ಫ್ಯಾಕ್ಟ್‌ಚೆಕ್: ನೀರು ಕೊಟ್ಟು, ತೈಲ ತರಿಸಿಕೊಳ್ಳುವ ಮಾಸ್ಟರ್ ಪ್ಲಾನ್ ಮಾಡಿದ್ದಾರಂತೆ ಪ್ರಧಾನಿ ಮೋದಿ! ವಾಸ್ತವವೇನು?

ಕೆಲವು ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಸುದ್ದಿಯೊಂದು ಪ್ರಸಾರವಾಗಿತ್ತು, ಆ ವೈರಲ್ ಸುದ್ದಿಯ ಪ್ರಕಾರ ಭಾರತದ ಗುಜರಾತ್‌ನ ನರ್ಮದಾ ನದಿಯಿಂದ ದುಬೈಗೆ  ಸರಕುಗಳ ವಿನಿಮಯ ಮತ್ತು ಪೈಪ್‌ಲೈನ್ ಮೂಲಕ ತೈಲ ಆಮದು ಮಾಡಲು” ಸಮುದ್ರಡಿಯಲ್ಲಿ ರೈಲು ಮಾರ್ಗವನ್ನು ಮಾಡುವ ಯೋಜನೆಯನ್ನು ಸಿದ್ದಪಡಿಸಲಾಗಿದೆ ಎಂದು ಹೇಳಲಾಗಿತ್ತು ಈ ಯೋಜನೆ 2022ಕ್ಕೆ ಪೂರ್ಣಗೊಳ್ಳಲಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಈಗ 2023ರಲ್ಲಿ ಮತ್ತೊಮ್ಮೆ ಇಂತಹದೆ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಮುಂಬೈನಿಂದ ದುಬೈಗೆ ಸಮುದ್ರಡಿಯಲ್ಲಿ ರೈಲು ಮಾರ್ಗದ ಮೂಲಕ ನೀರು ಕೊಟ್ಟು ತೈಲ ಆಮದು ಮಾಡಿಕೊಳ್ಳುವ ಯೋಜನೆಯನ್ನು ಮೋದಿ ಸರ್ಕಾರ ರೂಪಿಸಿದೆ ಎಂದು ಪೋಸ್ಟ್‌ಅನ್ನು ಹಂಚಿಕೊಡಿದೆ. ಇಂಥ ಪ್ರಧಾನಿ ಬಿಟ್ಟೋರು ಉಂಟಾ ಅದಕ್ಕೆ ಹೇಳಿ ಮೋದಿ ಮತ್ತೊಮ್ಮೆ ಎಂಬ ಪೋಸ್ಟ್‌ರ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಪೋಸ್ಟ್‌ಕಾರ್ಡ್ ತನ್ನ ವೆಬ್‌ಸೈಟ್ ನಲ್ಲಿ ಇದೇ ರೀತಿಯ ವರದಿಯನ್ನು ಪ್ರಕಟಿಸಿತು. ಅದನ್ನು ಇಲ್ಲಿ ನೋಡಬಹುದು. ಪೋಸ್ಟ್‌ಕಾರ್ಡ್ ನ ಸಂಸ್ಥಾಪಕ ವಿಕ್ರಮ್ ಮಹೇಶ್‌ ಹೆಗ್ಡೆ ಇಂತಹದ್ದೆ ಪೋಸ್ಟ್‌ಅನ್ನು 2018ರಲ್ಲಿ ಟ್ವೀಟ್ ಮಾಡಿದ್ದರು. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಪ್ರಧಾನಿ ಮೋದಿಯವರು ಇರಾನ್‌ನೊಂದಿಗೆ ಅಕ್ಕಯ ಬದಲಿಗೆ ತೈಲವನ್ನು ಪಡೆಯಲಿದ್ದಾರೆ ಎಂದು, ಈಗ ಅವರು ಮುಂಬೈ ನೀರಿನ  ದುಬೈನಿಂದ ತೈಲವನ್ನು ಆಮದು ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ! ಎನ್ನುವ ಪೋಸ್ಟ್‌ಗಳು ಮೂರು ನಾಲ್ಕು ವರ್ಷಗಳಿಂದ ಹರಿದಾಡುತ್ತಿದೆ.

ಏನಿದು ಸಮುದ್ರ ಮಾರ್ಗ, ಮುಂಬೈನಿಂದ ದುಬೈಗೆ ನೀರು ಯಾವಾಗ?

ಹಲವು ಮಾಧ್ಯಮಗಳಲ್ಲಿ  ಸಮುದ್ರ ರೈಲು ಮಾರ್ಗದ ಕುರಿತು ವರದಿಗಳಾಗಿವೆ, ಆದರೆ ಇದೊಂದು “ವ್ಯಕ್ತಿಯೊಬ್ಬರ ಪರಿಕಲ್ಪನೆಯಷ್ಟೆ” ಎಂದು ಸರ್ಕಾರದ ಮೂಲವೊಂದು ದಿ ಕ್ವಿಂಟ್‌ಗೆ ತಿಳಿಸಿದೆ ಎಂದು ವರದಿ ಮಾಡಿದೆ. “ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಗೆ “ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ” ಎಂದಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ. ಭಾರತ ಮತ್ತು ಯುಎಇ ನಡುವಿನ ಸಮುದ್ರ ರೈಲ್ವೆ ಮಾರ್ಗವು ವಾಸ್ತವವಾಗಿ ಯುಎಇ ಮೂಲದ National Advisor Bureau Limited (NABL) ಪ್ರಸ್ತಾಪಿಸಿದ ಒಂದು ಪರಿಕಲ್ಪನೆಯಾಗಿದೆ.

ಅಬುಧಾಬಿಯಲ್ಲಿ ಯುಎಇ-ಭಾರತದೊಂದಿಗೆ ನಡೆದ ಸಮಾವೇಶದಲ್ಲಿ ಭಾರತ ಮತ್ತು ದುಬೈ ಸಾರಿಗೆ ಸಂಪರ್ಕವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಹೈಸ್ಪೀಡ್‌ ರೈಲಿನ ಕುರಿತು ಪ್ರಸ್ತಾಪಿಸಲಾಗಿತ್ತು. ನ್ಯಾಷನಲ್ ಅಡ್ವೆಸೈರ್‌ ಬ್ಯೂರೋ ಲಿಮಿಟೆಡ್‌ ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ಮುಖ್ಯ ಸಲಹೆಗಾರರಾಗಿರುವ ಅಬ್ದುಲ್ಲಾ ಅಲ್‌ಶಾಹಿ ಅವರು, ಮುಂಬರುವ ದಿನಗಳಲ್ಲಿ ಭಾರತದೊಂದಿಗೆ ನಮ್ಮ ವ್ಯಾಪಾರ ಅಭಿವೃದ್ಧಿಗೆ ಮತ್ತೊಂದು ಆಯಾಮ ಸಿಗಲಿದೆ ಎಂದಿದ್ದಾರೆ.

ವರದಿ ಏನಾಗಿದೆ:

ಯುಎಇಯ ಫುಜೈರಾಹ್‌ನಿಂದ ಭಾರತದ ಮುಂಬೈಗೆ ಸಂಪರ್ಕ ಕಲ್ಪಿಸುವ ಜಲಾಂತರ್ಗಾಮಿ ರೈಲ್ವೆ ಯೋಜನೆಯ ಕಾರ್ಯಸಾಧ್ಯತೆ ಕುರಿತಂತೆ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಲು ಸೂಚಿಸಿರುವ ದುಬೈ ಸರ್ಕಾರವು, ಪ್ರಯಾಣಿಕರ ಸೇವೆಯಷ್ಟೇ ಅಲ್ಲದೆ ವಾಣಿಜ್ಯ ವ್ಯಾಪಾರವನ್ನು ಸಹ ಇದೇ ಮಾರ್ಗದಲ್ಲಿ ಆರಂಭಿಸುವ ಉದ್ದೇಶ ಹೊಂದಿದೆ ಎಂದು ನ್ಯಾಷನಲ್ ಅಡ್ವೆಸೈರ್‌ ಬ್ಯೂರೋ ಲಿಮಿಟೆಡ್‌ ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ಮುಖ್ಯ ಸಲಹೆಗಾರರಾಗಿರುವ ಅಬ್ದುಲ್ಲಾ ಅಲ್‌ಶಾಹಿ ದಿ ಕ್ವಿಂಟ್ಗೆ ತಿಳಿಸಿದ್ದಾರೆ.

ಯುಎಇಯ ಫುಜೈರಾಹ್‌ನಿಂದ ಭಾರತದ ಮುಂಬೈಗೆ ಸಂಪರ್ಕ ಕಲ್ಪಿಸುವ ಜಲಾಂತರ್ಗಾಮಿ ರೈಲ್ವೆ ಯೋಜನೆಯ ಬಜೆಟ್‌ ಕುರಿತಂತೆ ಯಾವುದೇ ಮಾಹಿತಿ ಇಲ್ಲ. ಸರ್ಕಾರವೂ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರಕಟಿಸಿಲ್ಲ. ಹಾಗಾಗಿ ಇದೊಂದು ಕಾಗದದ ಹುಲಿಯಂತೆ ಕಾನುತಿದೆ ಎಂದು ಹಲವರು ವ್ಯಂಗ್ಯವಾಡಿದ್ದಾರೆ.

ಹಿಂದೆ ಅಕ್ಕಿ ಕೊಟ್ಟು ಪೆಟ್ರೋಲ್ ತಂದಿದಾಯ್ತು, ಈಗ ನೀರು ಕೊಟ್ಟು ತೈಲ ತರುತ್ತಾರಾ? ಎಂದು ಹಲವರು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. 8 ವರ್ಷದಿಂದ ಉದ್ಯೋಗ ಕೊಡೋಕೆ ಆಗದಿದ್ರು,ಇಂತಹ ಸುಳ್ಳುಗಳಿಗೇನು ಕಡಿಮೆ ಇಲ್ಲ ಎಂದು ಕೆಲವರು ರಿಟ್ವಿಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತ ಮತ್ತು ದುಬೈ ನಡುವೆ ಸಂಪರ್ಕ ಕಲ್ಪಿಸುವ ಜಲಾಂತರ್ಗಾಮಿ ರೈಲ್ವೆ ಯೋಜನೆಯ ಪೋಸ್ಟ್‌ ನ ಸುದ್ದಿಗಳು ಕಳೆದ 4 ವರ್ಷದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಗಿರಕಿ ಹೊಡೆಯುತ್ತಿದೆ. ಆದರೆ ಈ ಯೋಜನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅದರಲ್ಲೂ ಕೆಲವು ಬಲಪಂಥೀಯ ಬೆಂಬಲಿತ ಸಾಮಾಜಿಕ ಮಾಧ್ಯಮಗಳು ಇಂತಹ ಅಧಿಕೃತವಲ್ಲದ ಸುದ್ದಿಗಳನ್ನು ಸುಳ್ಳು ಪೋಸ್ಟ್‌ಗಳಲ್ಲಿ ಹಂಚಿಕೊಳ್ಳುವ ಮೂಲಕ ಜನರನ್ನು ತಪ್ಪುದಾರಿಗೆಳೆಯುತ್ತಿವೆ.

ಕೃಪೆ: ದಿ ಕ್ವಿಂಟ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗಣರಾಜ್ಯೋತ್ಸವದಂದು ಬಿಹಾರದಲ್ಲಿ ಪಾಕ್ ಧ್ವಜವನ್ನು ಹಾರಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights