಥಿತಿ ಹೇಳಬಹುದು. ಬ್ಯಾಂಕ್ ವಿವರಗಳನ್ನು ಕೆಳಗೆ ನೀಡಲಾಗಿದೆ.

ಬ್ಯಾಂಕ್ ವಿವರಗಳು:

ಕೆನರಾ ಬ್ಯಾಂಕ್
A/C ಹೆಸರು: ಆರ್ಮಿ ವೆಲ್ಫೇರ್ ಫಂಡ್ ಬ್ಯಾಟಲ್ ಕ್ಯಾಶುವಲ್ಟೀಸ್,
A/C NO: 90552010165915
IFSC ಕೋಡ್: CNRB0000267
ದಕ್ಷಿಣ ವಿಸ್ತರಣೆ ಶಾಖೆ, ನವದೆಹಲಿ.

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ ನಟ ಅಕ್ಷಯ್ ಕುಮಾರ್ ಸಲಹೆ ಮೇರೆಗೆ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಸೇನೆಗೆ ಸಂಬಂಧಿಸಿದಂತೆ ಈ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯಂತೆ ಅಕ್ಷಯ್ ಕುಮಾರ್ ಸಲಹಯಂತೆ ಪ್ರಧಾನಿ ಕೈಗೊಂಡ ನಿರ್ಧಾರದ ಬಗ್ಗೆ ಪರಿಶೀಲಿಸಲು ಸರ್ಚ್ ಮಾಡಿದಾಗ, Additional Directorate General of Public Information (ADG PI – Indian Army) ಸೆಪ್ಟೆಂಬರ್ 2016 ರಲ್ಲಿ ಟ್ವಿಟರ್ ಖಾತೆಯ ಮೂಲಕ ಪೋಸ್ಟ್‌ ಮಾಡಲಾದ ಮಾಹಿತಿಯೊಂದು ಲಭ್ಯವಾಗಿದ್ದು, ಯುದ್ಧದ ಸಂದರ್ಭದಲ್ಲಿ ಸಾವುನೋವುಗಳು ಸಂಭವಿಸಿದಾಗ ಸೇನೆಯ ಕಲ್ಯಾಣ ನಿಧಿಯ ಬಳಕೆಯ ವಿಷಯದ ಬಗ್ಗೆ ಸ್ಪಷ್ಟಪಡಿಸವ ಟ್ವೀಟ್‌ಅನ್ನು ಮಾಡಲಾಗಿದೆ.

ಸಿಂಡಿಕೇಟ್‌ ಬ್ಯಾಂಕ್ ಸದ್ಯ ಕೆನರಾ ಬ್ಯಾಂಕ್‌ನೊಂದಿಗೆ ವಿಲೀನವಾಗಿದ್ದು, ಲಭ್ಯವಾದ ಮತ್ತೊಂದು ಟ್ವಿಟರ್‌ನಲ್ಲಿ’ 15, ಫೆಬ್ರವರಿ 2019 ರಂದು  ಸೇನಾ ಕಲ್ಯಾಣಕ್ಕೆ ಸೇರಿದೆಯೇ ಎಂದು ಪರಿಶೀಲಿಸಿದೆ. ನಿಧಿಯ ಮೂಲಕ ಸ್ವೀಕರಿಸಿದ ದೇಣಿಗೆಗಳನ್ನು ಯುದ್ಧದಲ್ಲಿ ಗಾಯಗೊಂಡವರ ಮತ್ತು ಅವಲಂಬಿತರಾದ ಯೋದನ ಕುಟುಂಬಕ್ಕೆ ಅನುದಾನವನ್ನು ಪಾವತಿಸಲು ಬಳಸಲಾಗುವುದು ಎಂದು ಹೇಳುತ್ತದೆ.

ಅದೇ ಥ್ರೆಡ್‌ನಲ್ಲಿ, ಹೊಸ IFSC ಕೋಡ್ ಅನ್ನು ಪರಿಶೀಲಿಸಲು ಮತ್ತೊಬ್ಬ ಬಳಕೆದಾರರು ಜುಲೈ 2021 ರಂದು ಕಾಮೆಂಟ್ ಮಾಡಿದ್ದಾರೆ, ಇದಕ್ಕೆ ಕೆನರಾ ಬ್ಯಾಂಕ್ Twitter ಖಾತೆಯು ಸಿಂಡಿಕೇಟ್ IFSC ಕೋಡ್‌ಗಳನ್ನು ವಿಲೀನದ ನಂತರ ನಿಷ್ಕ್ರಿಯಗೊಳಿಸಲಾಗಿದೆ ಮತ್ತು ಹೆಚ್ಚಿನ ವಿವರಗಳನ್ನು ಪರಿಶೀಲಿಸಲು ಲಿಂಕ್ ಅನ್ನು ಒದಗಿಸಿದೆ ಎಂದು ಉತ್ತರಿಸಿದೆ.

ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ ಕೆನರಾ ಬ್ಯಾಂಕ್‌ನೊಂದಿಗೆ ಸಿಂಡಿಕೇಟ್ ಬ್ಯಾಂಕಿನ ವಿಲೀನದ ನಂತರದ ‘ಆರ್ಮಿ ಫೋರ್ಸಸ್ ಬ್ಯಾಟಲ್ ಕ್ಯಾಶುವಲ್ಟೀಸ್ ವೆಲ್ಫೇರ್ ಫಂಡ್’ ನ ನವೀಕರಿಸಿದ ಕೆನರಾ ಬ್ಯಾಂಕ್ ಖಾತೆ ವಿವರಗಳನ್ನು ಉಲ್ಲೇಖಿಸಿದೆ. ಸೇನೆಯ ಕಲ್ಯಾಣ ನಿಧಿಗಳಿಗೆ ದೇಣಿಗೆ ನೀಡಲು/ಕೊಡಲು ಕೆಲವು ಇತರ ಆಯ್ಕೆಗಳನ್ನು ಸಹ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಟ್ವೀಟ್ ಅಥವಾ ವೆಬ್‌ಸೈಟ್‌ನಲ್ಲಿ ಎಲ್ಲಿಯೂ ನಟ ಅಕ್ಷಯ್ ಕುಮಾರ್ ಅವರ ಹೆಸರಿನ ಉಲ್ಲೇಖವಾಗಲಿ, ಪ್ರಸ್ತಾಪವಾಗಲಿ ಇಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಸೇನಾ ಕಲ್ಯಾಣಕ್ಕಾಗಿ ತೆರೆಯಲಾದ ಬ್ಯಾಂಕ್ ಖಾತೆಯನ್ನು ರಕ್ಷಣಾ ಸಚಿವಾಲಯವು ಅನುಮೋದಿಸಿದೆ ಮತ್ತು  ಕೆನರಾ ಬ್ಯಾಂಕ್‌ನೊಂದಿಗೆ ಸಿಂಡಿಕೇಟ್ ಬ್ಯಾಂಕ್ ವಿಲೀನದ ನಂತರ ಈ ಖಾತೆಯನ್ನು ಬಳಸಲಾಗುತ್ತಿದೆ.

ಈ ಪ್ರಕ್ರಿಯೆಯನ್ನು ನಟ ಅಕ್ಷಯ್ ಕುಮಾರ್ ಅವರ ಸಲಹೆ ಅಥವಾ ಸೂಚನೆ ಮೇರೆಗೆ ಪ್ರಧಾನಿ ಮೋದಿ ಅವರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂಬುದು ಸುಳ್ಳು. ಈ ಖಾತೆಯ ಮೂಲಕ ಸ್ವೀಕರಿಸಿದ ಹಣವನ್ನು ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸಲಾಗುವುದಿಲ್ಲ. ಸೇನೆಯ ಕಲ್ಯಾಣ ನಿಧಿಯ ಬಳಕೆಯು ಯುದ್ಧದಲ್ಲಿ ಗಾಯಗೊಂಡವರು ಮತ್ತು ಮೃತ ಯೋಧನ ಅವಲಂಬಿತರಾದ ಕುಟುಂಬಕ್ಕೆ ಹಣಕಾಸಿನ ನೆರವು / ಅನುದಾನವನ್ನು ಪಾವತಿಸಲು ಬಳಸಲಾಗುತ್ತದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ ಎಂದು ಯೂಟರ್ನ್ ವೆಬ್‌ಸೈಟ್ ವರದಿ ಮಾಡಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗಣರಾಜ್ಯೋತ್ಸವದಂದು ಬಿಹಾರದಲ್ಲಿ ಪಾಕ್ ಧ್ವಜವನ್ನು ಹಾರಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights