ಫ್ಯಾಕ್ಟ್‌ಚೆಕ್: ನವ ಜೋಡಿಗಳಾದ ರಾಹುಲ್ ಮತ್ತು ಅಥಿಯಾ ಶೆಟ್ಟಿಗೆ ದೋನಿ ಮತ್ತು ಕೊಹ್ಲಿ ಕೋಟಿ ಮೌಲ್ಯದ ಉಡುಗೊರೆ ನೀಡಿದರೆ?

ಸಾಮಾಜಿಕ ಮಾಧ್ಯಮಗಳಲ್ಲಿ  ಭಾರತ ಕ್ರಿಕೆಟ್ ತಂಡದ ಉಪ ನಾಯಕ, ಬಲಗೈ ಬ್ಯಾಟ್ಸ್ ಮ್ಯಾನ್ ಕೆ ಎಲ್ ರಾಹುಲ್ ಇದೇ ಜನವರಿ 23 ರಂದು ತನ್ನ ದೀರ್ಘಕಾಲದ ಸ್ನೇಹಿತೆ ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಜೊತೆ ವಿವಾಹ ಬಂಧನಕ್ಕೊಳಗಾಗಿದ್ದಾರೆ.

 ಇದೀಗ ಕೆ.ಎಲ್.ರಾಹುಲ್ ಮತ್ತು ಅಥಿಯಾ ಫೋಟೋ ಕೂಡ ಸಖತ್ ವೈರಲ್ ಆಗಿದ್ದು, ಸಪ್ತಪದಿ ತುಳಿದ ರಾಹುಲ್ ಅಥಿಯಾ ಕೈಗೆ ಸಿಹಿ ಮುತ್ತು ನೀಡಿದ ಫೋಟೋಗಳು ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.

ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿಯವರ ಮದುವೆಯೇನೋ ಆಗಿದೆ, ಆದರೆ ನವ ದಂಪತಿಗಳಿಗೆ ನೀಡಲಾದ ವಿವಾಹದ ಉದುಗೊರೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಸಾರವಾಗುತ್ತಿವೆ.

ಭಾರತ-ನ್ಯೂಜಿಲೆಂಡ್ ಸರಣಿಯಿಂದಾಗಿ ಕೆಎಲ್ ರಾಹುಲ್ ವಿವಾಹ ಸಮಾರಂಭದಲ್ಲಿ ಭಾಗವಹಿಸುವುದು ಟೀಂ ಇಂಡಿಯಾ ಆಟಗಾರರಿಗೆ ಸಾಧ್ಯವಾಗಲಿಲ್ಲ. ಆದರೆ ಇವರಿಂದ ಉಡುಗೊರೆಗಳ ಮಹಾಪೂರವೇ ಬಂದಿದೆ. ಈ ಪೈಕಿ ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನೀಡಿರುವ ಉಡುಗೊರೆಗಳು ಭಾರೀ ಸದ್ದು ಮಾಡುತ್ತಿವೆ. ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್  ದಂಪತಿಗಳು, ಬಾಲಿವುಡ್ ಸೆಲೆಬ್ರಿಟಿ ಮತ್ತು ಕ್ರಿಕೆಟ್ ಆಟಗಾರರಿಂದ ಬೆಲೆಬಾಳುವ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ಹಲವು ಮಾಧ್ಯಮಗಳುವರದಿ ಮಾಡಿವೆ.

ಮಾಧ್ಯಮ ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಅವರಿಗೆ ₹ 1.64 ಕೋಟಿ ಮೌಲ್ಯದ ಆಡಿ ಮತ್ತು ಜಾಕಿ ಶ್ರಾಫ್  ಅಥಿಯಾ ಅವರಿಗೆ ₹ 30 ಲಕ್ಷ ಮೌಲ್ಯದ ಚೋಪಾರ್ಡ್ ವಾಚ್ ನೀಡಿದ್ದಾರೆ.  ವಿರಾಟ್ ಕೊಹ್ಲಿಯಿಂದ ₹ 2 ಕೋಟಿಗೂ ಹೆಚ್ಚು ಮೌಲ್ಯದ BMW ಕಾರನ್ನು ಮತ್ತು ಎಂಎಸ್ ಧೋನಿಯಿಂದ ₹ 80 ಲಕ್ಷ ಮೌಲ್ಯದ ಕವಾಸಕಿ ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ನಟ ಅರ್ಜುನ್ ಕಪೂರ್ ಅವರು ಅಥಿಯಾ ಅವರಿಗೆ ₹ 1.5 ಕೋಟಿ ಬೆಲೆಯ ವಜ್ರದ ಬ್ರೇಸ್ಲೆಟ್ ನೀಡಿದ್ದಾರೆ ಎಂದು ಜೀ  ಕನ್ನಡ ನ್ಯೂಸ್ ವರದಿ ಮಾಡಿದೆ.

ಮಾಧ್ಯಮಗಳ ಭಾರೀ ಉದುಗೊರೆ ಸುದ್ದಿ ಸುಳ್ಳು ಎಂದ ಕುಟುಂಬ:

ನವವಿವಾಹಿತರಾದ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮದುವೆಗೆ ದುಬಾರಿ ಉಡುಗೊರೆಯಾಗಿ ರಿಯಲ್ ಎಸ್ಟೇಟ್(ಸೈಟು), ಕಾರು ಮತ್ತು ಆಭರಣಗಳನ್ನು ಪಡೆದಿದ್ದಾರೆ ಎಂಬ ವರದಿಗಳು ಸುಳ್ಳು ಎಂದು ಅಥಿಯಾ ಶೆಟ್ಟಿ ಕುಟುಂಬವು ಸ್ಪಷ್ಟಪಡಿಸಿದೆ.  ಮಾಧ್ಯಮಗಳಲ್ಲಿ “ತಪ್ಪಾದ ಮಾಹಿತಿಯನ್ನು” ಪ್ರಕಟಿಸದಂತೆ ಮಧುವಿನ ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ  ಎಂದು NDTV ವರದಿ ಮಾಡಿದೆ.

 

ಅಥಿಯಾ ಶೆಟ್ಟಿ ಅವರ ಕುಟುಂಬವು ಅಂತಹ ಉಡುಗೊರೆಗಳ ವರದಿಗಳನ್ನು ನಿರಾಕರಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್  ವರದಿ ಮಾಡಿದೆ. ಜನವರಿ 26, 2023 ರ ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿ “ಶೆಟ್ಟಿ ಕುಟುಂಬದ ಆಪ್ತರು ನವವಿವಾಹಿತರಿಗೆ ಅಂತಹ ಯಾವುದೇ ವಸ್ತುಗಳನ್ನು ನೀಡಲಾಗಿಲ್ಲ ಎಂದು ಹೇಳಿದೆ.

suniel shetty

“ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರಿಗೆ ಉಡುಗೊರೆಗಳ ಬಗ್ಗೆ ಪ್ರಕಟವಾದ ಎಲ್ಲಾ ವರದಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ಸತ್ಯಕ್ಕೆ ದೂರವಾಗಿದ್ದು, ದಯವಿಟ್ಟು ಸಾರ್ವಜನಿಕ ಡೊಮೇನ್‌ನಲ್ಲಿ ಅಂತಹ ತಪ್ಪು ಮಾಹಿತಿಯನ್ನು ಪ್ರಕಟಿಸುವ ಮೊದಲು ನಮ್ಮೊಂದಿಗೆ ವಿವರಗಳನ್ನು ಖಚಿತಪಡಿಸಲು ಮಾಧ್ಯಮ ಮಿತ್ರರನ್ನು ನಾವು ಕೋರುತ್ತೇವೆ” ಎಂದು ವಧುವಿನ ತಂದೆ ಸುನೀಲ್ ಶೆಟ್ಟಿ ನೀಡಿದ ಹೇಳಿಕೆಯನ್ನು ಮಾಧ್ಯಮಗಳ ಮುಂದೆ  ಸುನೀಲ್ ಶೆಟ್ಟಿಯ ವಕ್ತಾರರು ಬಿಡುಗಡೆ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, KL ರಾಹುಲ್ ಮತ್ತ ಅಥಿಯಾ ಶೆಟ್ಟಿ ಮದುವೆಗೆ ಕ್ರಿಕೆಟ್ ಮತ್ತು ಸಿನಿಮಾ ಸೆಲೆಬ್ರೆಟಿ ಭಾರೀ ಉಡುಗೊರೆ ನೀಡಿದ್ದಾರೆ ಎಂಬುದು ಸುಳ್ಳು ಮತ್ತು ಆಧಾರರಹಿತ ಎಂದು ಅಥಿಯಾ ಶೆಟ್ಟಿ ಕುಟುಂಬವು ಸ್ಪಷ್ಟಪಡಿಸಿದೆ. ಇಂತಹ ಸುಳ್ಳು ಸುದ್ದಿಗಳನ್ನು ಪ್ರಕಟಿಸದಂತೆ ಸುನೀಲ್ ಶೆಟ್ಟಿ ಮನವಿ ಮಾಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನಟ ಅಕ್ಷಯ್ ಕುಮಾರ್ ಭಾರತೀಯ ಸೇನೆಗಾಗಿ ನೀಡಿದ ಸಲಹೆಯನ್ನು ಪ್ರಧಾನಿ ಮೋದಿ ಸ್ವೀಕರಿಸಿದ್ದು ನಿಜವೇ?


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights